Toxic: ‘ಟಾಕ್ಸಿಕ್’ಗೆ ಬೆಂಬಲ ನೀಡಿದ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್; ಯಶ್ ಅಭಿಮಾನಿಗಳಲ್ಲಿ ಹೊಸ ಚರ್ಚೆ

Toxic: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆ ಬಾಲಿವುಡ್ ನ ಖ್ಯಾತ ನಿರ್ದೇಶಕ ದುರಂದರ್ ಜಾತಿಯ ಆದಿತ್ಯಧರ್ ಯಶ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಆದಿತ್ಯ ಅದರ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಯಶ್ ಅವರಿಗೆ ಬೆಂಬಲ ಕೋರಿರುವಂಥದ್ದು. ಯಶ್ ಅವರ ಫೋಟೋ ಅನ್ನು ಶೇರ್ ಮಾಡುವ ಮೂಲಕ ಫೋಟೋದಲ್ಲಿ Yash’ ಎಂದು ಬರೆದು ತೋಳ್ಬಲ ಹಾಗೂ ಹೃದಯದ ಎಮೋಜಿಗಳನ್ನು ಬಳಸಿದ್ದಾರೆ.
‘ಟಾಕ್ಸಿಕ್’ ಬಗ್ಗೆ ಚರ್ಚೆ
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಡುಗಡೆಯ ಬಳಿಕ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಲ್ಲೂ ಉತ್ತರ ಭಾರತದ ಪ್ರೇಕ್ಷಕರ ವಲಯದಲ್ಲಿ ಸಿನಿಮಾದ ಬಗ್ಗೆ ಟೀಕೆಗಳು ಕೇಳಿಬಂದಿವೆ. ಇದೇ ಸಂದರ್ಭದಲ್ಲಿ ಆದಿತ್ಯ ಧರ್ ಅವರು ಯಶ್ ಅವರ ಫೋಟೋ ಹಂಚಿಕೊಂಡಿರುವುದು ಗಮನ ಸೆಳೆದಿದೆ.
ಅಭಿಮಾನಿಗಳಲ್ಲಿ ಹೊಸ ಕುತೂಹಲ
ಆದಿತ್ಯ ಧರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಯಶ್ ಹಾಗೂ ಆದಿತ್ಯ ಧರ್ ಅವರ ಕಾಂಬಿನೇಷನ್‌ನಲ್ಲಿ ಭವಿಷ್ಯದಲ್ಲಿ ದೊಡ್ಡ ಆ್ಯಕ್ಷನ್ ಸಿನಿಮಾ ಬರಬಹುದೇ ಎಂಬ ಬಗ್ಗೆ ಅಭಿಮಾನಿಗಳು ಊಹಾಪೋಹ ಆರಂಭಿಸಿದ್ದಾರೆ.
ಆದರೆ, ಯಶ್ ಮತ್ತು ಆದಿತ್ಯ ಧರ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಯಾವುದೇ ಅಧಿಕೃತ ಘೋಷಣೆ ಸದ್ಯಕ್ಕೆ ಹೊರಬಿದ್ದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯನ್ನು ಸದ್ಯಕ್ಕೆ ಅಭಿಮಾನಿಗಳ ನಿರೀಕ್ಷೆ ಎಂದಷ್ಟೇ ಪರಿಗಣಿಸಬೇಕಾಗಿದೆ.
‘ಟಾಕ್ಸಿಕ್’ ಚಿತ್ರದ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ‘ಧುರಂಧರ್’ ನಿರ್ದೇಶಕರ ಈ ಬೆಂಬಲ ಯಶ್ ಅಭಿಮಾನಿಗಳಿಗೆ ಸಂತಸ ತಂದಿದೆ.
Read this: KPSC:319 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆ.7ರವರೆಗೆ ಅವಕಾಶ