Chikkamagaluru: ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ

Spread the love

Chikkamagaluru:ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳ್ಳತನ; ₹2.33 ಲಕ್ಷ ಮೌಲ್ಯದ ವಸ್ತು ಕದ್ದ ಖದೀಮರು

Chikkamagaluru bus stand: Thieves steal valuables from a passenger.
Chikkamagaluru bus stand: Thieves steal valuables from a passenger.

Chikkamagaluru:ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜನದಟ್ಟಣೆಯನ್ನು ಬಂಡವಾಳ ಮಾಡಿಕೊಂಡು ಖದೀಮರು ಕೈಚಳಕ ತೋರಿಸಿದ್ದಾರೆ. ಪ್ರಯಾಣಿಕರ ಗಮನವನ್ನು ಬೇರೆಡೆ ಸೆಳೆದು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರು ವೈಯಕ್ತಿಕ ಕೆಲಸ ಮುಗಿಸಿ ಬೇಲೂರಿಗೆ ತೆರಳಲು ಪ್ಲಾಟ್‌ಫಾರ್ಮ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಹಾಗೂ ಈ ಸಮಯದಲ್ಲಿ ಅವರ ಬ್ಯಾಗ್‌ನಲ್ಲಿದ್ದ ವಸ್ತುಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಬ್ಯಾಗ್‌ನಲ್ಲಿ ಸುಮಾರು 15.138 ಗ್ರಾಂ ತೂಕದ ಚಿನ್ನ ಹಾಗೂ ವಜ್ರ ಮಿಶ್ರಿತ ಡೈಮಂಡ್ ಬ್ರೇಸ್ಲೆಟ್ ಇದ್ದು, ಇದರ ಮೌಲ್ಯ ಸುಮಾರು ₹2.33 ಲಕ್ಷ ಎಂದು ತಿಳಿದುಬಂದಿದೆ.

ಮಹಿಳೆಯು ಬಸ್ ಹತ್ತಿದ ನಂತರ ಕೈಯಲ್ಲಿದ್ದ ಬ್ಯಾಗ್ ಪರಿಶೀಲಿಸಿದಾಗ ವಸ್ತುಗಳು ಇಲ್ಲದಿರುವುದು ಗಮನಕ್ಕೆ ಬಂದಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read this:Koppa: ಕೊಪ್ಪ; 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದೊಯ್ದ ಕೆಲಸದಾಳು

ಪ್ರಯಾಣಿಕರ ದಟ್ಟಣೆ ಇರುವ ಬಸ್ ನಿಲ್ದಾಣಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಹಾಗೂ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

Read this:Chikkamagaluru: H1N1 ಸೋಂಕಿಗೆ ಒಳಗಾಗಿದ್ದ 20 ಮಂದಿ ಗುಣಮುಖ

Leave a Comment

Scroll to Top