Delhi: ಇನ್ಮುಂದೆ ಪ್ರತೀ ಶನಿವಾರವೂ ಬ್ಯಾಂಕುಗಳಿಗೆ ರಜೆ

Spread the love

Delhi: ಇನ್ಮುಂದೆ ಪ್ರತೀ ಶನಿವಾರವೂ ಬ್ಯಾಂಕುಗಳಿಗೆ ರಜೆ

Banks closed on every Saturday.
Banks closed on every Saturday.

Delhi: ಇತ್ತೀಚೆಗೆ ಹಲವು ದಿನಗಳ ಕಾಲ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದರು. ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು.

ಇದೀಗ ನೌಕರರ ಒತ್ತಾಯಕ್ಕೆ ಮಣಿದು ಕೇಂದ್ರ ಆರ್ಥಿಕ ಇಲಾಖೆ ಪ್ರತಿ ಶನಿವಾರ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡುವ ಆದೇಶ ನೀಡಿದೆ.

ಇದಕ್ಕೂ ಮೊದಲು ಬ್ಯಾಂಕುಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆಯಿರುತ್ತಿತ್ತು. ಇದೀಗ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ ಪ್ರತೀ ಶನಿವಾರವನ್ನು ರಜಾ ದಿನವಾಗಿ ಘೋಷಿಸಿದೆ.

ಕೇಂದ್ರ ಆರ್ಥಿಕ ಇಲಾಖೆಯು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಇಂದಿನಿಂದಲೇ ಕ್ರಮ ಜಾರಿಗೆ ಬರುವಂತೆ ಆದೇಶ ನೀಡಿದೆ.

ಇತ್ತೀಚೆಗೆ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ನಡೆಸುವುದಾಗಿ ತೀರ್ಮಾನ ಕೈಗೊಂಡಿದ್ದ ಸಂಘಟನೆಗಳು ಕೊನೆ ಕ್ಷಣದಲ್ಲಿ ಮುಷ್ಕರವನ್ನು ನಡೆಸಿರಲಿಲ್ಲ.

ಈ ಸಂಬಂಧವಾಗಿ ಭಾರತೀಯ ಬ್ಯಾಂಕುಗಳ ಸಂಘ ಮತ್ತು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟಗಳ ಸಭೆ ನಡೆಸಿ, ಎಲ್ಲ ಶನಿವಾರಗಳೂ ರಜಾ ದಿನವಾಗಿ ಘೋಷಿಸುವ ಕುರಿತು ಸಮಿತಿ ತಕ್ಷಣವೇ ರಚಿಸಲಾಗುವುದು ಎಂದು ನಿರ್ಧಾರ ಮಾಡಿದ್ದವು.

ಅದರಂತೆ ಆ ಮುಷ್ಕರಕ್ಕೂ ಮುನ್ನವೇ ಕೇಂದ್ರ ಸರ್ಕಾರ ಬೇಡಿಕೆಗಳಲ್ಲಿ ಒಂದು ಬೇಡಿಕೆಯನ್ನು ಈಡೇರಿಸಿದೆ.

Bengaluru: ರೇಷನ್ ಕಾರ್ಡ್ ಇ-ಕೆವೈಸಿ ಮೊಬೈಲ್ ನಲ್ಲೇ ಮಾಡ್ಬೋದು!

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading