Chikkamagaluru: H1N1 ಆತಂಕಕ್ಕೆ ಕೊಂಚ ನೆಮ್ಮದಿ; 20 ಮಂದಿ ಗುಣಮುಖ, ಹೊಸ ಪ್ರಕರಣ ಪತ್ತೆಯಾಗಿಲ್ಲ

Chikkamagaluru: ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈರಲ್ ಫೀವರ್ ಹಾಗೂ H1N1 ಪ್ರಕರಣಗಳ ಕುರಿತು ಆತಂಕದ ನಡುವೆ ಈ ದಿನ ಸಮಾಧಾನಕರ ಸುದ್ದಿ ಹೊರಬಿದ್ದಿದೆ.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಸೋಂಕಿಗೆ ಒಳಗಾಗಿದ್ದ 24 ಮಂದಿಯ ಪೈಕಿ 20 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹಾಗೂ ಹೊಸದಾಗಿ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದಿಲ್ಲ.
ಜಿಲ್ಲೆಯಲ್ಲಿ ಒಟ್ಟು 107 ಮಂದಿಯನ್ನು H1N1 ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲ ವರದಿಗಳು ನೆಗೆಟಿವ್ ಬಂದಿದ್ದು, ಸದ್ಯಕ್ಕೆ ಹೊಸ ಪ್ರಕರಣಗಳು ಪತ್ತೆಯಾಗಿರುವುದಿಲ್ಲ.
ತಾಲೂಕುವಾರು ಪರೀಕ್ಷೆ:
- ಚಿಕ್ಕಮಗಳೂರು ತಾಲೂಕಿನಲ್ಲಿ: 28
- ಎನ್.ಆರ್.ಪುರ: 27
- ಕೊಪ್ಪ: 19
- ತರೀಕೆರೆ: 18
- ಕಡೂರು: 9
- ಶೃಂಗೇರಿ: 4
- ಮೂಡಿಗೆರೆ: 2
ಇಷ್ಟು ಮಂದಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಚಿಕ್ಕಮಗಳೂರು, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ದಾಖಲಾಗಿದ್ದ ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಕೊಪ್ಪದಲ್ಲಿ 7 ಮಂದಿ, ತರೀಕೆರೆಯಲ್ಲಿ 5 ಮಂದಿ ಗುಣಮುಖರಾಗಿದ್ದಾರೆ.
ಇದನ್ನು ಓದಿ: India Post GDS: ಅಂಚೆ ಇಲಾಖೆಯಲ್ಲಿ 23,757 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುನ್ನೆಚ್ಚರಿಕೆ:
H1N1 ಸೋಂಕು ತಗಲುವ ಸಂದರ್ಭದಲ್ಲಿ ಜ್ವರ, ಕೆಮ್ಮು, ಮೈ-ಕೈ ನೋವು, ನೆಗಡಿ, ಗಂಟಲು ನೋವು ಹಾಗೂ ಸುಸ್ತು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂಥ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
ಸೋಂಕು ಹರಡುವುದನ್ನು ತಡೆಗಟ್ಟುವುದು ಸಾರ್ವಜನಿಕರ ಕರ್ತವ್ಯವಾಗಿದೆ. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಇತರ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.
ಇದನ್ನು ಓದಿ: Horoscope August 29 2026: 12 ರಾಶಿಗಳ ಇಂದಿನ ದಿನ ಭವಿಷ್ಯ