Chikkamagaluru: ಜಿಲ್ಲೆಯಲ್ಲಿ H1N1 ಪ್ರಕರಣಗಳ ಸಂಖ್ಯೆ 27ಕ್ಕೆ ಏರಿಕೆ; 20 ಮಂದಿ ಗುಣಮುಖ

Chikkamagaluru:ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಚ್1ಎನ್1 (H1N1) ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಆಗಸ್ಟ್ 29ರ ವರೆಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27ಕ್ಕೆ ತಲುಪಿದೆ. ಈ ಪೈಕಿ 20 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಇದುವರೆಗೂ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 124 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಎನ್.ಆರ್.ಪುರ, ಚಿಕ್ಕಮಗಳೂರು, ಕೊಪ್ಪ, ತರೀಕೆರೆ, ಕಡೂರು, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿರುವಂಥದ್ದು.
ದಾಖಲಾಗಿರುವ ಒಟ್ಟು ಪ್ರಕರಣಗಳಲ್ಲಿ ಕೊಪ್ಪ ತಾಲೂಕಿನಲ್ಲಿ 8, ತರೀಕೆರೆಯಲ್ಲಿ 3, ಎನ್.ಆರ್.ಪುರದಲ್ಲಿ 6, ಚಿಕ್ಕಮಗಳೂರಿನಲ್ಲಿ 3, ಶೃಂಗೇರಿಯಲ್ಲಿ 2 ಹಾಗೂ ಕಡೂರು ಮತ್ತು ಮೂಡಿಗೆರೆ ತಾಲೂಕುಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
Read this:Kadur:ನಾಪತ್ತೆಯಾಗಿದ್ದ ಶಿಕ್ಷಕನ ಶವ ತೋಟದಲ್ಲಿ ಪತ್ತೆ
ಈ ನಿಟ್ಟಿನಲ್ಲಿ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
Read this:Chikkamagaluru:ಕಾಫಿನಾಡಿನಲ್ಲಿ ಮತ್ತೆ ನಕಲಿ ತುಪ್ಪದ ದಂಧೆ