Chikkamagaluru: ಪೊಲೀಸರ ದಾಳಿಗೆ ಹೆದರಿ ಓಡುವಾಗ ಬಿದ್ದು ವ್ಯಕ್ತಿ ಸಾವು; ಜೂಜಾಟ ಆರೋಪ

Chikkamagaluru: ಕಾಫಿ ತೋಟ ಹಾಗೂ ಬಾಸಪುರ ಅರಣ್ಯ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ ಮೇಲೆ, ಪೊಲೀಸರಿಗೆ ಹೆದರಿ ಓಡುವಾಗ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಸಮೀಪ ನಡೆದಿದೆ.
ಮೃತರನ್ನು ಗುಡ್ಡೇಕೊಪ್ಪ ಗ್ರಾಮದ ರಮೇಶ್ (35) ಎಂದು ಗುರುತಿಸಲಾಗಿದೆ.
ಬಾಸಪುರ ಅರಣ್ಯ ವ್ಯಾಪ್ತಿಯ ಕಾಫಿ ತೋಟದಲ್ಲಿ ನಿರಂತರವಾಗಿ ಅಂದರ್-ಬಾಹರ್ ಜೂಜಾಟ ನಡೆಯುತ್ತದೆ ಎಂಬ ಆರೋಪ ಕೇಳುತ್ತಿತ್ತು. ಖಚಿತ ಮಾಹಿತಿ ಪಡೆದ ಬಾಳೆಹೊನ್ನೂರು ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದಂತಹ ಒಂಬತ್ತು ಮಂದಿ ಜೂಜುಕೋರರಲ್ಲಿ ಇಬ್ಬರನ್ನು ಹೋಲಿಸಿರುವ ವಶಕ್ಕೆ ಪಡೆದಿದ್ದಾರೆ. ಉಳಿದವರು ಪೊಲೀಸರಿಗೆ ಹೆದರಿ ಕಾಡಿನ ಕಡೆಗೆ ಓಡಿದ್ದಾರೆ.
ಅವರೊಂದಿಗೆ ಓಡುತ್ತಿದ್ದ ರಮೇಶ್ ಕಾಲು ಜಾರಿ ಬಂಡೆಗೆ ತಲೆ ಬಡಿದು, ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಕಳೆದ ರಾತ್ರಿ ನಡೆದ ಈ ಘಟನೆ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
Read this: Chikkamagaluru: H1N1 ಸೋಂಕಿಗೆ ಒಳಗಾಗಿದ್ದ 20 ಮಂದಿ ಗುಣಮುಖ