Indus Water Treaty: ಹೇಗ್ ಕೋರ್ಟ್ ಆದೇಶ ತಿರಸ್ಕರಿಸಿದ ಭಾರತ; ಪಾಕಿಸ್ತಾನಕ್ಕೆ ನೀರು ನೀಡುವ ವಿಚಾರದಲ್ಲಿ ಮೋದಿ ಸರ್ಕಾರದ ಖಡಕ್ ನಿಲುವು

Indus Water Treaty
: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ಜಲ ವಿವಾದ ಮತ್ತೊಮ್ಮೆ ತೀವ್ರಗೊಂಡಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಗ್‌ನಲ್ಲಿರುವ Court of Arbitration ನೀಡಿರುವಂತಹ ತೀರ್ಪನ್ನು ಭಾರತ ತಿರಸ್ಕರಿಸಿದೆ.
ಈ ನ್ಯಾಯಮಂಡಳಿಗೆ ಭಾರತದ ಸಾರ್ವಭೌಮ ನಿರ್ಧಾರಗಳ ಬಗ್ಗೆ ತೀರ್ಪು ನೀಡುವ ಯಾವುದೇ ಅಧಿಕಾರ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸಿಂಧೂ ಜಲ ಒಪ್ಪಂದವನ್ನು ಭಾರತ 2025ರ ಏಪ್ರಿಲ್‌ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಈ ನಿರ್ಧಾರವನ್ನು ಕೈಗೊಂಡಿತ್ತು.
ಇದೀಗ ಹೇಗ್‌ನ ನ್ಯಾಯಮಂಡಳಿ ಒಪ್ಪಂದವನ್ನು ಏಕಪಕ್ಷೀಯವಾಗಿ ಸ್ಥಗಿತಗೊಳಿಸಲು ಭಾರತಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದ್ದು, ಒಪ್ಪಂದದ ಕೆಲವು ನಿಯಮಗಳನ್ನು ಪಾಲಿಸುವಂತೆ ಭಾರತಕ್ಕೆ ಸೂಚಿಸಿದೆ.
ಏನಿದು ಹೇಗ್ ಕೋರ್ಟ್ ಆದೇಶ?
ಪಾಕಿಸ್ತಾನದ ಮನವಿಯ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ Court of Arbitration, ಸಿಂಧೂ ಜಲ ಒಪ್ಪಂದ ಇನ್ನೂ ಜಾರಿಯಲ್ಲಿದೆ ಎಂದು ಹೇಳಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ರಟ್ಲೆ ಜಲವಿದ್ಯುತ್ ಯೋಜನೆಯ ಕೆಲವು ಕಾಮಗಾರಿಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
ವಿಶೇಷವಾಗಿ ಅಣೆಕಟ್ಟಿನ ಗೋಡೆ ಮತ್ತು ವಿದ್ಯುತ್ ನೀರು ಪ್ರವೇಶಿಸುವ ಭಾಗದ ಕಾಮಗಾರಿಗಳನ್ನು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ಮುಂದುವರಿಸದಂತೆ ಸೂಚಿಸಲಾಗಿದೆ.
ವಿಶ್ವಬ್ಯಾಂಕ್ ನೇಮಿಸಿರುವ Neutral Expert ಯೋಜನೆಯ ಅನುಸರಣೆಯ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಈ ನಿರ್ಬಂಧಗಳು ಮುಂದುವರಿಯಲಿವೆ. ಈ ಪ್ರಕ್ರಿಯೆಯ ಅಂತಿಮ ನಿರ್ಧಾರ 2027ರ ಜುಲೈ ವೇಳೆಗೆ ನಿರೀಕ್ಷಿಸಲಾಗಿದೆ.
ಭಾರತದ ಪ್ರತಿಕ್ರಿಯೆ:
ಪ್ರಸ್ತುತ ನ್ಯಾಯಮಂಡಳಿ ನೀಡಿರುವಂತಹ ತೀರ್ಪನ್ನು ಭಾರತವು ಒಪ್ಪಿಕೊಂಡಿಲ್ಲ. ಈ Court of Arbitration ಅನ್ನು ಭಾರತ ಮಾನ್ಯಗೊಳಿಸಿಲ್ಲ ಮತ್ತು ಅದರ ರಚನೆಯೇ ಸರಿಯಿಲ್ಲ ಎಂದು ಭಾರತ ಹೇಳಿದೆ.
ಹೀಗಾಗಿ, ಈ ನ್ಯಾಯಮಂಡಳಿಗೆ ಭಾರತದ ವಿರುದ್ಧ ಯಾವುದೇ ಆದೇಶ ನೀಡುವ ಅಧಿಕಾರವಿಲ್ಲ ಎಂಬುದು ಭಾರತದ ನಿಲುವು.
ಸಿಂಧೂ ಜಲ ಒಪ್ಪಂದದ ಹಿನ್ನೆಲೆ
ಭಾರತ ಮತ್ತು ಪಾಕಿಸ್ತಾನ ನಡುವೆ 1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಸಿಂಧೂ ನದಿ ವ್ಯವಸ್ಥೆಯ ನೀರಿನ ಬಳಕೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಈ ಒಪ್ಪಂದ ಪ್ರಮುಖ ಪಾತ್ರ ವಹಿಸುತ್ತಿದೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ರಾಜಕೀಯ ಮತ್ತು ಭದ್ರತಾ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಒಪ್ಪಂದವೂ ವಿವಾದದ ಕೇಂದ್ರಬಿಂದುವಾಗಿದೆ.
2025ರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತ್ತು.
Read this: ಸೆಪ್ಟೆಂಬರ್ 2ರ ರಾಶಿ ಭವಿಷ್ಯ ಈ ರೀತಿ ಇದೆ