NIC Recruitment: NICನಲ್ಲಿ 376 ಹುದ್ದೆಗಳ ನೇಮಕಾತಿ; ಸೆ.30ರೊಳಗೆ ಅರ್ಜಿ

Spread the love

NIC Recruitment: NICನಲ್ಲಿ 376 ಹುದ್ದೆಗಳ ನೇಮಕಾತಿ; ಸೆ.30ರೊಳಗೆ ಅರ್ಜಿ ಸಲ್ಲಿಸಿ.

NIC Recruitment 2026 for 376 Scientific and Technical Assistant-A posts.
NIC Recruitment 2026 for 376 Scientific and Technical Assistant-A posts.

NIC Recruitment: ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಪದವೀಧರರಿಗೆ ಇಲ್ಲಿದೆ ಉತ್ತಮ ಅವಕಾಶ. ರಾಷ್ಟ್ರೀಯ ಮಾಹಿತಿ ಕೇಂದ್ರ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಪಡಿಸಿದೆ.

NICಯಲ್ಲಿ Scientific/Technical Assistant-A ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 376 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸತ್ತಾ ಅಭ್ಯರ್ಥಿಗಳು ಸೆಪ್ಟೆಂಬರ್ 1ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30, 2026 ಸಂಜೆ 5:30 ಆಗಿರುತ್ತದೆ.

NIC Recruitment 2026: ನೇಮಕಾತಿಯ ಪ್ರಮುಖ ಮಾಹಿತಿ

ವಿವರಮಾಹಿತಿ
ನೇಮಕಾತಿ ಸಂಸ್ಥೆNational Informatics Centre (NIC)
ಹುದ್ದೆScientific/Technical Assistant-A
ಒಟ್ಟು ಹುದ್ದೆಗಳು376
ಹುದ್ದೆಯ ವರ್ಗGroup-B S&T (Non-Gazetted)
ವೇತನ ಶ್ರೇಣಿ₹35,400 – ₹1,12,400
ಅರ್ಜಿ ಆರಂಭಸೆಪ್ಟೆಂಬರ್ 1, 2026
ಅರ್ಜಿ ಕೊನೆಯ ದಿನಸೆಪ್ಟೆಂಬರ್ 30, 2026
ಆಯ್ಕೆ ವಿಧಾನGATE ಅಂಕಗಳ ಆಧಾರದ ಮೇಲೆ
ಅರ್ಜಿ ವಿಧಾನಆನ್‌ಲೈನ್
ಅಧಿಕೃತ ವೆಬ್‌ಸೈಟ್recruitment.nic.in

 

376 ಹುದ್ದೆಗಳು:

NIC ನೇಮಕಾತಿಯಲ್ಲಿ ಪ್ರಮುಖವಾಗಿ ಮೂರು ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

  • Computer Sciences & Information Technology – 300 ಹುದ್ದೆಗಳು
  • Electronics and Communication Engineering – 26 ಹುದ್ದೆಗಳು
  • Data Science and Artificial Intelligence – 50 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ವಿಭಾಗಕ್ಕೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು.

Computer Sciences & Information Technology ವಿಭಾಗಕ್ಕೆ M.Sc./MS/MCA/B.E./B.Tech. ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹ ವಿಷಯಗಳಲ್ಲಿ Electronics, Electronics & Communication, Electronics & Telecommunication, Computer Sciences, Computer and Networking Security, Software System, Information Technology ಹಾಗೂ Informatics ಸೇರಿವೆ.

Electronics and Communication Engineering ವಿಭಾಗಕ್ಕೆ Electronics and Communication Engineeringನಲ್ಲಿ ಅರ್ಹ ಪದವಿ ಅಗತ್ಯವಿದೆ.

Data Science and Artificial Intelligence ವಿಭಾಗಕ್ಕೆ Data Science and siArtificial Intelligenceನಲ್ಲಿ ಸಂಬಂಧಿತ ಅರ್ಹತೆ ಇರಬೇಕು.

ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ವಿಭಾಗಕ್ಕೆ ಸಂಬಂಧಿಸಿದಂತೆ GATE 2024, GATE 2025 ಅಥವಾ GATE 2026ರ ಮಾನ್ಯ GATE ಸ್ಕೋರ್ ಹೊಂದಿರುವುದು ಕಡ್ಡಾಯವಾಗಿದೆ.

Computer Scienceಗೆ GATE Paper Code CS, Electronics and Communication Engineeringಗೆ EC, Data Science and Artificial Intelligenceಗೆ DA ಪರಿಗಣಿಸಲಾಗುತ್ತದೆ. ಈ ಹುದ್ದೆಗೆ ಯಾವುದೇ ಕೆಲಸದ ಅನುಭವ ಅಗತ್ಯವಿಲ್ಲ

ವಯೋಮಿತಿ:

NIC Scientific/Technical Assistant-A ಹುದ್ದೆಗೆ ಸಾಮಾನ್ಯ ಅಭ್ಯರ್ಥಿಗಳು ಹಾಗೂ EWS ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷ.

SC/ST ಅಭ್ಯರ್ಥಿಗಳಿಗೆ 35 ವರ್ಷ ಹಾಗೂ OBC (NCL) ಅಭ್ಯರ್ಥಿಗಳಿಗೆ 33 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ.

PwBD ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇದೆ. ವಯೋಮಿತಿಯನ್ನು ಸೆಪ್ಟೆಂಬರ್ 30, 2026ರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ

ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯಲ್ಲಿ ಪ್ರತ್ಯೇಕ ಲಿಖಿತ ಪರೀಕ್ಷೆಗಳು ಇರುವುದಿಲ್ಲ. ಅರ್ಹ ಅಭ್ಯರ್ಥಿಗಳ GATE ಅಂಕಗಳ ಆಧಾರದ ಮೇಲೆ ವಿಭಾಗವಾರು ಮತ್ತು ವರ್ಗವಾರು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

GATE 2024, 2025 ಮತ್ತು 2026ರ ಸ್ಕೋರ್‌ಗಳಿಗೆ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ. ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.

ದಾಖಲೆ ಪರಿಶೀಲನೆಯನ್ನು ಯಶಸ್ವಿಯಾಗಿ ಮುಗಿಸಿದ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ನೀಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ:

•ಮೊದಲು ಅಭ್ಯರ್ಥಿಗಳು recruitment.nic.in ವೆಬ್ಸೈಟ್ ಗೆ ಭೇಟಿ ನೀಡಬೇಕು.

•NIC Scientific/Technical Assistant-A Recruitment 2026 ಅಧಿಸೂಚನೆಯನ್ನು ತೆರೆಯಿರಿ.

•ನಂತರದಲ್ಲಿ ಆನ್ಲೈನ್ ನೋಂದಣಿಯನ್ನು ಪೂರ್ಣಗೊಳಿಸಬೇಕು.

•ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ನಮೂದಿಸಿ.

•ಗೇಟ್ ಅಂಕ ಸೇರಿದಂತೆ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.

•ಅಗತ್ಯ ದಾಖಲೆಗಳು ಫೋಟೋ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.

•ಶುಲ್ಕ ಅನ್ವಯಿಸುವ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಬೇಕು.

•ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ ಆನಂತರ, Confirmation Page ಡೌನ್ಲೋಡ್ ಮಾಡಿಕೊಳ್ಳಬೇಕು.

ಪ್ರಮುಖ ದಿನಾಂಕಗಳು (Important Dates)

ವಿವರದಿನಾಂಕ / ಮಾಹಿತಿ
ಅರ್ಜಿ ಆರಂಭಸೆಪ್ಟೆಂಬರ್ 1, 2026 ಬೆಳಗ್ಗೆ 10 ಗಂಟೆ
ಅರ್ಜಿ ಸಲ್ಲಿಸಲು ಕೊನೆಯ ದಿನಸೆಪ್ಟೆಂಬರ್ 30, 2026 ಸಂಜೆ 5.30
ಅರ್ಹತೆ ಪರಿಗಣಿಸುವ ಕೊನೆಯ ದಿನಸೆಪ್ಟೆಂಬರ್ 30, 2026
ದಾಖಲೆ ಪರಿಶೀಲನೆದಿನಾಂಕವನ್ನು ನಂತರ NIC ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

Read this:IOCL Recruitment 2026: IOCLನಲ್ಲಿ 470 ಹುದ್ದೆ; ಸೆ.3ರೊಳಗೆ ಅರ್ಜಿ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading