Government Schemes for Women:ಮಹಿಳೆಯರಿಗೆ ಕೇಂದ್ರದ ಯೋಜನೆಗಳು

Spread the love

Government Schemes for Women:ಸ್ತ್ರೀ ಅಬಲೆಯಲ್ಲ ಎಂದು ಸಾರುವುದಕ್ಕಾಗಿ ಭಾರತ ಸರ್ಕಾರವು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

Government Schemes for Women
Government Schemes for Women

Government Schemes for Women: ಈಗಾಗಲೇ ಹಲವು ಸಂಖ್ಯೆಗಳಲ್ಲಿ ಮಹಿಳೆಯರು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಮಿಂಚಬೇಕೆಂಬುದು ಈ ಯೋಜನೆಗಳ ಆಶಯವಾಗಿದೆ.

Government Schemes for Women: ಮಹಿಳೆಯರಿಗಾಗಿ ಜಾರಿಗೊಳಿಸಿದ ಯೋಜನೆಗಳು ಈ ರೀತಿ ಇವೆ:

 

1. ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನ ( MKSP ) :

ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ಮಹಿಳೆಯರನ್ನು ಕೃಷಿ ಕ್ಷೇತ್ರದಲ್ಲಿ ಸದೃಢಪಡಿಸುವುದಾಗಿದೆ. ಇಲ್ಲಿ ಪರಂಪರಾಗುತ್ತಾ ಕೃಷಿಯಲ್ಲಿರುವಂತೆ ಮಹಿಳೆಯರಿಗೆ ದೈಹಿಕ ಶ್ರಮವನ್ನು ಕಡಿಮೆ ಮಾಡಿಸುವುದು.

ಮತ್ತು ತಾಂತ್ರಿಕೀಕರಣ ವಿಧಾನವನ್ನು ಅಳವಡಿಸುವುದಾಗಿದೆ. ಇದಕ್ಕಾಗಿ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಕೃಷಿಯಲ್ಲಿ ಮಹಿಳಾ ಪಾಲನ್ನು ಹೆಚ್ಚಿಸಲಾಗುತ್ತಿದೆ.

 

2. ರಾಷ್ಟ್ರೀಯ ಮಹಿಳಾ ಕಿಸಾನ್ ಯೋಜನೆ:

ಈ ಯೋಜನೆಯ ಮೂಲಕ ಮಹಿಳೆಯರಿಗೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪಾಲನ್ನು ನೀಡುವುದು. ಹಾಗೂ ಕೃಷಿಯ ಕುರಿತಾದ ತರಬೇತಿಗಳನ್ನು ನೀಡುವ ಮೂಲಕ ಮತ್ತು ಕೃಷಿ ಉಪಕರಣಗಳ ಬಳಕೆಯನ್ನು ಆಕೆಗೆ ತಿಳಿಸಿಕೊಡುವುದು. ಈ ಮೂಲಕ ಆಕೆಯನ್ನು ಕೃಷಿ ಕ್ಷೇತ್ರದಲ್ಲಿ ಸಶಕ್ತಳನ್ನಾಗಿ ಮಾಡುವುದು ಈ ಯೋಜನೆಯ ಗುರಿಯಾಗಿದೆ.

ಹಾಗೂ ಕೃಷಿ ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆಗಳಲ್ಲಿ ಆಕೆಯ ಇರುವಿಕೆಯನ್ನು ಹೆಚ್ಚಿಸುವಂತದ್ದು. ಈ ನಿಟ್ಟಿನಲ್ಲಿ ಕೃಷಿ ಸಖಿ, ವನ ಸಖಿ ,ಪಶು ಸಖಿ ಎಂಬ ಜಾಲಗಳನ್ನು ಸೃಷ್ಟಿಸಲಾಗಿದೆ.

 

3. ಜನನಿ ಸುರಕ್ಷಾ ಯೋಜನೆ (JSY):

ಈ ಯೋಜನೆಯು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಬರುತ್ತದೆ. ಇಲ್ಲಿ ಮೂಲಕ ಬಡ ವರ್ಗಕ್ಕೆ ಸೇರಿದ ಗರ್ಭಿಣಿಯರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದನ್ನು ಪ್ರೋತ್ಸಾಹಿಸುವುದು. ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವವರು ಈ ಯೋಜನೆಗೆ ಅರ್ಹತೆ ಪಡೆದವರಾಗಿರುತ್ತಾರೆ. ಹಾಗೂ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ತಾಯಿ ಹಾಗೂ ಮಗು ಮತ್ತು ಹೆರಿಗೆಗೆ ಕರೆದುಕೊಂಡು ಬಂದ ಆಶಾ ಕಾರ್ಯಕರ್ತೆಯರಿಗೆ ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಮತ್ತು ಶಿಶು ಹಾಗೂ ತಾಯಿಯ ಮರಣ ಪ್ರಮಾಣವನ್ನು ತಗ್ಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

 

4. ಪ್ರಧಾನಮಂತ್ರಿ ಮಾತೃ ವಂದನ ಯೋಜನೆ:

ಈ ಯೋಜನೆ ಅಡಿಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ವಿಶೇಷವಾಗಿ 5000 ರೂ ನಗದು ಆರ್ಥಿಕ ಸಹಾಯವನ್ನು ನೀಡಲಾಗುವುದು.

ಈ ಯೋಜನೆಯ ಲಾಭ ಪಡೆದುಕೊಳ್ಳುವವರು ಬೇರೆ ಯಾವುದೇ ರೀತಿಯ ಯೋಜನೆಗಳಿಂದ ಈ ಕಾರಣಕ್ಕಾಗಿ ಲಾಭ ಪಡೆದುಕೊಂಡಿರಬಾರದು. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರಾಗಿರಬಾರದು.

 

5. ನಾರಿ ಶಕ್ತಿ ಪುರಸ್ಕಾರ:

ಮಹಿಳಾ ಸಬಲೀಕರಣ ಮತ್ತು ಸಾಧನೆಗಾಗಿ ನೀಡಲಾಗುವಂತಹ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪುರಸ್ಕಾರವೇ ಈ ನಾರಿ ಶಕ್ತಿ ಪುರಸ್ಕಾರವಾಗಿದೆ. ಹಾಗೂ ಈ ಪ್ರಶಸ್ತಿಯನ್ನು ಪ್ರತಿ ವರ್ಷ ಮಹಿಳಾ ದಿನಾಚರಣೆ ಎಂದು ನೀಡಲಾಗುವುದು.

ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವಂತಹ ಮಹಿಳೆಯರು ಅಥವಾ ಗುಂಪುಗಳು. ಅಥವಾ ಯಾವುದೇ ರೀತಿಯ ಸಂಘ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.

 

6. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP) :

ಇದೊಂದು ಪ್ರಮುಖ ಸಾಲ ಸೌಲಭ್ಯ ಯೋಜನೆಯಾಗಿದೆ. ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಇಲ್ಲಿ ವಿದ್ಯಾವಂತ ಹಾಗೂ ಉದ್ಯಮ ಆರಂಭಿಸಲು ಬಯಸುವವರಿಗೆ ಸ್ವಯಂ ಉದ್ಯೋಗವನ್ನು ಸ್ಥಾಪಿಸಲು ಉತ್ತೇಜಿಸಲಾಗುತ್ತದೆ. ಹಾಗೂ ಉದ್ಯೋಗಗಳ ಸ್ಥಾಪನೆಗೆ ಸಾಲ ಸೌಲಭ್ಯಗಳ ಆರ್ಥಿಕ ನೆರವನ್ನು ನೀಡಲಾಗುತ್ತದೆ.

 

7. ಉದ್ಯೋಗಿನಿ ಯೋಜನೆ :

ಇಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ತಮ್ಮದೇ ಆದ ಉದ್ಯೋಗವನ್ನು ಪ್ರಾರಂಭಿಸಲು ಆರ್ಥಿಕ ಸಹಕಾರವನ್ನು ನೀಡುತ್ತದೆ. ಮತ್ತು ಆ ಮಹಿಳೆಯನ್ನು ಉದ್ಯೋಗಿನಿಯಾಗಿ ಮಾಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಗರಿಷ್ಠ ಮೂರು ಲಕ್ಷದ ತನಕ ಸಾಲ ನೀಡಲಾಗುತ್ತದೆ.

ಹಾಗೂ ವಿಶೇಷವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ಶೇಕಡ 30%ರಷ್ಟು ಸಹಾಯಧನ ಸಬ್ಸಿಡಿ. ಮತ್ತು SC/ST ವರ್ಗಕ್ಕೆ ಸಂಬಂಧಿಸಿದ ಮಹಿಳೆಯರಿಗೆ ಶೇಕಡ 50%ರಷ್ಟು ಸಹಾಯಧನ ನೀಡಲಾಗುತ್ತದೆ.

 

8. ಮಹಿಳಾ ಉದ್ಯಮ ನಿಧಿ ( SIDBI ):

ಇಲ್ಲಿ ಮಹಿಳೆಯರಿಗೆ ಸಣ್ಣ ಪ್ರಮಾಣದ ಕೈಗಾರಿಕೆ ಅಥವಾ ಸೇವಾ ವಲಯದ ಉದ್ಯೋಗವನ್ನು ಸೃಷ್ಟಿಸಲು ಆರ್ಥಿಕ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಗರಿಷ್ಟ 10 ಲಕ್ಷದ ತನಕ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುವುದು. ಹಾಗೂ ಉದ್ಯಮದಲ್ಲಿ ಮಹಿಳೆಯರ ಪಾಲು ಶೇಕಡ 51% ರಷ್ಟು ಇರಬೇಕು.

 

9. ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ಯೋಜನೆಗಳು (NSIC) :

ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗಾಗಿ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಅಡಿಯಲ್ಲಿ, ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.

ಈ ಮೂಲಕ ದೇಶದಲ್ಲಿ ಈ ಯೋಜನೆಗಳು ಹಣಕಾಸು, ತಂತ್ರಜ್ಞಾನ, ಮಾರುಕಟ್ಟೆ ಮತ್ತು ನೋಂದಣಿಗೆ ಬೆಂಬಲವನ್ನು ನೀಡುತ್ತವೆ.

 

10. ಅಟಲ್ ಇನ್ನೋವೇಶನ್ ಮಿಷನ್ (AIM):

 

2016ರಲ್ಲಿ ಭಾರತ ಸರ್ಕಾರವು ನೀತಿ ಆಯೋಗದ ಅಡಿಯಲ್ಲಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿದೆ. ದೇಶದಲ್ಲಿ ನಾವಿನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸುವಂತಹದ್ದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸುವುದು. ಮತ್ತು ಸೃಜನಶೀಲತೆಯನ್ನು ಬೆಳೆಸಲಾಗುವುದು.

ಹಾಗೂ ಉದ್ಯಮಿಗಳಿಗೆ ಅಗತ್ಯವಿರುವ ಸೂಕ್ತ ಮಾರ್ಗದರ್ಶನ ಮತ್ತು ತಾಂತ್ರಿಕ ಬೆಂಬಲವನ್ನು ನೀಡಲಾಗುವುದು.

 

11. ಮಹಿಳಾ ಸಮೃದ್ಧಿ ಯೋಜನೆ ( MSY ):

ಇಲ್ಲಿ ಆರ್ಥಿಕವಾಗಿ ಸಶಕ್ತರಲ್ಲದಿರುವ ವರ್ಗಕ್ಕೆ ಸೇರಿದ ಮತ್ತು ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಕೈಗೊಳ್ಳಲು, ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತದೆ.

 

ಹಲವು ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಾಲ ಸೌಲಭ್ಯವನ್ನು ಆರ್ಥಿಕ ಸಹಾಯವನ್ನು ಒದಗಿಸುತ್ತಾ ಬಂದಿದೆ. ಹಾಗೂ ಅತಿ ಕಡಿಮೆ ಬಡ್ಡಿ ದರದಲ್ಲಿ. ಹಾಗೂ ಸಹಾಯ ಧನ ಮತ್ತು ಸಬ್ಸಿಡಿ ಸಹಿತ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಮತ್ತು ಪ್ರತಿಯೊಂದು ಕ್ಷೇತ್ರಗಳನ್ನು ಮೀಸಲಾತಿಯ ಜೊತೆಗೆ ಎಲ್ಲಾ ಸಚಿವಾಲಯಗಳನ್ನು ಮೀಸಲಾತಿಯನ್ನು ನೀಡಲಾಗುತ್ತಿದೆ. ಹಾಗೂ ಭೇಟಿ ಪಡಾವೋ ಭೇಟಿ ಬಚಾವೋ ಸೇರಿದಂತೆ ಮಹಿಳೆಯರು ಚಿತ್ರ ಹೈಜಿನ್ ಗೆ ಸಂಬಂಧಪಟ್ಟಂತೆ ಹಲವು ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ.

ಒಂದು ಉದ್ಯೋಗವನ್ನು ಸ್ಥಾಪಿಸುವಲ್ಲಿ ಮಹಿಳಾ ಪಾಲು ಹೆಚ್ಚಾಗಿದ್ದಲ್ಲಿ ಅಲ್ಲೂ ಕೂಡ ವಿಶೇಷ ರಿಯಾಯಿತಿಗಳನ್ನು ಮಹಿಳೆ ಪಡೆದುಕೊಳ್ಳಬಹುದಾಗಿದೆ.

ಇನ್ನಷ್ಟು ಮಾಹಿತಿಗಾಗಿ: National commission for women

ಇದನ್ನು ಓದಿ: ರೈತರಿಗಾಗಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading