Delhi: ನವೆಂಬರ್-ಡಿಸೆಂಬರ್‌ನಲ್ಲಿ ಹೆಚ್ಚಲಿದೆ ಬಿಸಿಲಿನ ತೀವ್ರತೆ? ಹವಾಮಾನ ತಜ್ಞರ ಎಚ್ಚರಿಕೆ

Delhi: 2026ರ ಅಂತ್ಯದ ವೇಳೆಗೆ ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಳ್ಳುತ್ತಿರುವ ಪ್ರಬಲ El Nino ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ ಇದರ ಗರಿಷ್ಠ ಮಟ್ಟ ತಲುಪುತ್ತದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
El Nino ಎಂಬುದು ಸಮಭಾಜಕ ಪೆಸಿಫಿಕ್ ಮಹಾಸಾಗರದ ಸಮುದ್ರ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುವ ವಿದ್ಯಮಾನ. ಇದರಿಂದಾಗಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ತಾಪಮಾನ, ಮಳೆ ಮತ್ತು ಹವಾಮಾನ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುತ್ತದೆ.
ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ತೀವ್ರತೆ: ತಜ್ಞರ ವಿಶ್ಲೇಷಣೆಗಳ ಪ್ರಕಾರ, ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಇದರ ತೀವ್ರತೆ ಗರಿಷ್ಠ ಮಟ್ಟವನ್ನು ತಲುಪಬಹುದು. ಇದರಿಂದಾಗಿ ಜಾಗತಿಕ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ.
ಭಾರತದ ಮೇಲೆ ಪರಿಣಾಮ:
ಇದು ಸಾಮಾನ್ಯವಾಗಿ ಭಾರತದ ಮುಂಗಾರು ಮಳೆಯ ಮೇಲೆ ಪರಿಣಾಮ ಬೀರುವಂಥದ್ದು. ಪ್ರತಿ ಬಾರಿಯೂ ಕೂಡ ಇದರ ಪರಿಣಾಮ ಒಂದೇ ರೀತಿಯಾಗಿ ಇರುವುದಿಲ್ಲ.
ಭಾರತೀಯ ಪ್ರದೇಶದ ಮೇಲೆ ಪರಿಣಾಮವು ಸಮುದ್ರ-ವಾತಾವರಣದ ವ್ಯವಸ್ಥೆಯ ಇತರ ಅಂಶಗಳನ್ನು ಕೂಡ ಅವಲಂಬಿಸಿರುತ್ತದೆ ಎಂದು ಹವಾಮಾನ ಕೇಂದ್ರ ಸ್ಪಷ್ಟಪಡಿಸಿದೆ.
ಹವಾಮಾನ ಇಲಾಖೆಯ ಪ್ರಕಾರ, 2026ರ ಜೂನ್ ತಿಂಗಳಲ್ಲಿ El Nino ದುರ್ಬಲವಾಗಿತ್ತು. ಮತ್ತು ಜುಲೈ ತಿಂಗಳಲ್ಲಿ ಮಧ್ಯಮ ಹಂತಕ್ಕೆ ತೀವ್ರಗೊಂಡಿತ್ತು. ಹಾಗೂ ಮುಂದಿನ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಹೀಗಾಗಿ, ಈ 2026ರ ನವೆಂಬರ್-ಡಿಸೆಂಬರ್ ತಿಂಗಳುಗಳು ಬಿಸಿಲಿನ ರೌದ್ರ ನರ್ತನದಿಂದ ತುಂಬಿ ಹೋಗಲಿದೆ. ಈ ನಿಟ್ಟಿನಲ್ಲಿ ಕೂಡ ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯಗಳ ಸಾಧ್ಯತೆ ಹೆಚ್ಚಿರುವುದನ್ನು ತಜ್ಞರು ಗಮನಿಸುತ್ತಿದ್ದಾರೆ.
Read this: Mudigere: ಮೂಡಿಗೆರೆಯಲ್ಲಿ ಕ್ಯಾಂಟರ್-ಬೈಕ್ ಡಿಕ್ಕಿ; ಬೆಂಗಳೂರಿನ ಸವಾರ ಸಾವು