Horoscope August 31: ಇಂದಿನ ರಾಶಿ ಭವಿಷ್ಯ: ಮುಖ್ಯ ಅಂಶಗಳು

Horoscope August 31: ಇಂದಿನ ದಿನ 12 ರಾಶಿಗಳಿಗೂ ವಿಭಿನ್ನ ರೀತಿಯ ಫಲಿತಾಂಶಗಳನ್ನು ನೀಡಲಿದೆ. ಮೇಷದಿಂದ ಮೀನದವರೆಗೆ ಇಂದಿನ ರಾಶಿಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ.
ಮೇಷ ರಾಶಿ
ಆರೋಗ್ಯದ ಬಗ್ಗೆ ಇವತ್ತು ಗಮನ ಇರಬೇಕು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಯೋಚಿಸಬೇಕು. ಹಣದ ದುರ್ಬಳಕೆಯನ್ನು ತಪ್ಪಿಸಿ.
ವೃಷಭ ರಾಶಿ
ಕೆಲಸಗಳಲ್ಲಿ ಇಂದು ಉತ್ತಮ ಪ್ರಗತಿಯಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು.
ಮಿಥುನ ರಾಶಿ
ಹೊಸ ಅವಕಾಶಗಳು ಒದಗಿ ಬರಬಹುದು. ತಮ್ಮ ಕೆಲಸದಲ್ಲಿ ಗಮನವನ್ನು ಕೇಂದ್ರೀಕರಿಸುವುದು ಬಹಳ ಮುಖ್ಯವಾಗುತ್ತದೆ.
Read this:Chikkamagaluru: ಚಿಕ್ಕಮಗಳೂರು ಜಿಲ್ಲೆಯಲ್ಲಿ H1N1 ಪ್ರಕರಣ 27ಕ್ಕೆ ಏರಿಕೆ
ಕಟಕ ರಾಶಿ
ವ್ಯವಹಾರದಲ್ಲಿ ಹೊಸ ಪ್ರಯೋಗಗಳನ್ನು ನಡೆಸುವುದು ಇಂದು ಒಳ್ಳೆಯದಲ್ಲ. ಹಾಗೂ ಕೋಪವನ್ನು ನಿಯಂತ್ರಿಸಬೇಕಾಗುತ್ತದೆ.
ಸಿಂಹ ರಾಶಿ
ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯಿಂದ ಯೋಚಿಸುವುದು ಅಗತ್ಯ. ಹಾಗೂ ಭಾವನಾತ್ಮಕವಾಗಿ ಸ್ವಲ್ಪ ಏರಿಳಿತಗಳು ಇರಬಹುದು.
ಕನ್ಯಾ ರಾಶಿ
ಇಂದು ಅಷ್ಟಮ ಚಂದ್ರ ಇರುವುದರಿಂದಾಗಿ ಹೆಚ್ಚುವರಿಯಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅನಗತ್ಯವಾದ ಒತ್ತಡವನ್ನು ತಪ್ಪಿಸಬೇಕು.
ತುಲಾ ರಾಶಿ
ಇವತ್ತಿನ ದಿನ ಉತ್ತಮವಾಗಿದೆ. ತಮ್ಮ ಕೆಲಸ ಹಾಗೂ ವೈಯಕ್ತಿಕ ವಿಚಾರ ಎರಡರಲ್ಲೂ ಸಮತೋಲನತೆಯನ್ನು ಸಾಧಿಸಬಹುದು.
ವೃಶ್ಚಿಕ ರಾಶಿ
ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ಮುಖ್ಯವಾದ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತಮವಾದ ಸಮಯವಿದೆ.
ಧನು ರಾಶಿ
ಹೊಸ ಯೋಜನೆಗಳ ಬಗ್ಗೆ ಇವತ್ತು ಆಲೋಚನೆ ಮಾಡಬಹುದು. ಆದರೂ ಕೂಡ ಆತುರದ ನಿರ್ಧಾರಗಳನ್ನು ಕೈಗೊಳ್ಳಬಾರದು.
ಮಕರ ರಾಶಿ
ಇವತ್ತು ಹಣಕಾಸು ಮತ್ತು ಕೆಲಸದ ವಿಷಯಗಳಲ್ಲಿ ಅನುಕೂಲಕರವಾದ ಬೆಳವಣಿಗೆಗಳು ಸಾಧ್ಯವಾಗುತ್ತದೆ.
ಕುಂಭ ರಾಶಿ
ತಮಗೆ ಬರಬೇಕಾದಂತಹ ಬಾಕಿ ಹಣ ಬರುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಆದಾಯ ಹೆಚ್ಚಾಗುವ ಸೂಚನೆ ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸಬೇಕು.
ಮೀನ ರಾಶಿ
ಇಂದು ಮೀನ ರಾಶಿಯಲ್ಲೇ ಚಂದ್ರ ಇರುವುದರಿಂದಾಗಿ ಮನಸ್ಸಿನ ವಿಚಾರಗಳು ಮುಖ್ಯವಾಗುವುದು. ಶಾಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
Read this:Chikkamagaluru:ಕಾಫಿ ತೋಟದಲ್ಲಿ ಅವಕಾಡೊ ಕೃಷಿ; ಮೋದಿ ಮೆಚ್ಚುಗೆ*