Horoscope September 2: ಇಂದಿನ ದಿನ ಭವಿಷ್ಯದಲ್ಲಿ 12 ರಾಶಿಗಳ ಫಲಿತಾಂಶ ಹೇಗಿದೆ ಎಂಬುದನ್ನು ನೋಡೋಣ.

Horoscope September 2: ಉದ್ಯೋಗ, ವ್ಯವಹಾರ, ಹಣಕಾಸು, ಕುಟುಂಬ ಮತ್ತು ಆರೋಗ್ಯದ ವಿಚಾರದಲ್ಲಿ ಯಾವ ರಾಶಿಗೆ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ.
ಮೇಷ ರಾಶಿ
ಇವತ್ತು ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ದೊರೆಯುವಂತದ್ದು. ಹಣಕಾಸಿನ ವಿಚಾರದಲ್ಲಿ ನಿಯಂತ್ರಣ ಉತ್ತಮ. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯಬಹುದು. ಇಂದು ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಎದುರಾಗಬಹುದು.
ವೃಷಭ ರಾಶಿ
ಇವತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಅವಕಾಶ ಬರಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರ. ಕುಟುಂಬದಲ್ಲಿ ಖುಷಿಯ ವಾತಾವರಣ ಇರುತ್ತದೆ.
ಮಿಥುನ ರಾಶಿ
ಹಳೆಯ ಕೆಲಸಗಳು ಇವತ್ತು ಪೂರ್ಣಗೊಳ್ಳುತ್ತವೆ. ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಬೆಳವಣಿಗೆ. ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಅಗತ್ಯ ಸಹಕಾರ ದೊರೆಯಬಹುದು. ಆರೋಗ್ಯದ ಕಡೆ ಗಮನ ಇರಬೇಕು.
ಕರ್ಕಾಟಕ ರಾಶಿ
ಇಂದು ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಆದರೂ ಕೂಡ ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಕುಟುಂಬದ ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಬರಬಹುದು. ಖರ್ಚು ಮಾಡಿದಾಗ ಎಚ್ಚರಿಕೆ ಇರಬೇಕು.
ಸಿಂಹ ರಾಶಿ
ಇವತ್ತು ನಿಮ್ಮ ಕಾರ್ಯವೈಖರಿ ಗಮನ ಸೆಳೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ ಬರಬಹುದು. ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ವ್ಯಾಪಾರಿಗಳಿಗೆ ಅನುಕೂಲಕರ ದಿನ.
ಕನ್ಯಾ ರಾಶಿ
ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆಗಳು ಬರುತ್ತವೆ. ಸಹನೆಯಿಂದ ನಿಭಾಯಿಸಬೇಕು. ಹಣಕಾಸಿನ ವಿಚಾರದಲ್ಲಿ ಮೊದಲು ಸರಿಯಾಗಿ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಕುಟುಂಬದವರ ಸಲಹೆ ಸಹಾಯ ಮಾಡಬಹುದು.
ತುಲಾ ರಾಶಿ
ಇಂದು ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗುತ್ತದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಸಂಬಂಧಗಳಲ್ಲಿ ಉತ್ತಮ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಬೇಕು.
ವೃಶ್ಚಿಕ ರಾಶಿ
ಸ್ನೇಹಿತರು ಮತ್ತು ಆಪ್ತರಿಂದ ಅಗತ್ಯ ಸಹಕಾರ ದೊರೆಯುವಂತದ್ದು. ಉದ್ಯೋಗದಲ್ಲಿ ಬಾಕಿ ಉಳಿದಿರುವ ಕೆಲಸ ಇವತ್ತು ಮುಗಿಯುತ್ತದೆ. ಅನಗತ್ಯ ಖರ್ಚುಗಳು ಬೇಡ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವೂ ಬೇಡ.
ಧನು ರಾಶಿ
ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶವಿರಬಹುದು. ಇಂದು ಕೈಗೊಂಡ ಕೆಲಸ ಯಶಸ್ಸು ಸಾಧಿಸುವ ಸಾಧ್ಯತೆ ಇದೆ. ಪ್ರಯಾಣದ ಯೋಜನೆ ರೂಪಿಸಬಹುದು. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುತ್ತೀರಿ.
ಮಕರ ರಾಶಿ
ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯ ಅವಕಾಶ ಸಿಗುತ್ತದೆ. ಹಿರಿಯರಿಂದ ಪ್ರಶಂಸೆ ಅಥವಾ ಬೆಂಬಲ ದೊರೆಯುವಂತಹ ಸಾಧ್ಯತೆ ಇದೆ. ಹಣದ ವಿಚಾರದಲ್ಲಿ ಎಚ್ಚರಿಕೆ ಬೇಕು. ಆತುರದ ನಿರ್ಧಾರಗಳನ್ನು ತಪ್ಪಿಸುವುದು ಒಳ್ಳೆಯದು.
ಕುಂಭ ರಾಶಿ
ಹೊಸ ಯೋಜನೆಗಳನ್ನು ಆರಂಭಿಸಲು ಇವತ್ತು ಉತ್ತಮ ದಿನ. ಕೆಲಸದಲ್ಲಿ ನಿಮ್ಮ ಆಲೋಚನೆಗಳಿಗೆ ಬೆಂಬಲ ದೊರೆಯುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುವಂತದ್ದು. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಂಡು ಬರಬಹುದು.
ಮೀನ ರಾಶಿ
ಇದು ಹಣಕಾಸಿನ ವಿಚಾರದಲ್ಲಿ ಕೆಲವು ಉತ್ತಮ ಬೆಳವಣಿಗೆಗಳು ಉಂಟಾಗುತ್ತವೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಮುಗಿಯಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವಂತದ್ದು. ಮನಸ್ಸಿಗೆ ನೆಮ್ಮದಿ ನೀಡುವ ಘಟನೆಗಳು ನಡೆಯುತ್ತವೆ.
Read this: September Festivals : ಸೆಪ್ಟೆಂಬರ್ ತಿಂಗಳ ಪ್ರಮುಖ ಹಬ್ಬಗಳ ಪಟ್ಟಿ
ಸೂಚನೆ: ಮೇಲಿನ ದಿನ ಭವಿಷ್ಯವು ಜ್ಯೋತಿಷ್ಯ ಆಧಾರಿತ ಸಾಮಾನ್ಯ ಮಾಹಿತಿಯಾಗಿದ್ದು, ನಂಬಿಕೆಗಳಿಗೆ ಅನುಗುಣವಾಗಿ ಪರಿಗಣಿಸಬಹುದು.