Honda Upcoming Cars India: ಹೋಂಡಾ ಕಂಪನಿಯು ಭಾರತ ಮಾರುಕಟ್ಟೆಯಲ್ಲಿ ಮತ್ತೊಂದು ಬೃಹತ್ ಹೆಜ್ಜೆ ಇರಿಸಲು ತಯಾರಿ ನಡೆಸಿದೆ.

Honda Upcoming Cars India: ಈ ಯೋಜನೆಯ ಅಂಗವಾಗಿ ಹೋಂಡಾ ಕಂಪನಿಯ ಈ ಕಾರುಗಳು ಬಜೆಟ್ ಫ್ರೆಂಡ್ಲಿ ಆಗಿರಲಿದೆ. ಒಟ್ಟು ಮೂರು ಅದ್ಭುತ ಸಾಮರ್ಥ್ಯವುಳ್ಳ ಎಲೆಕ್ಟ್ರಿಕ್ ಎಸ್ಯುವಿ ಕಾರುಗಳ ಬಿಡುಗಡೆಗೆ ಯೋಜನೆ ನಡೆಸುತ್ತಿದೆ.
ಹೌದು, 2030ರ ಒಳಗೆ ಹತ್ತು ಹೊಸ ಕಾರುಗಳನ್ನು ತರುತ್ತೇವೆ ಎಂದು ಈಗಾಗಲೇ ಹೋಂಡಾ ಕಂಪನಿಯು ಘೋಷಿಸಿದೆ. ಮುಂದಿನ 9 ತಿಂಗಳಲ್ಲಿ ಮೂರು ಹೊಸ ಮಾಡೆಲ್ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.
ಮುಂದಿನ ದಿನಗಳಲ್ಲಿ ಈ ಯೋಜನೆ ಯಾವಾಗವಾಗಿ ಹೊಸ ಸಾಮರ್ಥ್ಯವುಳ್ಳ ಪೆಟ್ರೋಲ್, ಹೈಬ್ರಿಡ್ ಹಾಗೂ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಬೇಕೆಂದು ಕಂಪನಿಯು ಸಿದ್ಧತೆ ಮಾಡಿಕೊಳ್ಳುತ್ತಿದೆ.
Honda Upcoming Cars India: ಈಗಾಗಲೇ ತಯಾರಾಗಿರುವ ಮೂರು ಕಾರುಗಳ ಪರಿಚಯ ಈ ರೀತಿಯಾಗಿದೆ:
ಹೋಂಡಾ ಆಲ್ಫಾ:
ಹೋಂಡಾ ಅಲ್ಫಾ ಎನ್ನುವುದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಹೋಂಡಾ ಕಂಪನಿಯ ಮೊದಲ ಸಂಪೂರ್ಣ ಹೊಸ ಆವೃತ್ತಿಯಾಗಿದೆ. ಇದು ಮಾರುಕಟ್ಟೆಗೆ 2027ರಲ್ಲಿ ಬರುವ ನಿರೀಕ್ಷೆ ಇದೆ. ಹಾಗೂ ಇದು ಎಲೆಕ್ಟ್ರಿಕ್ ಎಸ್ಯುವಿ ಆಗಿದೆ.
ಎಕ್ಸ್ ಶೋರೂಮಿನ ಅಂದಾಜಿನ ಪ್ರಕಾರ ಈ ಕಾರಿನ ಪ್ರಾರಂಭಿಕ ಬೆಲೆ 17 ಲಕ್ಷಗಳು ಇರಬಹುದು ಎಂದು ಊಹಿಸಲಾಗಿದೆ. ಜೊತೆಗೆ ಕಾರಣ ವಿನ್ಯಾಸ ಅತ್ಯಂತವಾಗಿ ಮಾಡಲಾಗಿದೆ.
ಕಾರಿನ ಹೊರ ನೋಟ ಬಾಕ್ಸ್ ಆಕಾರದಲ್ಲಿದೆ. ಮತ್ತು ಕನಿಷ್ಠ ಮಟ್ಟದ ಹಾಗೂ ಸ್ವಚ್ಛವಾದ ವಿನ್ಯಾಸವನ್ನು ಮಾಡಲಾಗಿದೆ.
ಇನ್ನು, ಇಂಡೋನೇಷಿಯಾದಿಂದ ಆಮದು ಮಾಡಿಕೊಳ್ಳಲಾಗುವ ಎರಡು ವಿಭಿನ್ನ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇನ್ನು ಈ ಕಾರಿನ ಒಳಾಂಗಣದಲ್ಲಿ ದೊಡ್ಡದಾದ ಟಚ್ ಸ್ಕ್ರೀನ್ ಡಿಜಿಟಲ್ ವಿನ್ಯಾಸವನ್ನು ಮಾಡಲಾಗಿದೆ.
ಇದು ಪ್ರಸ್ತುತ ಇರುವ ಹೋಂಡಾ ಸರಣಿಗಳ ಕಾರುಗಳಲ್ಲಿ ಇರುವಂತಹ ಪರದೆಗಳಿಗಿಂತ ದೊಡ್ಡದಾಗಿದೆ.
ಇನ್ನೂ ಚಾಲಕನಿಗಾಗಿ ಪ್ರತ್ಯೇಕವಾಗಿ ಸ್ಟೇರಿಂಗ್ ವೀಲ್ ಹಿಂಭಾಗದಲ್ಲಿ ಮತ್ತೊಂದು ಸ್ಕ್ರೀನ್ ಅಳವಡಿಸಲಾಗಿದೆ. ಇದು ಇನ್ನಿತರ ಎಲೆಕ್ಟ್ರಿಕ್ ಎಸ್ ಯು ವಿ ಗಳಿಗೆ ಸ್ಪರ್ಧೆ ನೀಡುವ ಸಾಧ್ಯತೆಗಳಿವೆ.
ಈ ಕಾರು SUV 60–70 kWh ಬ್ಯಾಟರಿ ಬ್ಯಾಕ್ ನೊಂದಿಗೆ ಬರುವ ಸಾಧ್ಯತೆ ಇದೆ. ಹಾಗೂ ಸುಮಾರು 450 ಕಿಲೋಮೀಟರ್ ವರೆಗೂ ಚಾಲನೆ ಮಾಡಬಹುದು.
ಹೋಂಡಾ ZR-V:
ಹೋಂಡಾ ZR V ಕಾರನ್ನು ಅಧಿಕೃತವಾಗಿ ಹೋಂಡಾ ಕಂಪನಿಯು ಮೇ ತಿಂಗಳಲ್ಲಿ ಅನಾವರಣಗೊಳಿಸಿದೆ. ಇನ್ನು ಈ ಕಾರು ಜುಲೈ 2026 ರಲ್ಲಿ ರಸ್ತೆಗಳಿಗೆ ಇಳಿಯುವ ಸಾಧ್ಯತೆ ಇದೆ.
ಈಗಾಗಲೇ ಕಾರಿನ ಪ್ರೀ ಬುಕಿಂಗ್ ಆರಂಭಗೊಂಡಿದೆ. ಜುಲೈ ತಿಂಗಳ ಮಧ್ಯಭಾಗದಿಂದ ಕಾರಿನ ವಿತರಣೆ ನಡೆಯಲಿದೆ.
ಇನ್ನು ಹೋಂಡಾ ZR-V ಕಾರು ಪ್ರಮುಖ ನಾಲ್ಕು ಬಣ್ಣಗಳಾದ ಟ್ವಿಲೈಟ್ ಮಿಸ್ಟ್ ಬ್ಲ್ಯಾಕ್ ಪರ್ಲ್ (Twilight Mist Black Pearl), ಪ್ಲಾಟಿನಂ ವೈಟ್ ಪರ್ಲ್ (Platinum White Pearl), ಮೆಟಿಯೊರಾಯ್ಡ್ ಗ್ರೇ ಮೆಟಾಲಿಕ್ (Meteoroid Gray Metallic), ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ (Crystal Black Pearl) ಗಳಲ್ಲಿ ಲಭ್ಯವಿದೆ.
ಇನ್ನು, ಭಾರತಕ್ಕೆ ಈ ಕಾರನ್ನು ಸಂಪೂರ್ಣವಾಗಿ ಸಿದ್ಧಪಡಿಸಿದ ವಾಹನವನ್ನಾಗಿಸಿ ಜಪಾನ್ ನಿಂದ ಆಮದು ಮಾಡಿಕೊಳ್ಳುತ್ತಿತ್ತು. ಮತ್ತು ಅಂದಾಜು ಷೋರೂಮ್ ಬೆಲೆ 40 ರಿಂದ 50 ಲಕ್ಷದ ತನಕ ಇರಲಿದೆ.
ಈ ಕಾರು ಪ್ರೀಮಿಯಂ ಮಿಡ್-ಸೈಜ್ ಕ್ರಾಸ್‌ಓವರ್ ಎಸ್‌ಯುವಿ ಆಗಿದೆ. ಜೊತೆಗೆ 2.0-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಇಂಜಿನ್ ಅನ್ನು ಹೊಂದಿದೆ.
ಇದರಲ್ಲಿ ಪೆಟ್ರೋಲ್ ಇಂಜಿನ್ ಮತ್ತು ಡ್ಯುಯಲ್ ಮೋಟಾರ್ ಎಲೆಕ್ಟ್ರಿಕ್ ವ್ಯವಸ್ಥೆ ಇದೆ.
ಪ್ರತಿ ಲೀಟರ್ಗೆ 22.8 ಕಿಮೀ ಮೈಲೇಜ್ ನೀಡುವ ಸಾಧ್ಯತೆ ಇದೆ. ಆಟೋಮೆಟಿಕ್ ಗೇರ್ ಬಾಕ್ಸ್ ಇರಲಿದೆ. ಹಾಗೂ ನಾರ್ಮಲ್, ಸ್ಪೋರ್ಟ್, ಎಕೋ ಮತ್ತು ಸ್ನೋ ಎಂಬಂತೆ ಒಟ್ಟು ನಾಲ್ಕು ಡ್ರೈವಿಂಗ್ ಮೋಡ್ ಗಳಿವೆ.
ಈ ಕಾರಿನಲ್ಲಿ ಸುರಕ್ಷಿತಾ ದೃಷ್ಟಿಯಿಂದ ಎಂಟು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. 350 ಡಿಗ್ರಿ ಕ್ಯಾಮೆರಾ ವ್ಯವಸ್ಥೆಯನ್ನು ಜೋಡಿಸಲಾಗಿದೆ. ಇನ್ನು ಎಲ್ಲ ಕಾರುಗಳಲ್ಲಿ ಇರುವಂತಹ ಸಾಂಪ್ರದಾಯಿಕವಾಗಿ ಕಾರಿನ ಒಳಗಡೆ ಗೇರ್ ಲಿವರ್ ಇರುವುದಿಲ್ಲ.
ಅದರ ಬದಲಾಗಿ ಅದಕ್ಕೆ ಕ್ಲೀನ್ ಬಟನ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಇಲ್ಲಿ ಬಟನ್ ಗಳ ಮೂಲಕ ಗೇರ್ ಚೇಂಜ್ ಮಾಡಬೇಕಾಗುತ್ತದೆ.
ಮತ್ತು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋಮ್ಯಾಟಿಕ್ ಟೈಲ್‌ಗೇಟ್ ವ್ಯವಸ್ಥೆ ಇರುತ್ತದೆ.
ಹಾಗೂ ಕಾರಿನ ಒಳಭಾಗದಲ್ಲಿ 9 ಇಂಜಿನ ಟಚ್ ಸ್ಕ್ರೀನ್ ಸಿಸ್ಟಮ್ ಇರುತ್ತದೆ. 10.2 ಇಂಚಿನ ಡಿಜಿಟಲ್ ಕ್ಲಸ್ಟರ್ ಇರಲಿದೆ.
ಹೋಂಡಾ ಎಲಿವೇಟ್ 2026:
ಇದು 2026ರಲ್ಲಿ ದೇಶದಲ್ಲಿ ದಕ್ಷ ಮಿಡ್ ಸೈಜ್ ಎಸ್ಯುವಿ ಆಗಿ ಮುಂದುವರೆಯುತ್ತಿದೆ. ಇದೀಗ ಹೊಸದಾಗಿ ಬ್ಲಾಕ್ ಎಡಿಷನ್ ನಲ್ಲಿ ಲಭ್ಯವಿದೆ. ಇದು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಇಂಜಿನ್ ಹೊಂದಿದೆ.
ಇದರ ಶೋರೂಮ್ ಬೆಲೆ ಸುಮಾರು 11.60 ಲಕ್ಷದಿಂದ ಪ್ರಾರಂಭವಾಗಿ 16.67 ಲಕ್ಷದವರೆಗೆ ಇದೆ.
ಹೋಂಡಾ ಎಲಿವೇಟ್ 2026 ಮೈಲೇಜ್ ವಿಷಯಕ್ಕೆ ಬಂದಾಗ ಮ್ಯಾನುವಲ್ ವೇರಿಯಂಟ್ ಗೆ 15.31ಕಿಮೀ. ಹಾಗೂ ಆಟೋಮ್ಯಾಟಿಕ್ ವೇರಿಯಂಟ್ ಗೆ 16.92ಕಿಮೀ ನೀಡಲಿದೆ.
ಮತ್ತು ಇದರಲ್ಲಿ 6 ಸ್ಪೀಡ್ ಮಾನ್ಯುಯಲ್ ಹಾಗೂ 7 ಸ್ಟೆಪ್ ಸಿವಿಟಿ (CVT ) ಗೇರ್ ಬಾಕ್ಸ್ ವ್ಯವಸ್ಥೆ ಇದೆ.
ಹೋಂಡಾ ಕಂಪನಿಯು ಹೋಂಡಾ ಎಲಿವೇಟ್ ನ ಮುಂದಿನ ಹೊಸ ಆವೃತ್ತಿಯ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿದೆ.
ಅದು 2026ರ ಕೊನೆಯಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಹಾಗೂ ಹೊಸ ಕಾರಿನಲ್ಲಿ ಕನೆಕ್ಟೆಡ್ ಎಲ್ಇಡಿಗಳು ಮತ್ತು 27.1ಕಿಮೀ ಮೈಲೇಜ್ ನೀಡುವ ದಕ್ಷ ಇಂಜಿನ್ ಹೊಂದಿರುವ ಸಾಧ್ಯತೆ ಇದೆ.
ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಕಾರು 220mm ಗ್ರೌಂಡ್ ಕ್ಲಿಯರೆನ್ಸ್. ಹಾಗೂ 458 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಇನ್ನು, ಹೋಂಡಾ ಎಲಿವೇಟ್ ಸುಮಾರು 13 ಮಾದರಿಗಳಲ್ಲಿ ಲಭ್ಯವಾಗಿದೆ. ಹಾಗೂ ಪ್ರತಿಯೊಂದು ಮಾದರಿಯೂ ತನ್ನದೇ ಆದ ವಿಶೇಷಗಳನ್ನು ಒಳಗೊಂಡಿದೆ.
ಮಾದರಿಗಳು ಇಂತಿವೆ:
ಬೇಸ್ ಮಾಡೆಲ್ SV:
ಈ ಮಾಡೆಲ್ ನಲ್ಲಿ ಆರು ಏರ್ ಬ್ಯಾಗ್ ಗಳು ಲಭ್ಯವಿದೆ. 11.60 ಲಕ್ಷ ಈ ಕಾರಿನ ಮಾರುಕಟ್ಟೆಯ ಪ್ರಾರಂಭಿಕ ಬೆಲೆ ಆಗಿರುತ್ತದೆ. ಹಾಗೂ 16 ಇಂಚುಗಳ ಅಲಾಯ ವೀಲ್ಗಳು ಸಿಗುತ್ತವೆ.
ಮಿಡ್ ಮಾಡೆಲ್ VX:
ಈ ಹೋಂಡಾ ಕಾರುಗಳಲ್ಲಿ ಎಲೆಕ್ಟ್ರಿಕ್ ಸನ್ ರೂಫ್ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋ ಲಭ್ಯವಿದೆ. ಆರಂಭಿಕ ಬೆಲೆ 13.75 ಲಕ್ಷ ರೂ ಆಗಿರುತ್ತದೆ.
ಟಾಪ್ ಮಾಡೆಲ್ ZX:
ಈ ಹೋಂಡಾ ಕಾರುಗಳಲ್ಲಿ ಸುರಕ್ಷತಾ ದೃಷ್ಟಿಯಿಂದಾಗಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ ನಂತಹ ದಕ್ಷ ತಂತ್ರಜ್ಞಾನವಿದೆ. 14.98 ಲಕ್ಷ ರೂ ಈ ಕಾರಿನ ಆರಂಭಿಕ ಬೆಲೆ ಆಗಿರುತ್ತದೆ.
ಬ್ಲಾಕ್ ಎಡಿಷನ್:
ಈ ಹೋಂಡಾ ಕಾರಿನ ಪ್ರಾರಂಭಿಕ ಬೆಲೆಯು ₹15.07 ಲಕ್ಷ ರೂ ಆಗಿದೆ. ಇದು ಸಂಪೂರ್ಣವಾಗಿ ಕಪ್ಪುಬಣ್ಣದಿಂದ ಕೂಡಿರುತ್ತದೆ. ಮತ್ತು ಪ್ರೀಮಿಯರ್ ಲುಕ್ ನ ಅನುಭವವನ್ನು ನೀಡುತ್ತದೆ.
ಅಡ್ವೆಂಚರ್ ಎಡಿಷನ್ ADU:
ಈ ಕಾರುಗಳು ಆಫ್ ರೋಡಿಗೆ ಹೊಂದುವಂತಹ ಖಡಕ್ ಆಗಿರುವಂತಹ ಡಿಸೈನ್. ಹಾಗೂ ವಿನ್ಯಾಸಗಳನ್ನು ಹೊಂದಿದೆ. ಇದರ ಪ್ರಾರಂಭಿಕ ಬೆಲೆ 15.39 ಲಕ್ಷ ರೂ ಆಗಿರುತ್ತದೆ.
ಈಗಾಗಲೇ 2030ರ ಗುರಿಯತ್ತ ಹೋಂಡಾ ಕಂಪನಿಯು ಹೊರಟಿದೆ. ಈ ಮೂಲಕ ಅತಿ ಹೆಚ್ಚು ಜನರನ್ನು ತಲುಪುವ ನಿರೀಕ್ಷೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಬರುತ್ತಿರುವಂತಹ ಕಾರುಗಳು ಜನರಿಗೆ ಹೆಚ್ಚಿನ ಆಯ್ಕೆಯನ್ನು ನೀಡಬಹುದಾಗಿದೆ.
ಇನ್ನಷ್ಟು ಮಾಹಿತಿಗಾಗಿ: HONDA CARS INDIA
ಇದನ್ನು ಓದಿ: LIFE LESSONS