September Festivals : ಸೆಪ್ಟೆಂಬರ್ ತಿಂಗಳ ಪ್ರಮುಖ ಹಬ್ಬಗಳ ಪಟ್ಟಿ

Spread the love

September Festivals: ಸೆಪ್ಟೆಂಬರ್ ತಿಂಗಳ ಪ್ರಮುಖ ಹಬ್ಬಗಳಿವು; ಗಣೇಶ ಚತುರ್ಥಿಯಿಂದ ಪಿತೃಪಕ್ಷದವರೆಗೆ ಸಂಪೂರ್ಣ ಪಟ್ಟಿ

September 2026 Hindu festivals list in Kannada with a traditional diya and floral decoration.
September 2026 Hindu festivals list in Kannada with a traditional diya and floral decoration.

September Festivals: 2026ರ ಸೆಪ್ಟೆಂಬರ್ ತಿಂಗಳು ಧಾರ್ಮಿಕವಾಗಿ ಹಲವು ಪ್ರಮುಖ ಹಬ್ಬಗಳನ್ನು ಕೂಡಿಕೊಂಡಿದೆ.

ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ರಾಧಾಷ್ಟಮಿ, ಅನಂತ ಚತುರ್ದ ಸೇರಿದಂತೆ ಹಲವು ಹಬ್ಬಗಳು ವ್ರತಗಳು ಹಾಗೂ ವಿಶೇಷ ದಿನಗಳಿವೆ. ಹಾಗೂ ಸೆಪ್ಟೆಂಬರ್ ಅಂತ್ಯದಲ್ಲಿ ಪಿತೃಪಕ್ಷ ಕೂಡ ಆರಂಭವಾಗುತ್ತದೆ.

ಡ್ರಿಕ್ ಪಂಚಾಂಗದ ಪ್ರಕಾರ ಸೆಪ್ಟೆಂಬರ್ ತಿಂಗಳ ಪ್ರಮುಖ ಹಿಂದೂ ಹಬ್ಬಗಳನ್ನು ಇಲ್ಲಿ ತಿಳಿದುಕೊಳ್ಳೋಣ.

ಸೆಪ್ಟೆಂಬರ್ 4 :ಶ್ರೀ ಕೃಷ್ಣ ಜನ್ಮಾಷ್ಟಮಿ

ಸೆಪ್ಟೆಂಬರ್ 4ರಂದು ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮ ತಿಥಿ ಎಂದು ಶ್ರೀ ಕೃಷ್ಣ ಜನ್ಮವನ್ನು ಸ್ಮರಿಸಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ದೇಶಾದ್ಯಂತ ಭಕ್ತರು ಉಪವಾಸ ಪೂಜೆ ಘಟನೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

 

ಸೆಪ್ಟೆಂಬರ್ 7 – ಅಜಾ ಏಕಾದಶಿ

ಸೆಪ್ಟೆಂಬರ್ 7ರಂದು ಅಜಾ ಏಕಾದಶಿ ಆಚರಣೆ ನಡೆಯಲಿದೆ. ಏಕಾದಶಿ ವ್ರತವನ್ನು ವಿಷ್ಣು ಭಕ್ತರು ಶ್ರದ್ಧೆಯಿಂದ ಆಚರಿಸುವುದು ಸಾಮಾನ್ಯ. ಈ ದಿನ ಉಪವಾಸ ಮತ್ತು ವಿಶೇಷ ಪೂಜೆಯನ್ನು ಕೈಗೊಳ್ಳಲಾಗುತ್ತದೆ.

ಸೆಪ್ಟೆಂಬರ್ 13/14 – ಸ್ವರ್ಣಗೌರಿ ವ್ರತ (ಗೌರಿ ಹಬ್ಬ)

2026ರಲ್ಲಿ ಸ್ವರ್ಣಗೌರಿ ವ್ರತ (ಗೌರಿ ಹಬ್ಬ)ದ ದಿನಾಂಕದ ಬಗ್ಗೆ ಗೊಂದಲವಿದೆ. ಭಾದ್ರಪದ ಶುಕ್ಲ ತೃತೀಯಾ ತಿಥಿಯು ಸೆಪ್ಟೆಂಬರ್ 13ರಂದು ಬೆಳಗ್ಗೆ ಆರಂಭವಾಗಿ, ಸೆಪ್ಟೆಂಬರ್ 14ರ ಬೆಳಗ್ಗೆ ಮುಕ್ತಾಯವಾಗುತ್ತದೆ.

ಹೀಗಾಗಿ ಕೆಲವು ಪಂಚಾಂಗಗಳಲ್ಲಿ ಗೌರಿ ಹಬ್ಬವನ್ನು ಸೆಪ್ಟೆಂಬರ್ 13ರಂದು, ಇನ್ನು ಕೆಲವು ಪಂಚಾಂಗಗಳಲ್ಲಿ ಸೆಪ್ಟೆಂಬರ್ 14ರಂದು ಆಚರಿಸುವಂತೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಕುಟುಂಬದ ಸಂಪ್ರದಾಯ ಹಾಗೂ ಸ್ಥಳೀಯ ದೇವಾಲಯದ ಪಂಚಾಂಗವನ್ನು ಆಧರಿಸಿ ಆಚರಣೆಯ ದಿನಾಂಕವನ್ನು ನಿರ್ಧರಿಸುವುದು ಸೂಕ್ತ.

ಗೌರಿ ಹಬ್ಬದಂದು ಗೌರಿದೇವಿಯನ್ನು ಪೂಜಿಸಿ, ಕುಟುಂಬದ ಸುಖ-ಸಮೃದ್ಧಿ, ಸೌಭಾಗ್ಯ ಹಾಗೂ ಮಂಗಳಕ್ಕಾಗಿ ಮಹಿಳೆಯರು ವ್ರತ ಆಚರಿಸುತ್ತಾರೆ. ಗಣೇಶ ಚತುರ್ಥಿಗೆ ಮುನ್ನ ಗೌರಿ ದೇವಿಯನ್ನು ಮನೆಗೆ ಬರಮಾಡಿಕೊಂಡು ಪೂಜಿಸುವುದು ಈ ಹಬ್ಬದ ಪ್ರಮುಖ ಆಚರಣೆಯಾಗಿದೆ.

ಸೆಪ್ಟೆಂಬರ್ 14 – ಹರತಾಲಿಕಾ ತೀಜ್ ಮತ್ತು ಗಣೇಶ ಚತುರ್ಥಿ

ಸೆಪ್ಟೆಂಬರ್ 14ರಂದು ಎರಡು ಪ್ರಮುಖ ಧಾರ್ಮಿಕ ಆಚರಣೆಗಳು ನಡೆಯಲಿವೆ. ಅಂದು ಹರತಾಲಿಕಾ ತೀಜ್ ಹಾಗೂ ಗಣೇಶ ಚತುರ್ಥಿ ಇದೆ.

ಗಣೇಶ ಚತುರ್ಥಿಯಂದು ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

Drik Panchang ಪ್ರಕಾರ ಬೆಂಗಳೂರಿನಲ್ಲಿ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಗಣೇಶ ಪೂಜೆಯ ಮಧ್ಯಾಹ್ನದ ಮುಹೂರ್ತ ಬೆಳಗ್ಗೆ 11:02ರಿಂದ ಮಧ್ಯಾಹ್ನ 1:28ರವರೆಗೆ ಎಂದು ನೀಡಲಾಗಿದೆ.

Read this:NIC Recruitment: NICನಲ್ಲಿ 376 ಹುದ್ದೆಗಳ ನೇಮಕಾತಿ; ಸೆ.30ರೊಳಗೆ ಅರ್ಜಿ

ಗಣೇಶ ಚತುರ್ಥಿಯನ್ನು ವಿಘ್ನ ನಿವಾರಕ ಗಣೇಶನ ಆರಾಧನೆಯ ಪ್ರಮುಖ ದಿನವಾಗಿ ಆಚರಿಸಲಾಗುತ್ತದೆ. ಮನೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ, ನೈವೇದ್ಯ ಹಾಗೂ ಆರತಿ ನೆರವೇರಿಸುವ ಪದ್ಧತಿ ಇದೆ.

ಸೆಪ್ಟೆಂಬರ್ 15 – ಋಷಿ ಪಂಚಮಿ

ಗಣೇಶ ಚತುರ್ಥಿಯ ನಂತರದ ದಿನವಾದ ಸೆಪ್ಟೆಂಬರ್ 15ರಂದು ಋಷಿ ಪಂಚಮಿ ಆಚರಿಸಲಾಗುತ್ತದೆ. ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಸಪ್ತರ್ಷಿಗಳನ್ನು ಸ್ಮರಿಸುವ ಈ ದಿನಕ್ಕೆ ವಿಶೇಷ ಮಹತ್ವವಿದೆ. ಅದೇ ದಿನ ವಿಶ್ವೇಶ್ವರಯ್ಯ ಜಯಂತಿ ಹಾಗೂ ಇಂಜಿನಿಯರ್‌ಗಳ ದಿನವೂ ಇದೆ.

ಸೆಪ್ಟೆಂಬರ್ 17 – ಬಲರಾಮ ಜಯಂತಿ ಮತ್ತು ವಿಶ್ವಕರ್ಮ ಪೂಜೆ

ಸೆಪ್ಟೆಂಬರ್ 17ರಂದು ಬಲರಾಮ ಜಯಂತಿ, ವಿಶ್ವಕರ್ಮ ಪೂಜೆ ಹಾಗೂ ಕನ್ಯಾ ಸಂಕ್ರಾಂತಿ ನಡೆಯಲಿದೆ. ವಿಶೇಷವಾಗಿ ಕಾರ್ಮಿಕರು, ಕೈಗಾರಿಕೆಗಳು ಮತ್ತು ವಿವಿಧ ವೃತ್ತಿಗಳಿಗೆ ಸಂಬಂಧಿಸಿದವರು ವಿಶ್ವಕರ್ಮ ದೇವರ ಆರಾಧನೆ ಮಾಡುತ್ತಾರೆ.

Read this:Gruhalakshmi: ಗೃಹಲಕ್ಷ್ಮಿ 33ನೇ ಕಂತು; ಮಹಿಳೆಯರಿಗೆ ಸಿಹಿಸುದ್ದಿ

ಸೆಪ್ಟೆಂಬರ್ 19 – ರಾಧಾಷ್ಟಮಿ

ಸೆಪ್ಟೆಂಬರ್ 19ರಂದು ರಾಧಾಷ್ಟಮಿ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಭಕ್ತರಲ್ಲಿ ರಾಧಾಷ್ಟಮಿಗೆ ವಿಶೇಷ ಸ್ಥಾನವಿದೆ. ರಾಧಾದೇವಿಯ ಆರಾಧನೆ ಹಾಗೂ ವಿಶೇಷ ಪೂಜೆಗಳನ್ನು ಈ ದಿನ ನಡೆಸಲಾಗುತ್ತದೆ. ಇದೇ ದಿನ ಮಹಾಲಕ್ಷ್ಮಿ ವ್ರತ ಆರಂಭವಾಗಲಿದೆ ಎಂದು Drik Panchang ಕ್ಯಾಲೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 22 – ಪರಿವರ್ತಿನಿ ಏಕಾದಶಿ

ಸೆಪ್ಟೆಂಬರ್ 22ರಂದು ಪರಿವರ್ತಿನಿ ಏಕಾದಶಿ ಆಚರಿಸಲಾಗುತ್ತದೆ. ಇದನ್ನು ವಿಷ್ಣು ಆರಾಧನೆಗೆ ಪ್ರಮುಖವಾದ ಏಕಾದಶಿ ವ್ರತಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಭಕ್ತರು ಉಪವಾಸ ಆಚರಿಸಿ ಶ್ರೀಹರಿಯ ಆರಾಧನೆ ಮಾಡುತ್ತಾರೆ.

ಸೆಪ್ಟೆಂಬರ್ 23 – ವಾಮನ ಜಯಂತಿ

ಸೆಪ್ಟೆಂಬರ್ 23ರಂದು ವಾಮನ ಜಯಂತಿ ಆಚರಣೆ ನಡೆಯಲಿದೆ. ವಿಷ್ಣುವಿನ ವಾಮನ ಅವತಾರವನ್ನು ಸ್ಮರಿಸುವ ಈ ದಿನ ಧಾರ್ಮಿಕವಾಗಿ ಮಹತ್ವದ್ದಾಗಿದೆ.

ಸೆಪ್ಟೆಂಬರ್ 25 – ಗಣೇಶ ವಿಸರ್ಜನೆ ಮತ್ತು ಅನಂತ ಚತುರ್ದಶಿ

ಸೆಪ್ಟೆಂಬರ್ 25ರಂದು ಗಣೇಶ ವಿಸರ್ಜನೆ ಹಾಗೂ ಅನಂತ ಚತುರ್ದಶಿ ನಡೆಯಲಿದೆ. ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಗಳನ್ನು ಸಂಪ್ರದಾಯದಂತೆ ವಿವಿಧ ದಿನಗಳಲ್ಲಿ ವಿಸರ್ಜಿಸಲಾಗುತ್ತದೆ.

ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆ ನಡೆಯುವುದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.

Drik Panchang ಪ್ರಕಾರ 2026ರಲ್ಲಿ ಅನಂತ ಚತುರ್ದಶಿ ಸೆಪ್ಟೆಂಬರ್ 25ರಂದು ಶುಕ್ರವಾರ ಇದೆ. ಗಣೇಶ ವಿಸರ್ಜನೆಯ ದಿನವೂ ಇದೇ ಆಗಿದೆ.

ಸೆಪ್ಟೆಂಬರ್ 26 – ಭಾದ್ರಪದ ಪೂರ್ಣಿಮೆ

ಸೆಪ್ಟೆಂಬರ್ 26ರಂದು ಭಾದ್ರಪದ ಪೂರ್ಣಿಮೆ ಆಚರಿಸಲಾಗುತ್ತದೆ. ಈ ದಿನದೊಂದಿಗೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಪ್ರಮುಖ ಆಚರಣೆಗಳು ಮುಕ್ತಾಯಗೊಳ್ಳುತ್ತವೆ. ಪೂರ್ಣಿಮೆ ಶ್ರಾದ್ಧವೂ ಇದೇ ದಿನ ನಡೆಯಲಿದೆ ಎಂದು ಪಂಚಾಂಗದಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 27 – ಪಿತೃಪಕ್ಷ ಆರಂಭ

ಸೆಪ್ಟೆಂಬರ್ 27ರಿಂದ ಪಿತೃಪಕ್ಷ ಆರಂಭವಾಗಲಿದೆ. ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಪೂರ್ವಜರನ್ನು ಸ್ಮರಿಸಿ ಅವರ ಆತ್ಮಶಾಂತಿಗಾಗಿ ಶ್ರಾದ್ಧ, ತರ್ಪಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳನ್ನು ನೆರವೇರಿಸುವ ಅವಧಿಯೇ ಪಿತೃಪಕ್ಷ. ಸೆಪ್ಟೆಂಬರ್ 27ರಂದು ಪ್ರತಿಪದಾ ಶ್ರಾದ್ಧವೂ ನಡೆಯಲಿದೆ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading