Recipe: ಬಾಯಲ್ಲಿ ನೀರೂರಿಸುವ ಟೊಮೆಟೊ ತೊಕ್ಕು; ಒಮ್ಮೆ ಮಾಡಿ ನೋಡಿ

Spread the love

Recipe: ಅನ್ನ, ಇಡ್ಲಿ, ದೋಸೆಯೊಂದಿಗೆ ಸವಿಯಲು ರುಚಿಕರವಾದ ಟೊಮೆಟೊ ತೊಕ್ಕು ಮಾಡುವ ವಿಧಾನ

Tomato tokku recipe
Tomato tokku recipe

Recipe: ಟೊಮೆಟೊದಿಂದ ತಯಾರಿಸುವ ಹಲವು ಖಾದ್ಯಗಳಲ್ಲಿ ಟೊಮೆಟೊ ತೊಕ್ಕು ಕೂಡ ಒಂದು. ಚೆನ್ನಾಗಿ ಹಣ್ಣಾದ ನಾಟಿ ಟೊಮೆಟೊ ಬಳಸಿ ಮಾಡುವ ಈ ತೊಕ್ಕು ಅನ್ನ, ಇಡ್ಲಿ, ದೋಸೆ ಹಾಗೂ ಚಪಾತಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಟೊಮೆಟೊ ತೊಕ್ಕಿಗೆ ಹೆಚ್ಚಿನ ಪದಾರ್ಥಗಳ ಅಗತ್ಯವೂ ಇರುವುದಿಲ್ಲ.

ಬೇಕಾಗುವ ಪದಾರ್ಥಗಳು

– ಟೊಮೆಟೊ – 1 ಕೆ.ಜಿ

– ಎಣ್ಣೆ – 5 ರಿಂದ 6 ದೊಡ್ಡ ಚಮಚ

– ಸಾಸಿವೆ – 1 ಟೀಸ್ಪೂನ್

– ಮೆಂತ್ಯ ಕಾಳು – ½ ಟೀಸ್ಪೂನ್

– ಇಂಗು – ½ ಟೀಸ್ಪೂನ್

– ಅಚ್ಚಖಾರದ ಪುಡಿ – 2 ರಿಂದ 3 ದೊಡ್ಡ ಚಮಚ

– ಅರಿಶಿನ ಪುಡಿ – ½ ಟೀಸ್ಪೂನ್

– ಉಪ್ಪು – ರುಚಿಗೆ ತಕ್ಕಷ್ಟು

– ಬೆಲ್ಲ – 1 ಸಣ್ಣ ಚಮಚ (ಬೇಕಿದ್ದರೆ)

ಟೊಮೆಟೊ ತೊಕ್ಕು ಮಾಡುವ ವಿಧಾನ

ಮೊದಲಿಗೆ ಚೆನ್ನಾಗಿ ಹಣ್ಣಾದ ಟೊಮೆಟೊಗಳನ್ನು ನೀರಿನಲ್ಲಿ ತೊಳೆದು, ಸ್ವಚ್ಛವಾದ ಬಟ್ಟೆಯಿಂದ ಒಣಗಿಸಿಕೊಳ್ಳಿ. ನಂತರ ಟೊಮೆಟೊಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬಹುದು ಅಥವಾ ಮಿಕ್ಸಿಯಲ್ಲಿ ಹಾಕಿ ತುಂಬಾ ನುಣ್ಣಗೆ ಮಾಡದೆ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಬಹುದು.

ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಸಾಸಿವೆ ಹಾಕಿ ಸಿಡಿದ ಬಳಿಕ ಇಂಗು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.

ಈಗ ಹೆಚ್ಚಿಕೊಂಡ ಅಥವಾ ರುಬ್ಬಿಕೊಂಡ ಟೊಮೆಟೊವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊ ಸ್ವಲ್ಪ ಬಾಡಿದ ಬಳಿಕ ಅರಿಶಿನ ಪುಡಿ, ಅಚ್ಚಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಮಧ್ಯಮ ಉರಿಯಲ್ಲಿ ಟೊಮೆಟೊವನ್ನು ಬೇಯಿಸುತ್ತಾ ಇರಿ. ಟೊಮೆಟೊದಲ್ಲಿರುವ ನೀರು ಸಂಪೂರ್ಣವಾಗಿ ಆವಿಯಾಗಿ, ಮಿಶ್ರಣ ಗಟ್ಟಿಯಾಗುತ್ತಾ ಎಣ್ಣೆ ಬಿಟ್ಟು ಬರುವವರೆಗೆ ಬೇಯಿಸಬೇಕು. ಈ ಹಂತದಲ್ಲಿ ಆಗಾಗ್ಗೆ ಕೈಯಾಡಿಸುತ್ತಿದ್ದರೆ ತೊಕ್ಕು ಬಾಣಲೆಗೆ ಅಂಟಿಕೊಳ್ಳುವುದನ್ನು ತಪ್ಪಿಸಬಹುದು.

ಇದಾದ ಬಳಿಕ ಹುರಿದು ಪುಡಿ ಮಾಡಿಕೊಂಡಿರುವ ಮೆಂತ್ಯೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿ ಹೆಚ್ಚಿಸಲು ಬೇಕಿದ್ದರೆ ಸ್ವಲ್ಪ ಬೆಲ್ಲವನ್ನು ಸೇರಿಸಬಹುದು. ಸುಮಾರು ಒಂದು ನಿಮಿಷ ಕೈಯಾಡಿಸಿದ ಬಳಿಕ ಒಲೆಯನ್ನು ಆಫ್ ಮಾಡಿ.

ಟೊಮೆಟೊ ತೊಕ್ಕು ಸಂಪೂರ್ಣವಾಗಿ ತಣ್ಣಗಾದ ನಂತರ ಒಣಗಿದ ಹಾಗೂ ಸ್ವಚ್ಛವಾದ ಗಾಜಿನ ಜಾರ್‌ನಲ್ಲಿ ಹಾಕಿ ಸಂಗ್ರಹಿಸಿಡಬಹುದು.

ಯಾವುದರೊಂದಿಗೆ ಸವಿಯಬಹುದು?

ಟೊಮೆಟೊ ತೊಕ್ಕನ್ನು ಬಿಸಿ ಅನ್ನದೊಂದಿಗೆ ಸವಿಯಬಹುದು. ಇದರ ಜೊತೆಗೆ ಇಡ್ಲಿ, ದೋಸೆ ಮತ್ತು ಚಪಾತಿಯೊಂದಿಗೂ ತಿನ್ನಬಹುದು. ಟೊಮೆಟೊದ ಹುಳಿ, ಖಾರ ಹಾಗೂ ಸ್ವಲ್ಪ ಸಿಹಿ ರುಚಿಯ ಸಂಯೋಜನೆ ಈ ತೊಕ್ಕಿಗೆ ಉತ್ತಮ ರುಚಿ ನೀಡುತ್ತದೆ.

Read this: Koppa: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ; ಯುವತಿ ಆತ್ಮಹತ್ಯೆ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading