Basale Soppu: ಬಸಳೆ ಸೊಪ್ಪು ಪೌಷ್ಟಿಕಾಂಶಗಳ ಆಗರ, ಆರೋಗ್ಯಕ್ಕೆ ಹಲವು ಪ್ರಯೋಜನ

Basale Soppu: ಸಾಮಾನ್ಯವಾಗಿ ಮನೆಗಳಲ್ಲಿ ಹಲವು ಸೊಪ್ಪುಗಳನ್ನು ಆಹಾರದಲ್ಲಿ ಬಳಸುವುದುಂಟು. ಅದರಲ್ಲಿ ಒಂದು ಬಸಳೆ ಸೊಪ್ಪು. ಈ ಸೊಪ್ಪನ್ನು ಸಾರು, ಗಸಿ, ಪಲ್ಯ ಸೇರಿದಂತೆ ಹಲವು ರೀತಿಯಲ್ಲಿ ಅಡುಗೆಗೆ ಬಳಸಲಾಗುತ್ತದೆ.
ಇದರಲ್ಲಿ ವಿಟಮಿನ್, ಖನಿಜಾಂಶ, ನಾರಿನಂಶ ಮತ್ತು ವಿವಿಧ ಸಸ್ಯಜನ್ಯ ಸಂಯುಕ್ತಗಳು ಇವೆ. ಸಂಶೋಧನೆಗಳ ಪ್ರಕಾರ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ ಸೇರಿದಂತೆ ಹಲವಾರು ಖನಿಜಾಂಶ ಮತ್ತು ವಿಟಮಿನ್‌ಗಳು ಬಸಳೆ ಸೊಪ್ಪಿನಲ್ಲಿವೆ.
100 ಗ್ರಾಂ ಹಸಿ ಬಸಳೆ ಸೊಪ್ಪಿನಲ್ಲಿ ಸುಮಾರು 19 ಕ್ಯಾಲೊರಿಗಳು, 1.8 ಗ್ರಾಂ ಪ್ರೋಟೀನ್, 3.4 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು ಅಲ್ಪ ಪ್ರಮಾಣದ ಕೊಬ್ಬು ಇರುತ್ತದೆ. ಇದರ ಜೊತೆಗೆ ವಿಟಮಿನ್ C, ಫೋಲೇಟ್, ವಿಟಮಿನ್ A, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಂ ಮತ್ತು ಪೊಟ್ಯಾಸಿಯಂ ಮುಂತಾದ ಪೋಷಕಾಂಶಗಳೂ ದೊರೆಯುತ್ತವೆ.
ಜೀರ್ಣಕ್ರಿಯೆಗೆ ಸಹಕಾರ
ಬಸಳೆ ಸೊಪ್ಪಿನಲ್ಲಿ ನಾರಿನಂಶ ಇರುತ್ತದೆ. ಇದು ಮಲಬದ್ಧತೆಯನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಜೊತೆಗೆ, ಸಮತೋಲಿತ ಆಹಾರದ ಭಾಗವಾಗಿ ಬಸಳೆ ಸೊಪ್ಪನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಕಬ್ಬಿಣ ಸೇರಿದಂತೆ ಖನಿಜಾಂಶಗಳ ಮೂಲ ಬಸಳೆ ಸೊಪ್ಪು
ಬಸಳೆ ಸೊಪ್ಪು ಕಬ್ಬಿಣದ ಜೊತೆಗೆ ಹಲವಾರು ಖನಿಜಾಂಶಗಳನ್ನು ಹೊಂದಿದೆ. ಒಟ್ಟಾರೆಯಾಗಿ, ದೈನಂದಿನ ಆಹಾರದಲ್ಲಿ ಬಸಳೆ ಸೊಪ್ಪನ್ನು ಸೇರಿಸುವುದು ಹೆಚ್ಚಿನ ಪೌಷ್ಟಿಕಾಂಶವನ್ನು ಪಡೆಯಲು ಸಹಕಾರಿಯಾಗುತ್ತದೆ.
ಆದರೂ ಕೂಡ, ರಕ್ತಹೀನತೆಗೆ ಚಿಕಿತ್ಸೆ ಪಡೆಯುವಾಗ ಕೇವಲ ಈ ಸೊಪ್ಪನ್ನು ಅವಲಂಬಿಸದೆ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.
ವಿಟಮಿನ್ C
ಬಸಳೆ ಸೊಪ್ಪಿನಲ್ಲಿ ವಿಟಮಿನ್ C ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಇದು ದೇಹದ ಸಾಮಾನ್ಯ ರೋಗನಿರೋಧಕ ಕಾರ್ಯಕ್ಕೆ ಹಾಗೂ ಕಬ್ಬಿಣದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುವಂತಹ ಪ್ರಮುಖ ಪೋಷಕಾಂಶವಾಗಿದೆ.
ಆ್ಯಂಟಿಆಕ್ಸಿಡೆಂಟ್‌ಗಳ ಉಪಸ್ಥಿತಿ
ಬಸಳೆ ಸೊಪ್ಪಿನಲ್ಲಿ ಕ್ಯಾರೋಟಿನಾಯ್ಡ್‌ಗಳಂತೆ ಹಲವು ಸಸ್ಯಜನ್ಯ ಆ್ಯಂಟಿಆಕ್ಸಿಡೆಂಟ್ ಸಂಯುಕ್ತಗಳಿವೆ. ಪ್ರಯೋಗಾಲಯಗಳ ಅಧ್ಯಯನಗಳಲ್ಲಿ ಬಸಳೆ ಸೊಪ್ಪಿನಲ್ಲಿರುವ ಕೆಲವು ಸಂಯುಕ್ತಗಳು ಆ್ಯಂಟಿಆಕ್ಸಿಡೆಂಟ್ ಚಟುವಟಿಕೆಯನ್ನು ತೋರಿಸಿರುವಂಥದ್ದು.
ಕಡಿಮೆ ಕ್ಯಾಲೊರಿ
ಬಸಳೆ ಸೊಪ್ಪಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿ ಇರುವುದರಿಂದ, ಸಮತೋಲಿತ ಆಹಾರದ ಭಾಗವಾಗಿ ಅದನ್ನು ಸೇರಿಸಬಹುದು.
ತರಕಾರಿ, ಸೊಪ್ಪುಗಳನ್ನು ಹೆಚ್ಚಾಗಿ ಒಳಗೊಂಡ ಆಹಾರ ಒಂದು ಆರೋಗ್ಯಕರ ಆಹಾರವಾಗಿರುತ್ತದೆ. ಹಾಗೂ ಕಡಿಮೆ ಕ್ಯಾಲೊರಿ ಇರುವುದರಿಂದ ತೂಕ ಇಳಿಕೆಗೆ ಇದು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ
ಬಸಳೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನಂತಹ ಖನಿಜಾಂಶಗಳು ಕೂಡ ಇರುತ್ತವೆ. ಇದು ದೇಹದಲ್ಲಿ ಇರುವಂತಹ ವಿವಿಧ ಸಾಮಾನ್ಯ ಕಾರ್ಯಗಳಿಗೆ ಅಗತ್ಯವಿರುವಂತಹ ಪೋಷಕಾಂಶಗಳನ್ನು ಒದಗಿಸುತ್ತದೆ.
ದೇಹಕ್ಕೆ ತಂಪು
ಬಸಳೆ ಸೊಪ್ಪು ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು, ಬಾಯಿಯಲ್ಲಿ ಹುಣ್ಣಾಗುವುದನ್ನು ತಡೆಯುತ್ತದೆ.
ಸೂಚನೆ
ಬಸಳೆ ಸೊಪ್ಪಿನಲ್ಲಿ ಇಷ್ಟೆಲ್ಲಾ ಅಂಶಗಳು ಇದ್ದರೂ ಕೂಡ, ಗಂಭೀರವಾದಂತಹ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿಯಾಗುವುದು ಉತ್ತಮವಾಗಿರುತ್ತದೆ.