Chikkamagaluru:ಬಸ್ ನಿಲ್ದಾಣದಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಳವು; ₹5.14 ಲಕ್ಷ ನಷ್ಟ

Chikkamagaluru: ಇತ್ತೀಚಿಗಷ್ಟೇ ಚಿಕ್ಕಮಗಳೂರು KSRTC ಬಸ್ ನಿಲ್ದಾಣದಲ್ಲಿ ಕಳ್ಳತನದ ಘಟನೆಯನ್ನು ಪತ್ತೆಯಾಗಿತ್ತು. ಇದೀಗ ಮತ್ತೊಂದು ಅದೇ ರೀತಿಯ ಪ್ರಕರಣ ನಡೆದಿದೆ.
ಪ್ರಯಾಣಿಕರ ದಟ್ಟಣೆಯ ಲಾಭ ಪಡೆದ ಖದೀಮರು, ಮಹಿಳೆಯೊಬ್ಬರ ಕೊರಳಲ್ಲಿ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾರೆ.
ಚಿಕ್ಕಮಗಳೂರಿನ ಮೂಗ್ತಿಹಳ್ಳಿ ನಿವಾಸಿಯಾದ ಅಶ್ವಿನಿ ಎಂಬುವರು ತಮ್ಮ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣವನ್ನು ಕಳೆದುಕೊಂಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಪ್ರವಾಸಿ ಕಾರ್ಯಕ್ರಮ ಮುಗಿಸಿಕೊಂಡು ಆಲ್ದೂರಿಗೆ ತೆರಳಲು KSRTC ಬಸ್ ನಿಲ್ದಾಣಕ್ಕೆ ಆಗಮಿಸಿದರು ಅಶ್ವಿನಿ. ಸಂಜೆ ವೇಳೆಗೆ ಶೃಂಗೇರಿ ಮಾರ್ಗದ ಬಸ್ ಹತ್ತುವಾಗ ಪ್ರಯಾಣಿಕರ ನೂಕುನುಗ್ಗಲು ಉಂಟಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಮಹಿಳೆಯ ಗಮನವನ್ನು ಬೇರೆಡೆ ತಿಳಿದು, 33 ಗ್ರಾಂ ತೂಕದ, ಅಂದಾಜು 5.14 ಲಕ್ಷ ರೂಪಾಯಿ ಬೆಲೆಯ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾರೆ.
ಮನೆಗೆ ತಲುಪಿದ ಬಳಿಕ ಕಳ್ಳತನವಾಗಿದೆ ಎಂದು ಗಮನಿಸಿದ ಅಶ್ವಿನಿ, ದೂರು ನೀಡಿದ್ದಾರೆ. ಬಸ್ ನಿಲ್ದಾಣದ ಸಿಸಿಟಿವಿಗಳಲ್ಲಿ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read this:N R Pura: ಭದ್ರಾ ಹಿನ್ನೀರಿನಲ್ಲಿ ಈಜಲು ತೆರಳಿದ್ದ 23 ವರ್ಷದ ಯುವಕ ಸಾವು