Minority Loan: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಸೆ.17 ಕೊನೆಯ ದಿನ

Minority Loan: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಹಾಗೂ ಸಹಾಯಧನ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಲ್ಪಸಂಖ್ಯಾತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮುಸ್ಲಿಂ, ಬೌದ್ಧ, ಜೈನ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ಅರ್ಹರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸೆಪ್ಟೆಂಬರ್ 17, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ನಿಗಮದ ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿದಾರರು ತಹಶೀಲ್ದಾರ್‌ರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ವಾಸದ ದೃಢೀಕರಣಕ್ಕಾಗಿ ಪಡಿತರ ಚೀಟಿ ಹೊಂದಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ನಿಗಮದ ಇತರ ಯೋಜನೆಗಳಡಿ ಈಗಾಗಲೇ ಸಾಲ ಸೌಲಭ್ಯ ಪಡೆದಿರಬಾರದು.
ಅರ್ಜಿದಾರರ ವಯೋಮಿತಿ 18ರಿಂದ 55 ವರ್ಷ ಇರಬೇಕು. ಅಲ್ಲದೆ, ಕುಟುಂಬದ ಯಾವುದೇ ಸದಸ್ಯರು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಉದ್ಯೋಗಿಯಾಗಿರಬಾರದು.
ವಿವಿಧ ಯೋಜನೆಗಳಡಿ ಸಾಲ-ಸಹಾಯಧನ
ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಗರಿಷ್ಠ ₹20 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
ಅರ್ಹತೆಗೆ ಹಿಂದಿನ ವರ್ಷದಲ್ಲಿ ಕನಿಷ್ಠ ಶೇ. 60 ಅಂಕ ಪಡೆದಿರಬೇಕು ಮತ್ತು ವಿದ್ಯಾರ್ಥಿಯ ವಯಸ್ಸು 38 ವರ್ಷ ಮೀರಿರಬಾರದು.
ಸ್ವಾವಲಂಬಿ ಸಾರಥಿ ಯೋಜನೆ:
ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಗೆ ಆನ್‌ರೋಡ್ ಬೆಲೆಯ ಶೇ. 50ರಷ್ಟು ಅಥವಾ ಗರಿಷ್ಠ ₹75,000 ಸಹಾಯಧನ ನೀಡಲಾಗುತ್ತದೆ.
ಗೂಡ್ಸ್ ವಾಹನ ಅಥವಾ ಟ್ಯಾಕ್ಸಿ ಖರೀದಿಗೆ ಶೇ. 50ರಷ್ಟು, ಗರಿಷ್ಠ ₹3 ಲಕ್ಷದವರೆಗೆ ಸಹಾಯಧನ ದೊರೆಯಲಿದೆ.
ವ್ಯಾಪಾರ ಉದ್ದಿಮೆಗಳಿಗೆ ನೇರಸಾಲ ಯೋಜನೆ: ವ್ಯಾಪಾರ ಅಥವಾ ಉದ್ಯಮ ಆರಂಭಿಸಲು ಬಯಸುವ 18ರಿಂದ 55 ವರ್ಷದ ನಿರುದ್ಯೋಗಿಗಳಿಗೆ ಗರಿಷ್ಠ ₹20 ಲಕ್ಷದವರೆಗೆ ಶೇ. 4 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
ಗಂಗಾಕಲ್ಯಾಣ ಯೋಜನೆ:
ಕೃಷಿಯನ್ನು ಅವಲಂಬಿಸಿರುವ ಅಲ್ಪಸಂಖ್ಯಾತ ಸಮುದಾಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ, ಪಂಪ್‌ಸೆಟ್ ಹಾಗೂ ವಿದ್ಯುದ್ದೀಕರಣ ಸೇರಿದಂತೆ ಗರಿಷ್ಠ ₹3 ಲಕ್ಷ ಸಹಾಯಧನ ಒದಗಿಸಲಾಗುತ್ತದೆ.
ಇದಲ್ಲದೆ, ಸಾಂತ್ವನ ಯೋಜನೆ, ಸಿಖ್ ಸಮುದಾಯದ ಆರ್ಥಿಕ ಸಬಲೀಕರಣ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮ ಪ್ರೋತ್ಸಾಹ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳೂ ಲಭ್ಯವಿವೆ.
ಅರ್ಹ ಫಲಾನುಭವಿಗಳು ಅಧಿಕೃತ KMDC ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್ ಅಗತ್ಯವಿರುತ್ತದೆ.
Read this:Indus Water Treaty: ಸಿಂಧೂ ಜಲ ಒಪ್ಪಂದದ ಬಗ್ಗೆ ಭಾರತದ ಖಡಕ್ ನಿಲುವು