Bengaluru: ರೇಷನ್ ಕಾರ್ಡ್ ಇ-ಕೆವೈಸಿ ಮೊಬೈಲ್ ನಲ್ಲೇ ಮಾಡ್ಬೋದು!

Spread the love

Bengaluru: ರೇಷನ್ ಕಾರ್ಡ್‌ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್ ಬಿಡುಗಡೆ

Bengaluru
Bengaluru

Bengaluru: ರೇಷನ್‌ ಕಾರ್ಡ್‌ ಇ-ಕೆವೈಸಿ ಮಾಡಿಸಲು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನಸೇವೆ’ ಎಂಬ ಹೊಸ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ.

ಈ ಆ್ಯಪ್‌ ಮೂಲಕ ಪಡಿತರ ಚೀಟಿದಾರರು ಮನೆಯಲ್ಲೇ ಕುಳಿತು ಮೊಬೈಲ್‌ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಇದರಿಂದ ರೇಷನ್‌ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಕಡಿಮೆಯಾಗಲಿದೆ ಎಂದು ವರದಿಯಾಗಿದೆ.

ಪ್ರಾಯೋಗಿಕವಾಗಿ ಸದ್ಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್‌ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆ್ಯಪ್‌ ಸೇವೆ ಆರಂಭಿಸಲಾಗಿದೆ.

ಮುಂದಿನ ಹಂತದಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸುವುದಾಗಿ ಸರ್ಕಾರ ತಿಳಿಸಿದೆ. ಸುಮಾರು ನಾಲ್ಕೂವರೆ ಕೋಟಿ ಫಲಾನುಭವಿಗಳಿರುವ ಹಿನ್ನೆಲೆಯಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ಗಮನಿಸಿ: ನಿಮ್ಮ ಜಿಲ್ಲೆ ಈ ಮೊದಲ ಹಂತದ 8 ಜಿಲ್ಲೆಗಳಲ್ಲಿ ಇಲ್ಲದಿದ್ದರೆ, ಆ್ಯಪ್‌ ಸೇವೆ ನಿಮ್ಮ ಜಿಲ್ಲೆಗೆ ವಿಸ್ತರಣೆಯಾಗುವವರೆಗೆ ಕಾಯಬೇಕಾಗಬಹುದು.

 

Read this: Chikkamagaluru: ಕಳೆದುಹೋದ ಮೊಬೈಲ್ ನಿಂದ ₹1.45 ಲಕ್ಷ ಎಸ್ಕೇಪ್

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading