Government schemes for farmers: ಕೇಂದ್ರದ ಪ್ರಮುಖ ಕೃಷಿ ಯೋಜನೆಗಳು

Spread the love

Government schemes for farmers: ರೈತ ದೇಶದ ಬೆನ್ನೆಲುಬು ಎಂಬಂತೆ. ಭಾರತ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

Government schemes for farmers
Government schemes for farmers

Government schemes for farmers: ಚಿಕ್ಕ ಪ್ರಮಾಣದ ರೈತ ಸಮುದಾಯದಿಂದ ಹಿಡಿದು, ದೊಡ್ಡ ಮಟ್ಟದ ರೈತರ ತನಕ ಈ ಯೋಜನೆಗಳು ಹರಡಿದೆ. ಹಾಗೂ ರೈತರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.

Government schemes for farmers:ಭಾರತ ಸರ್ಕಾರವು ರೈತರಿಗಾಗಿ ರೂಪಿಸಿರುವ ಪ್ರಮುಖ ಯೋಜನೆಗಳು. ಹಾಗೂ ಅದರ ವಿವರಗಳು ಈ ಕೆಳಗಿನಂತಿವೆ:

 

1. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ: 

ಈ ಯೋಜನೆಯನ್ನು ಭಾರತ ಸರ್ಕಾರವು ಫೆಬ್ರವರಿ 24, 2019 ರಂದು ಜಾರಿಗೊಳಿಸಿದೆ. ಇದು ಕೇಂದ್ರ ವಲಯಕ್ಕೆ ಸಂಬಂಧಪಟ್ಟಿರುತ್ತದೆ. ಹಾಗೂ ಎಲ್ಲಾ ಭೂ ಹಿಡುವಳಿ ರೈತರ ಆರ್ಥಿಕ ಸಂಕಷ್ಟಗಳಿಗೆ ಸಹಾಯಕವಾಗಿದೆ.

ಇಲ್ಲಿ ವರ್ಷಕ್ಕೆ ಆರು ಸಾವಿರ ರೂಗಳಂತೆ ವರ್ಷದಲ್ಲಿ ಮೂರು ಬಾರಿ ರೈತರ ಖಾತೆಗಳಿಗೆ ನೇರವಾಗಿ 2,000 ಜಮಾಗೊಳ್ಳುತ್ತದೆ.

ಇದುವರೆಗೂ ಸುಮಾರು 11 ಕೋಟಿಗೂ ಹೆಚ್ಚು ರೈತರು ಇದರ ಫಲಾನುಭವಿಗಳಾಗಿದ್ದಾರೆ. ಹಾಗೂ ಒಟ್ಟಾರೆಯಾಗಿ 2.81 ಲಕ್ಷ ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಿರುವಂತದ್ದು.

ಇತ್ತೀಚೆಗೆ 23ನೇ ಕಾಂತಿನ ಹಣ ಎಲ್ಲ ರೈತರ ಖಾತೆಗಳಿಗೆ ಜಮಾಗೊಂಡಿದೆ. ಅಧಿಕೃತ ವೆಬ್ಸೈಟ್ ಮೂಲಕ ಪ್ರತಿ ಕಂತುಗಳ ಸ್ಟೇಟಸ್ ಹಾಗೂ ಎಲ್ಲಾ ರೀತಿಯ ದಾಖಲೆಗಳ ಪರಿಶೀಲನೆಯನ್ನು ಮಾಡಬಹುದು. ಹಾಗೂ ಇತ್ತೀಚಿನ ಆದೇಶಗಳ ಪ್ರಕಾರ ಇ ಕೆವೈಸಿ ಕಡ್ಡಾಯವಾಗಿರುತ್ತದೆ.

 

2. ಪ್ರಧಾನಮಂತ್ರಿ ಕಿಸಾನ್ ಮನ್ ದನ್ ಯೋಜನೆ:

ಈ ಯೋಜನೆಯನ್ನು ಕೇಂದ್ರ ಸರ್ಕಾರವು ಅತ್ಯಂತ ದುರ್ಬಲ ವರ್ಗದ ರೈತರಿಗಾಗಿ ರೂಪಿಸಲಾಗಿದೆ. ಸೆಪ್ಟೆಂಬರ್ 12, 2019 ರಂದು ಜಾರಿಗೊಳಿಸಲಾಗಿದೆ. ಇದು ಒಂದು ರೀತಿಯ ಪಿಂಚಣಿ ಸೇವೆಯಾಗಿದ್ದು 60 ವರ್ಷದ ನಂತರ ರೈತರಿಗೆ ಖಚಿತವಾಗಿ ತಿಂಗಳಿಗೆ 3000 ಪಿಂಚಣಿ ನೀಡುವ ಯೋಜನೆಯಾಗಿದೆ.

ಅರ್ಹತೆಗಳು: 

A.ರೈತರು ಸಣ್ಣ ಮತ್ತು ಅತಿ ಸಣ್ಣ ವರ್ಗಕ್ಕೆ ಸಂಬಂಧಪಟ್ಟ ರೈತರಾಗಿರಬೇಕು.

B. ಲಾಭ ಪಡೆದುಕೊಳ್ಳಲು ಬಯಸುವ ರೈತರು 18ರಿಂದ 40 ವರ್ಷದ ಒಳಗಿನವರಾಗಿರಬೇಕು.

C. ಹಾಗೂ ಕನಿಷ್ಠ 2 ಹೆಕ್ಟೇರ್ ಭೂಮಿ ಹೊಂದಿರಬೇಕು.

ಈವರೆಗೂ 23.38 ಲಕ್ಷ ರೈತರು ಇದರ ಲಾಭ ಪಡೆದುಕೊಂಡಿದ್ದಾರೆ. ಹಾಗೂ ಒಂದು ವೇಳೆ ರೈತ ಮರಣ ಹೊಂದಿದಲ್ಲಿ ಶೇಕಡ 50, ಅಂದ್ರೆ 1500 ರೂ ಗಳು ಮಾಸಿಕವಾಗಿ ಅವರ ಪತ್ನಿಗೆ ದೊರೆಯುತ್ತದೆ .

 

3. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ:

2016ರಲ್ಲಿ ಈ ಯೋಜನೆಯನ್ನು ಪ್ರಾರಂಭಗೊಳಿಸಲಾಗಿತ್ತು. ಇದು ಯಾವುದೇ ಸಂದರ್ಭದಲ್ಲಿ ಬೆಳೆ ಹಾನಿ ಉಂಟಾದಾಗ ಸಹಾಯ ಮಾಡುತ್ತದೆ. ಬಿತ್ತನೆ ಪೂರ್ವದಿಂದ ಹಿಡಿದು ಕೊಯ್ಲಿನ ತನಕ ಉಂಟಾಗುವ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳಿಂದಲೂ ಕೂಡ ಇದು ರೈತರನ್ನು ಸಂರಕ್ಷಿಸುತ್ತದೆ. ಹಾಗೂ ಎಲ್ಲಾ ರೀತಿಯ ರೈತರಿಗ ಇದು ದೊರೆಯಲಿದೆ. ಈವರೆಗೂ ಸರಿಸುಮಾರು 5549.40 ಲಕ್ಷ ರೈತರು ಈ ಯೋಜನೆಯಡಿ ನೊಂದಾವಣೆಗೊಂಡಿದ್ದಾರೆ. 

 

4. ಮಾರ್ಪಡಿಸಿದ ಬಡ್ಡಿ ಸಹಾಯ ಯೋಜನೆ ( MISS):

ಈ ಯೋಜನೆ ಮೂಲಕ ರೈತರು 3 ಲಕ್ಷ ರೂ ಅಲ್ಪಾವಧಿ ಸಾಲವನ್ನು 7% ಬಡ್ಡಿದರದಲ್ಲಿ ಪಡೆದುಕೊಳ್ಳಬಹುದಾಗಿದೆ. ಹಾಗೂ ಸಾಲ ಪಡೆದುಕೊಂಡರೆ ನಿಗದಿತ ಸಮಯ ಅಂದರೆ ಒಂದು ವರ್ಷದ ಒಳಗಡೆ ಸಾಲವನ್ನು ತೀರಿಸಿದರೆ ಸರ್ಕಾರವು ಹೆಚ್ಚುವರೆಯಾಗಿ ಶೇಕಡ ಮೂರರಷ್ಟು ಸಬ್ಸಿಡಿ ನೀಡುತ್ತದೆ.

ಇದರಿಂದಾಗಿ ಪ್ರಾಮಾಣಿಕ ರೈತರಿಗೆ ಬಡ್ಡಿದಾರ ಕೇವಲ 4% ಆಗಿರುತ್ತದೆ.

 

5.ಕೃಷಿ ಮೂಲಸೌಕರ್ಯ ನಿಧಿ ( AIF ):

ಈ ಯೋಜನೆ ಮೂಲಕ ಸುಗ್ಗಿ ನಂತರದಲ್ಲಿ ನಿರ್ವಹಣೆ. ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರವು ಎರಡು ಕೋಟಿ ರೂಗಳ ತನಕ ಸಾಲ ನೀಡುತ್ತದೆ. ಗೋದಮುಗಳು, ಶೀತಲಿಕರಣ ಘಟಕಗಳು, ಸಾವಯವ ಗೊಬ್ಬರಗಳು ಉತ್ಪಾದನೆ ಘಟಕಗಳು, ಇ ಮಾರ್ಕೆಟ್ ಪ್ಲಾಟ್ ಫಾರ್ಮುಗಳು,

ಹಾಗೂ ಆಹಾರ ಸಂಸ್ಕರಣ ಘಟಕಗಳಿಗೆ ಈ ಯೋಜನೆಯಿಂದ ಹಣ ಸಹಾಯ ದೊರೆಯಲಿದೆ.

 

6. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:

 

ಈ ಯೋಜನೆಯು ಇತ್ತೀಚೆಗೆ ಪುನರ್ ರಚಿಸಲ್ಪಟ್ಟಿದೆ. ಈ ಯೋಜನೆಯನ್ನು 2007ರಲ್ಲಿ ಜಾರಿಗೊಳಿಸಲಾಗಿದೆ. ಕೃಷಿ ಕ್ಷೇತ್ರ ಹಾಗೂ ಅದಕ್ಕೆ ಸಂಬಂಧಪಟ್ಟ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕ ಹೂಡಿಕೆಯನ್ನು ಉತ್ತೇಜನಗೊಳಿಸುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಹಾಗೂ ಆಯಾ ರಾಜ್ಯದ ಕೃಷಿ ಮತ್ತು ಸಂಪನ್ಮೂಲ ಹಾಗೂ ಅಲ್ಲಿನ ಹವಾಮಾನಗಳ ಆಧಾರದ ಮೇಲೆ ಅಲ್ಲಿ ಕೃಷಿ ಯೋಜನೆಗಳನ್ನ ರೂಪಿಸುವಂತಹದ್ದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

 

7. ಮಣ್ಣಿನ ಆರೋಗ್ಯ ಕಾರ್ಡ್ (SHC) :

 

ಈ ಒಂದು ಯೋಜನೆಯ ಮೂಲಕ ರೈತರಿಗೆ ಅವರ ಭೂಮಿಯ ಮಣ್ಣಿನ ಆರೋಗ್ಯದ ಕುರಿತಾಗಿ ತಿಳಿಸಲಾಗುತ್ತದೆ. ಈ ಒಂದು ಮಣ್ಣಿನ ಆರೋಗ್ಯದ ಕಾರ್ಡ್ ಪ್ರತಿ ಮೂರು ವರ್ಷಗಳಿಗೊಮ್ಮೆ ಬದಲಾಗುತ್ತದೆ. ಮಣ್ಣಿನ ತಪಾಸಣೆಯ ನಂತರ ಆ ಮಣ್ಣಿಗೆ ಅಗತ್ಯವಿರುವ ಪೋಷಕಾಂಶಗಳ ಕುರಿತಾಗಿ ತಿಳಿಸಲಾಗುತ್ತದೆ.

ಮಣ್ಣಿನ ಫಲವತ್ತತೆಯನ್ನು ತಿಳಿದು ರೈತರಿಗೆ ಸಹಾಯಕವಾಗುವಂತೆ ಈ ಒಂದು ಯೋಜನೆಯನ್ನು ರೂಪಿಸಲಾಗಿದೆ.

 

8. ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ (RAD) :

ಈ ಯೋಜನೆಯನ್ನು ಪ್ರಸ್ತುತ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ಯೋಜನೆ ಅಡಿಯಲ್ಲಿ ದೇಶದಾದ್ಯಂತ ಜಾರಿಗೊಳಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಮಳೆ ಆದರಿಸಿರುವ ಪ್ರದೇಶಗಳಲ್ಲಿ ಕೃಷಿಯ ಉತ್ತೇಜನ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ. ಹಾಗೂ ಸಮಗ್ರ ಕೃಷಿ ಅಭಿವೃದ್ಧಿಯನ್ನು ಉತ್ತೇಜಿಸಲಾಗುತ್ತದೆ.

ಬೆಳೆಗಳನ್ನು ಬೆಳೆಯುವುದರ ಜೊತೆಗೆ ಇತರ ಚಟುವಟಿಕೆಗಳಾದ ಮೀನುಗಾರಿಕೆ ಸೇರಿದಂತೆ ಹಲವು ಸಾಕಾಣಿಕೆಗಳನ್ನು ಈ ಯೋಜನೆ ಅಡಿ ಉತ್ತೇಜಿಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ: Press Information Bureau 

9. ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY) :

ಈ ಯೋಜನೆಯ ಉದ್ದೇಶವೇನೆಂದರೆ, ಸಾವಯವ ಕೃಷಿಯನ್ನು ಉತ್ತೇಜಿಸುವುದು ಹಾಗೂ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವುದಾಗಿದೆ. ಪರಂಪರೆಯಿಂದ ಬಂದಂತೆ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಮಣ್ಣಿನ ಗುಣಮಟ್ಟವನ್ನು ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತ ಸಾವಯವ ಕೃಷಿಯನ್ನು ಉತ್ತೇಜಿಸುವುದು. ಇಲ್ಲಿನ ಮುಖ್ಯ ಉದ್ದೇಶ ಹಾಗೂ ಇದಕ್ಕಾಗಿ ಸರ್ಕಾರದಿಂದ ಆರ್ಥಿಕ ನೆರವು ಕೂಡ ದೊರೆಯುತ್ತದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದಕ್ಕೆ ಆರ್ಥಿಕ ನೆರವನ್ನು ನೀಡುತ್ತವೆ.

 

10. ಡಿಜಿಟಲ್ ಕೃಷಿ:

ಡಿಜಿಟಲ್ ಕೃಷಿ ರೈತರಿಗೆ ಮಣ್ಣಿನ ಗುಣಮಟ್ಟ, ಹವಮಾನ ವರದಿ ಇತ್ಯಾದಿಗಳನ್ನು ತಿಳಿಯಲು ಸಹಾಯಕವಾಗುತ್ತದೆ. ಇಲ್ಲಿ ಡ್ರೋನ್ ಕೃತಕ ಬುದ್ಧಿಮತ್ತೆ ಹಾಗೂ ಜಿಪಿಎಸ್ ಮ್ಯಾಪಿಂಗ್ ಮೂಲಕ ಡಿಜಿಟಲ್ ಕೃಷಿಯನ್ನು ಉತ್ತೇಜನಗೊಳಿಸಲಾಗುತ್ತಿದೆ.

ಈ ಮೂಲಕ ಬೆಳೆಯ ಕುರಿತಾಗಿ ಮೊದಲೇ ತಿಳುವಳಿಕೆ ದೊರೆಯಲಿದೆ ಜೊತೆಗೆ ಹವಮಾನವ ಪರಿತ್ಯದ ಕುರಿತಾದ ಸಲಹೆ. ಹಾಗೂ ಮಣ್ಣಿನ ಗುಣಮಟ್ಟಕ್ಕೆ ಅಗತ್ಯ ಇರುವ ಸಲಹೆಗಳನ್ನು ನಾವು ಈ ಮೂಲಕ ತಿಳಿದುಕೊಳ್ಳಬಹುದು.

ಇದು ಅನಗತ್ಯ ಕರ್ಚುಗಳನ್ನು ತಪ್ಪಿಸುವುದಲ್ಲದೆ ಬೆಳೆಯಲ್ಲಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಲು ಸಹಾಯಕವಾಗಿದೆ.

 

11. ನಮೋ ಡ್ರೋನ್ ದೀದಿ:

ಈ ಯೋಜನೆ ಮೂಲಕ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ಜೊತೆಗೆ ಕೃಷಿ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ. ಇಲ್ಲಿ ಸರಿ ಸುಮಾರು 15 ಸಾವಿರ ಸ್ವಸಹಾಯ ಸಂಘಗಳಿಗೆ ಡ್ರೋನ್ ನೀಡಿದೆ.

ಈ ಮೂಲಕ ಮಹಿಳೆಯರು ಡ್ರೋನ್ ನಿಂದಾಗಿ ರಾಸಾಯನಿಕಗಳ ಸಿಂಪಡನೆ ಇತ್ಯಾದಿ ಕೆಲಸಗಳನ್ನು ಬಾಡಿಗೆ ಆಧಾರಿತವಾಗಿ ಮಾಡುವ ಮೂಲಕ ಅವರು ಸ್ವಯಂ ಉದ್ಯೋಗಿಗಳಾಗಬಹುದು.

ಇದರಿಂದಾಗಿ ಕೃಷಿಯನ್ನು ಕೂಡ ಡಿಜಿಟಲೀಕರಣ ಉತ್ತೇಜನವಾಗುತ್ತದೆ. ಹಾಗೂ ಡ್ರೋನ್ ಖರೀದಿಗೆ ಸಾಲ ಸೌಲಭ್ಯಗಳಿದ್ದು, 15 ದಿನಗಳ ತರಬೇತಿಯನ್ನು ಕೂಡ ನೀಡಲಾಗುತ್ತದೆ.

ರೈತರ ಅಭಿವೃದ್ಧಿ ಹಾಗೂ ಕೃಷಿ ಉತ್ಪಾದನೆಗಳ ಬೆಳವಣಿ ಮೀಗೆಗೆ ಕುರಿತಾಗಿ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೂ ಈ ಯೋಜನೆಗಳ ಕುರಿತಾದ ಇನ್ನಷ್ಟು ಮಾಹಿತಿಗಳನ್ನು ಅಧಿಕೃತ ವೆಬ್ಸೈಟ್ನ ಮೂಲಕ ತಿಳಿದುಕೊಳ್ಳಬಹುದು.

ಇದನ್ನು ಓದಿ: Honda upcoming cars 

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading