Chikkamagaluru:ಕಾಫಿ ತೋಟದಲ್ಲಿ ಅವಕಾಡೊ ಕೃಷಿ; ಮೋದಿ ಮೆಚ್ಚುಗೆ

Spread the love

Chikkamagaluru: ಚಿಕ್ಕಮಗಳೂರು ರೈತರ ಕೃಷಿ ಪ್ರಯೋಗಕ್ಕೆ ಮೋದಿ ಮೆಚ್ಚುಗೆ; ಕಾಫಿ ತೋಟದ ನಡುವೆ ಅವಕಾಡೊ ಬೆಳೆ

PM Modi praises Chikkamagaluru farmers for growing avocados alongside coffee plantations during Mann Ki Baat.
PM Modi praises Chikkamagaluru farmers for growing avocados alongside coffee plantations during Mann Ki Baat.

Chikkamagaluru: ಕಾಫಿ ಬೆಳೆಗೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ರೈತರು ಇದೀಗ ಕೃಷಿಯಲ್ಲಿ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಾಫಿ ತೋಟಗಳ ಮಧ್ಯೆ ಅವಕಾಡೊ ಬೆಳೆಯುವ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿರುವ ರೈತರು ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಗಸ್ಟ್ 30ರಂದು ಪ್ರಸಾರವಾದ 137ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶದ ವಿವಿಧ ಭಾಗಗಳಲ್ಲಿ ಅವಕಾಡೊ ಕೃಷಿ ಕೈಗೊಂಡಿರುವ ರೈತರ ಕುರಿತಾಗಿ ಪ್ರಸ್ತಾಪ ಮಾಡಿದರು. ಇದೇ ವೇಳೆ ಕರ್ನಾಟಕದ ಚಿಕ್ಕಮಗಳೂರಿನ ರೈತರು ಈ ಬೆಳೆಯನ್ನು ಬೆಳೆಸುತ್ತಿರುವುದನ್ನು ವಿಶೇಷವಾಗಿ ಉಲ್ಲೇಖ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಾಮಾನ್ಯವಾಗಿ ಕಾಫಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಾಗೂ ಇದರ ಜೊತೆಗೆ ಕೆಲವು ರೈತರು ಅವಕಾಡೊ ಅಥವಾ ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇದರಿಂದ ಈಗಾಗಲೇ ಇರುವ ಕಾಫಿಗೆ ಅಡ್ಡಿಯಾಗದಂತೆ ಹೆಚ್ಚುವರಿ ಲಾಭವನ್ನು ಪಡೆಯಬಹುದು ಹಾಗೂ ಹೆಚ್ಚುವರಿ ಬೆಳೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಪ್ರಧಾನಿ ಹೇಳುವಂತೆ, ಕಾಫಿ ತೋಟಗಳ ಮಧ್ಯೆ ಈ ಹಣ್ಣನ್ನು ಬೆಳೆಯುವುದರಿಂದ ಕಾಫಿ ಹಾಗೂ ಕಾಳುಮೆಣಸಿನ ಜೊತೆಗೆ ಮತ್ತೊಂದು ಆದಾಯದ ಮೂಲ ಸೃಷ್ಟಿಯಾಗುತ್ತದೆ, ನೆರವಾಗುತ್ತದೆ ಎಂದಿದ್ದಾರೆ. ಮತ್ತು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವಕಾಡೊ ಹಣ್ಣಿನ ಹೆಚ್ಚುತ್ತಿರುವ ಜನಪ್ರಿಯತೆಯ ಕುರಿತಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಹಿಂದೆ ಭಾರತದಲ್ಲಿ ಈ ಹಣ್ಣಿನ ಪರಿಚಯ ಹೆಚ್ಚಿನ ಜನರಿಗೆ ಇರಲಿಲ್ಲ. ಈಗ ಆರೋಗ್ಯ ಮತ್ತು ಪ್ರೀಮಿಯಂ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ.

ಆಂಧ್ರಪ್ರದೇಶದಲ್ಲಿ ಕಡಪ್ಪದ ವರದರಾಜ್ ಎಂಬುವರು ಟೊಮೆಟೊ ಮತ್ತು ಬಾಳೆ ಬೆಳೆದ ನಂತರ ಅವಕಾಡೊ ಕೃಷಿಯತ್ತ ತಿರುಗಿದ ಉದಾಹರಣೆಯನ್ನು ಮೋದಿ ಹೇಳಿದರು. ಅವರು ಇದುವರೆಗೂ ಸುಮಾರು 4 ಟನ್ ಅವಕಾಡೊ ಉತ್ಪಾದನೆ ಮಾಡಿದ್ದು, ಸ್ಥಳೀಯ ಅಂಗಡಿಗಳಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Read this:Chikkamagaluru:ಕಾಫಿನಾಡಿನಲ್ಲಿ ಮತ್ತೆ ನಕಲಿ ತುಪ್ಪದ ದಂಧೆ

ಹಾಗೂ ತಮಿಳುನಾಡಿನ ಕೊಡೈಕೆನಾಲ್‌ನ ಚಂದ್ರಶೇಖರನ್ ಅವರು ಅರ್ಧ ಹೆಕ್ಟೇರ್ ಪ್ರದೇಶದಲ್ಲಿ ಅವಕಾಡೊ ಬೆಳೆದು ಉತ್ತಮ ಬೆಲೆ ಪಡೆಯುತ್ತಿದ್ದಾರೆ.

ಹಾಗೂ ಪ್ರಧಾನಿ ಮೋದಿಯವರು ಹೇಳಿದಂತೆ, ಪ್ರಸ್ತುತ ನಗರ ಪ್ರದೇಶಗಳಲ್ಲಿ ಅವಕಾಡೊ ಟೋಸ್ಟ್ ಸೇರಿದಂತೆ ಹಲವು ಡಯಟ್‌ಗೆ ಸಂಬಂಧಪಟ್ಟ ಖಾದ್ಯಗಳಲ್ಲಿ ಈ ಹಣ್ಣನ್ನು ಬಳಸಲಾಗುತ್ತದೆ. ಇದರಿಂದ ಇದರ ಬೇಡಿಕೆಯು ಕೂಡ ಹೆಚ್ಚುತ್ತಿದ್ದು, ರೈತರಿಗೆ ಹೆಚ್ಚಿನ ಆದಾಯ ಗಳಿಸಲು ಸಹಾಯವಾಗುತ್ತದೆ.

Read this:Chikkamagaluru: ಚಿಕ್ಕಮಗಳೂರು ಜಿಲ್ಲೆಯಲ್ಲಿ H1N1 ಪ್ರಕರಣ 27ಕ್ಕೆ ಏರಿಕೆ

ಆಧುನಿಕತೆಗೆ ಬಂದಂತೆ ಜನರು ಫಿಟ್ನೆಸ್ ಕುರಿತಾಗಿ ಹೆಚ್ಚಿನ ಗಮನವಹಿಸುತ್ತಿದ್ದಾರೆ. ಹಾಗೂ ಈ ಫಿಟ್ನೆಸ್ ಪ್ರಯಾಣದಲ್ಲಿ ಅವರು ಅವಕಾಡೊ ಅನ್ನು ಕೂಡ ತಮ್ಮೊಂದಿಗೆ ಕರೆದೊಯ್ಯುತ್ತಿರುವಂಥದ್ದು. ಹಾಗೂ ಇದು ಈ ಹಣ್ಣಿನ ಅವಶ್ಯಕತೆಯನ್ನು ಹೆಚ್ಚಿಸುತ್ತದೆ.

ಕಾಫಿ ಹಾಗೂ ಕಾಳುಮೆಣಸಿನಂತಹ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೊಸ ಬೆಳೆಗಳನ್ನು ಅಳವಡಿಸಿಕೊಳ್ಳುತ್ತಿರುವ ಚಿಕ್ಕಮಗಳೂರು ರೈತರ ಪ್ರಯತ್ನ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.

ಹೆಚ್ಚಿನ ಮಾಹಿತಿಗಾಗಿ: Deccan herald 

Leave a Comment

Scroll to Top