Bigg Boss Kannada: ಆರೋಗ್ಯ ಸಮಸ್ಯೆಯಿಂದ ಕುಮಾರಿ ಎಕ್ಸಿಟ್; ಸಿಕ್ಕಿತು ₹5 ಲಕ್ಷ ಮತ್ತು ಜಾಬ್ ಆಫರ್

Spread the love

Bigg Boss Kannada: ಆರೋಗ್ಯ ಸಮಸ್ಯೆಯಿಂದ ಶೋನಿಂದ ಹೊರಬಂದ ಕುಮಾರಿಗೆ ₹5 ಲಕ್ಷ; ದುಬೈನಲ್ಲಿ ಜಾಬ್ ಆಫರ್!

Bigg Boss Agnipariksha contestant Kumari exits the show due to health issues.(Picture Source:Udayavani)
Bigg Boss Agnipariksha contestant Kumari exits the show due to health issues.(Picture Source:Udayavani)

Bigg Boss Kannada: ಬಿಗ್ ಬಾಸ್ ಅಗ್ನಿಪರೀಕ್ಷೆ ರಿಯಾಲಿಟಿ ಶೋನಲ್ಲಿ ತಮ್ಮ ಮುಗ್ಧತೆ ಮತ್ತು ಮಾತಿನ ಶೈಲಿಯಿಂದ ವೀಕ್ಷಕರ ಗಮನ ಸೆಳೆದಿದ್ದ ಕುಮಾರಿ ಇದೀಗ ಅನಾರೋಗ್ಯದ ಕಾರಣದಿಂದ ಅರ್ಧಕ್ಕೆ ಹೊರಬಂದಿದ್ದಾರೆ.

ವೈದ್ಯರ ಸಲಹೆಯ ಮೇರೆಗೆ ಅವರ ಆಟವನ್ನು ಮುಂದುವರಿಸಲು ಸಾಧ್ಯವಾಗದೆ ನಿರ್ಗಮಿಸಿದ್ದಾರೆ.

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಕುಮಾರಿ ಕಾಣಿಸದೆ ಇದ್ದಾಗ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಅನಾರೋಗ್ಯದ ಕಾರಣದಿಂದಾಗಿ ಇದೀಗ ಕುಮಾರಿ ಆಟವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕಾರ್ಯಕ್ರಮದಿಂದ ಹೊರಬರುವಾಗ ಭಾವುಕರಾದ ಕುಮಾರಿ, ದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಿಂದ ಹೊರಬಂದರೂ ಕೂಡ ಇದೀಗ ದೊಡ್ಡ ಅವಕಾಶ ಅವರಿಗೆ ದೊರಕಿದೆ. ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿ ಅವರಿಗೆ ₹5 ಲಕ್ಷ ನಗದು ಸಹಾಯಧನವನ್ನು ನೀಡಿದೆ.

ಅಲ್ಲದೆ, ಅವರು ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಕರ್ನಾಟಕ ಅಥವಾ ದುಬೈನಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಕೆಲಸ ನೀಡುವ ಅವಕಾಶವನ್ನು ನೀಡಲಾಗಿದೆ.

ಹಾಗೂ, ಕುಮಾರಿ ಮತ್ತೆ ಶೋಗೆ ಮರಳಬೇಕು ಅಥವಾ ವೈಲ್ಡ್‌ಕಾರ್ಡ್ ಮೂಲಕ ಅವಕಾಶ ನೀಡಬೇಕು ಎಂದು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Read this:Horoscope August 31:ಆಗಸ್ಟ್ 31ರ ರಾಶಿಭವಿಷ್ಯ ಇಲ್ಲಿದೆ

Leave a Comment

Scroll to Top