Foods for Heart Health:ಹೃದಯದ ಆರೋಗ್ಯ ಕಾಪಾಡುವ ಆಹಾರಗಳು

Spread the love

Foods for Heart Health: ಕಾಲ ಬದಲಾಗುತ್ತಿದ್ದಂತೆ ಕಾಯಿಲೆಗಳು ಕೂಡ ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಕ್ರಮಗಳು ಸೇರಿದಂತೆ ನಮ್ಮ ಜೀವನ ಶೈಲಿ ಕೂಡ ಬದಲಾಗುತ್ತಾ ಹೋಗುತ್ತಿದೆ.ಇದರಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ಕಾಯಿಲೆಗೆ ತುತ್ತಾಗುವುದು. ಜೊತೆಗೆ ಇದ್ದಕ್ಕಿದ್ದಂತೆ ಸಾವನ್ನಪ್ಪುವವರ ಪ್ರಮಾಣ ಕೂಡ ಹೆಚ್ಚಾಗಿದೆ.

Foods for Heart Health
Foods for Heart Health

Foods for Heart Health: ಮುಖ್ಯವಾಗಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗುತ್ತಿವೆ.ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಹಿರಿಯರ ತನಕ ಇದು ಅತಿ ಬೇಗನೆ ಹರಡುತ್ತಿದೆ.

ಆದರೆ ಉತ್ತಮ ಆರೋಗ್ಯ ಶೈಲಿಯನ್ನು ಕಾಪಾಡಿಕೊಳ್ಳುವುದು. ಹಾಗೂ ಉತ್ತಮ ಜೀವನಶೈಲಿಯನ್ನು ಪಾಲಿಸುವುದು ಹೃದಯದ ರಕ್ಷಣೆಗೆ ಎಡೆ ಮಾಡಿಕೊಡುತ್ತದೆ.

Foods for Heart Health: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಆಹಾರವನ್ನು ಆರಾಮವಾಗಿ ಸೇವಿಸಬಹುದು:

 

Foods for Heart Health: ಹಣ್ಣು ಮತ್ತು ತರಕಾರಿಗಳು: 

ಹಣ್ಣು ಮತ್ತು ತರಕಾರಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಗಳು, ವಿಟಮಿನ್ ಗಳು, ಫೈಬರ್, ಆಂಟಿ ಆಕ್ಸಿಡೆಂಟ್ ಗಳು. ಇರುವುದರಿಂದಾಗಿ ಇದು ನಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತವೆ.

ಮತ್ತು ನಮ್ಮ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಹೃದಯಕ್ಕೆ ಆರೋಗ್ಯವನ್ನು ಒದಗಿಸುತ್ತದೆ.

ಇಲ್ಲಿ ಫೈಬರ್ ನಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆಯಾಗಿಸಿ ಕೊಲೆಸ್ಟ್ರಾಲ್ ಅನ್ನು ತಗ್ಗಿಸಬಹುದು.

ಮತ್ತು ಹಣ್ಣು ತರಕಾರಿಗಳಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಹೃದಯದಲ್ಲಿರುವ ಜೀವಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸುತ್ತದೆ. ಮತ್ತು ರಕ್ತನಾಳಗಳಲ್ಲಿ ಉಂಟಾಗುವಂತಹ ಉರಿಯುತವನ್ನು ಕಡಿಮೆ ಮಾಡುತ್ತದೆ.

ಸೇಬು, ಪೇರಳೆ, ಬೆರಿ ಹಣ್ಣುಗಳು, ಬೀಟ್ರೋಟ್, ಪಾಲಕ್ ಸೊಪ್ಪು ಮತ್ತು ಇತರ ಸೊಪ್ಪುಗಳು ಹೆಚ್ಚಾಗಿ ಹೃದಯದ ರಕ್ಷಣೆಗೆ ಸಹಾಯಕವಾಗುವಂತದ್ದು. ಇವುಗಳು ರಕ್ತದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ದೂರವಾಗಿಸುತ್ತದೆ.

ಮತ್ತು ಸೊಪ್ಪುಗಳಲ್ಲಿ ವಿಟಮಿನ್ ಕೆ ಮತ್ತು ನೈಟ್ರೇಟ್ ಗಳು ಹೆಚ್ಚಾಗಿರುವುದರಿಂದ ರಕ್ತನಾಳಗಳ ಕಾರ್ಯವನ್ನು ಸುಧಾರಿಸಲು ಇದು ಸಹಾಯಕವಾಗಿದೆ.

ಹಾಗೂ ಬೀಟ್ರೂಟ್ನಲ್ಲಿನ ನೈಟ್ರೇಟ್ ಮತ್ತು ಪೊಟ್ಯಾಶಿಯಂ ನಿಂದಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಾಯಕವಾಗುತ್ತದೆ.

 

ಧಾನ್ಯಗಳು:

ಧಾನಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶ ಇರುವುದರಿಂದಾಗಿ ಇದು ದೇಹದಲ್ಲಿನ ತೂಕವನ್ನು ಕಡಿಮೆಯಾಗಿಸಲು ಸಹಕಾರಿಯಾಗುತ್ತದೆ. ದೇಹದಲ್ಲಿ ತುಂಬಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುವ ಮೂಲಕ ಹೆಚ್ಚಿನ ಸಮಯ ಹೊಟ್ಟೆ ತುಂಬಿರುವಂತೆ ಇದು ಮಾಡುತ್ತದೆ.

ಇವುಗಳ ನಿರಂತರ ಸೇವನೆಯಿಂದ ಕೇವಲ ಹೃದಯದ ಸಮಸ್ಯೆ ಅಷ್ಟೇ ಅಲ್ಲದೆ ಪಾಶ್ವ ವಾಯು ವನ್ನು ಕೂಡ ತಡೆಗಟ್ಟಲು ಸಾಧ್ಯವಾಗುತ್ತದೆ.

ರಾಗಿ, ಗೋಧಿ, ಜೋಳ,ಕಂದು ಅಕ್ಕಿ, ಓಟ್ಸ್, ನವಣೆ ಮತ್ತು ಸಾಮೆ ಇವುಗಳ ಹೆಚ್ಚಿನ ಸೇವನೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇಡಲು ಸಹಾಯ ಮಾಡಬಹುದು.

ಇನ್ನು ಬಿಳಿ ಅಕ್ಕಿ, ಬಿಳಿ ಬ್ರೆಡ್ ಇಂತಹ ಧಾನ್ಯಗಳಲ್ಲಿ ಸಕ್ಕರೆಯು ಹೆಚ್ಚಿನ ಪ್ರಮಾಣದಲ್ಲಿ ಇರುವ ಸಾಧ್ಯತೆ ಇದೆ. ಇದರ ಸೇವನೆಯಿಂದಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಬಹುದು.

 

ಬೀಜಗಳು:

ಹಲವು ರೀತಿಯ ಬೀಜಗಳನ್ನು ಸೇವಿಸುವುದರಿಂದಾಗಿ ಹೆಚ್ಚಿನ ಮಟ್ಟದಲ್ಲಿ ಪೋಷಕಾಂಶಗಳು ದೊರೆಯುತ್ತದೆ.                      ಇವುಗಳಲ್ಲಿರುವ ಒಮೆಗಾ 3, ಕೊಬ್ಬಿನ ಆಮ್ಲಗಳು, ಮತ್ತು ಫೈಬರ್ ಅಂಶಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆಯಾಗಿಸುತ್ತದೆ.

ಅಗಸೆ ಬೀಜಗಳು: ಇದರಲ್ಲಿ ಅಲ್ಫಾ-ಲಿನೋಲೆನಿಕ್ ಆಮ್ಲ ಎಂಬ ಒಮೇಗಾ ಕೊಬ್ಬಿನ ಆಮ್ಲ ಇರಲಿದೆ. ಇದು ಹೃದಯಕೆ ಸಂಬಂಧಪಟ್ಟ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಪ್ಪಿಸುತ್ತದೆ.

ಕುಂಬಳಕಾಯಿ ಬೀಜಗಳು: ಇವುಗಳಲ್ಲಿ ಪೊಟ್ಯಾಶಿಯಂ ಮತ್ತು ಮ್ಯಾಗ್ನಿಷಿಯಂ ಅಂಶ ಹೆಚ್ಚಾಗಿದೆ.

ಇವುಗಳ ಸೇವನೆಯಿಂದಾಗಿ ರಕ್ತದೊತ್ತಡವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಮತ್ತು ರಕ್ತನಾಳಗಳನ್ನು ಆರೋಗ್ಯವಾಗಿರಿಸಲು ಇದು ಸಹಾಯಕವಾಗಿದೆ.

ಚಿಯಾ ಬೀಜಗಳು: ಇವುಗಳಲ್ಲಿ ನಾರಿನ ಅಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿವೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆಯಾಗಿಸುತ್ತದೆ. ಮತ್ತು ರಕ್ತನಾಳಗಳ ಕಾರ್ಯವನ್ನು ಸುಗಮಗೊಳಿಸುತ್ತದೆ.

ಸೂರ್ಯಕಾಂತಿ ಬೀಜಗಳು:

ಈ ಬೀಜಗಳಲ್ಲಿ ವಿಟಮಿನ್ ಇ ಮತ್ತು ಆರೋಗ್ಯಕರ ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದರಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ಜೀವಕೋಶಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ತಪ್ಪಿಸಬಹುದಾಗಿದೆ.

ಈ ರೀತಿಯ ಬೀಜಗಳನ್ನು ಪ್ರತಿದಿನವೂ ಮೊಸರು, ಸಲಾಡ್ ಮತ್ತು ಸ್ಮೂಥಿ ಗಳ ಜೊತೆ ಸೇವನೆ ಮಾಡುವುದರಿಂದಾಗಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ.

 

ದ್ವಿದಳ ಧಾನ್ಯಗಳು:

ದ್ವಿದಳ ಧಾನ್ಯಗಳು ಮತ್ತು ಕಾಳುಗಳಲ್ಲಿ ಕರಗುವ ನಾರಿನ ಅಂಶ ಮತ್ತು ಪ್ರೋಟೀನ್ ಗಳು ಹೆಚ್ಚಿನ ಅಂಶದಲ್ಲಿದೆ. ದ್ವಿದಳ ಧಾನ್ಯಗಳ ಹೆಚ್ಚಿನ ಸೇವನೆಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ತೊಲಗಿಸಿ ರಕ್ತದ ಒತ್ತಡವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದಾಗಿದೆ.

ಇವುಗಳಲ್ಲಿನ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲೇಟ್‌ ನಂತಹ ಪೋಷಕಾಂಶಗಳು, ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ರಕ್ತದ ಒತ್ತಡವನ್ನು ಸ್ಥಿರವಾಗಿ ಇರಿಸುತ್ತವೆ. ಹಾಗೂ ಇಲ್ಲಿ ಪ್ರೋಟೀನ್ ಮತ್ತು ನಾರಿನ ಅಂಶವು ಅಧಿಕವಾಗಿರುತ್ತದೆ.

ಈ ಕಾರಣದಿಂದಾಗಿ ಹೊಟ್ಟೆ ತುಂಬಿದ ಅನುಭವ ಆಗುವುದರಿಂದಾಗಿ ಹೆಚ್ಚಿನ ಹಸಿವಾಗುವುದಿಲ್ಲ. ಮತ್ತು ಇದರಿಂದ ದೇಹದ ತೂಕವನ್ನು ಕಡಿಮೆಯಾಗಿಸಲು ನಿಯಂತ್ರಣದಲ್ಲಿ ಇರಿಸಲು ಸುಲಭವಾಗುತ್ತದೆ.

ದೇಹದಲ್ಲಿನ ಉರಿಯೂತವನ್ನು ಕಡಿಮೆಯಾಗಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಯಾಗಿಸುತ್ತದೆ. ಮಧುಮೇಹದ ಅಪಾಯವನ್ನು ಕಡಿಮೆಯಾಗಿಸಲು ಇವು ಸಹಾಯಕವಾಗುತ್ತದೆ.

ಡೈರಿ ವಸ್ತುಗಳು:

ಇನ್ನೂ ಕಡಿಮೆ ಕೊಬ್ಬು ಇರುವಂತಹ ಡೈರಿ ವಸ್ತುಗಳು ಅಂದರೆ ಕಡಿಮೆ ಕೊಬ್ಬು ಇರುವ ಹಾಲು, ಮೊಸರು, ಚೀಸ್ ಗಳನ್ನು ಮಾಡುವುದರಿಂದಾಗಿ ಕೂಡ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.                        ಹಾಗೂ ಶೂತವಾದ ಉತ್ತಮವಾದ ಅಡುಗೆ ಎಣ್ಣೆಯ ಬಳಕೆಯಿಂದ ಕೂಡ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ವಸ್ತುಗಳ ಬಳಕೆಯನ್ನು ಕಡಿಮೆಯಾಗಿಸಿ:

 

ಚಿಪ್ಸ್, ಬಿಸ್ಕೆಟ್, ರೆಡಿ ಟು ಈಟ್, ಈ ರೀತಿಯ ಆಹಾರಗಳಲ್ಲಿ ಉಪ್ಪು ಖಾರ ಸಕ್ಕರೆಯ ಪ್ರಮಾಣಗಳು ಹೆಚ್ಚಿರುವ ಕಾರಣ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡಲು ಇವುಗಳಿಂದ ಸಾಧ್ಯವಿಲ್ಲ.

ಸೋಡಗಳು, ಬಾಟಲ್ ಗಳಲ್ಲಿ ಸಿಗುವ ಜ್ಯೂಸ್ ಗಳು, ಮತ್ತು ಹೆಚ್ಚಿನ ಸಕ್ಕರೆಯುಕ್ತ ಕಾಫಿ ಟೀ ಗಳ ಬಳಕೆಯಿಂದಾಗಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮತ್ತು ಇದು ಮಧುಮೇಹಕ್ಕೆ ತಿರುಗಲುಬಹುದು.

ಹ್ಯಾಮ್, ಬೇಕನ್, ಸಾಸೇಜ್‌ಗಳು ಮತ್ತು ಕೆಂಪು ಮಾಂಸಗಳಲ್ಲಿ ಉಪ್ಪಿನ ಪ್ರಮಾಣ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಾಗಿರುವ ಕಾರಣದಿಂದಾಗಿ, ಇವುಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಹುರಿದ ಆಹಾರಗಳು, ಪ್ಯಾಕ್ ಮಾಡಿದ ಪೇಸ್ಟ್ರಿಗಳು ಮತ್ತು ಬೇಯಿಸಿದ ಆಹಾರಗಳು ಇವುಗಳ ಬಳಕೆಯಿಂದಾಗಿ ಕೊಬ್ಬಿನಂಶ ಹೆಚ್ಚಾಗುತ್ತದೆ.

ಮತ್ತು ಹೆಚ್ಚು ಉಪ್ಪಿನ ಬಳಕೆಯನ್ನಾಗಿ ಉಪ್ಪು ನಮ್ಮ ದೇಹದಲ್ಲಿ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ.

ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತಾ ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿಬಿಡುತ್ತದೆ.

 

ಹೆಚ್ಚಿನದಾಗಿ ನೈಸರ್ಗಿಕ ಆಹಾರಗಳ ಬಳಕೆ, ಮನೆಯಲ್ಲಿಯೇ ಮಾಡಿದ ಆಹಾರದ ಸೇವನೆ, ಸರಿಯಾಗಿ ಲೇಬಲ್ ಓದಿ ಖರೀದಿಸಿದ ಆಹಾರದ ಸೇವನೆಯಿಂದಾಗಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಇನ್ನಷ್ಟು ಮಾಹಿತಿಗಾಗಿ: WHO

ಇದನ್ನು ಓದಿ: ಮಹಿಳೆಯರಿಗೆ ಕೇಂದ್ರ ಸರ್ಕಾರದ ಯೋಜನೆಗಳು

 

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading