Mudigere: ಮೂಡಿಗೆರೆಯಲ್ಲಿ ಕ್ಯಾಂಟರ್-ಬೈಕ್ ಡಿಕ್ಕಿ; ಬೆಂಗಳೂರಿನ ಸವಾರ ಸಾವು

Spread the love

Mudigere: ಕ್ಯಾಂಟರ್-ಬೈಕ್ ಮುಖಾಮುಖಿ ಡಿಕ್ಕಿ; ಬೆಂಗಳೂರಿನ ಪ್ರವಾಸಿಗ ಸ್ಥಳದಲ್ಲೇ ಸಾವು

Canter truck and motorcycle involved in a road accident in Mudigere, Chikkamagaluru.
Canter truck and motorcycle involved in a road accident in Mudigere, Chikkamagaluru.

Mudigere: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದ ಬಳಿ ಕ್ಯಾಂಟರ್ ಹಾಗೂ ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬೆಂಗಳೂರಿನ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಬೆಂಗಳೂರಿನ ಬಾಣಸವಾಡಿ ನಿವಾಸಿ ಶರತ್ (30) ಎಂದು ಗುರುತಿಸಲಾಗಿದೆ.

ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಆಗಮಿಸಿದ್ದ ಶರತ್, ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದ ಸಮೀಪ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಮುಂದೆ ಇದ್ದಂತಹ  ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್ ವಾಹನಕ್ಕೆ ಬೈಕ್ ನೇರವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಶರತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಕುರಿತು ಮಾಹಿತಿ ಪಡೆದ ಗೋಣಿಬೀಡು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read this: Minority Loan: ಅಲ್ಪಸಂಖ್ಯಾತರ ಸಾಲ-ಸಹಾಯಧನಕ್ಕೆ ಅರ್ಜಿ ಆಹ್ವಾನ; ಸೆ.17 ಕೊನೆಯ ದಿನ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading