Best Indoor Plants for Home:ಮನೆಗೆ ಶುಭ ತರುವ ಸಸ್ಯಗಳು

Spread the love

Best Indoor Plants for Home: ಪ್ರಕೃತಿ ಸೌಂದರ್ಯ ಎನ್ನುವುದು ಪ್ರತಿಯೊಬ್ಬರಿಗೂ ಇಷ್ಟವಾಗುವಂತಹದುದು. ಕೇವಲ ಮನೆಯ ಹೊರಾಂಗಣದಲ್ಲಿ ತೋಟಗಳಲ್ಲಿ ಅಷ್ಟೇ ಅಲ್ಲದೆ, ಒಳಾಂಗಣದಲ್ಲೂ ಕೂಡ ಪ್ರಕೃತಿ ಸೌಂದರ್ಯವನ್ನು ಸೃಷ್ಟಿ ಮಾಡಬಹುದು.

Best Indoor Plants for Home
Best Indoor Plants for Home

Best Indoor Plants for Home: ಅನೇಕ ಸಸ್ಯಗಳನ್ನು ನಾವು ಮನೆಯ ಒಳಾಂಗಣದಲ್ಲೂ ಕೂಡ ಬೆಳೆಸಬಹುದು. ಅವುಗಳಲ್ಲಿಯು ಮುಖ್ಯವಾಗಿ ಮನೆಗೆ ಧನಾತ್ಮಕ ಶಕ್ತಿಯನ್ನು ತರುವಂತಹ ವಾಸ್ತು ಸಸ್ಯಗಳನ್ನು ಕೂಡ ನಾವು ಕಾಣಬಹುದಾಗಿದೆ.

ಈ ಸಸ್ಯಗಳು ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುವ ಜೊತೆಗೆ, ಮನೆಯ ಸೌಂದರ್ಯವನ್ನು ಇಮ್ಮಡಿ ಗೊಳಿಸುತ್ತದೆ.

Best Indoor Plants for Home: ಈ ರೀತಿಯಾದ ಕೆಲವು ಒಳಾಂಗಣ ಸಸ್ಯಗಳ ಕುರಿತಾಗಿ ಇಲ್ಲಿ ತಿಳಿಸಲಾಗಿದೆ.

 

ತುಳಸಿ:

ತುಳಸಿ ಗಿಡವನ್ನು ಭಾರತೀಯ ಸಂಪ್ರದಾಯದಲ್ಲಿ ದೇವರೆಂದು ಪೂಜಿಸಲಾಗುತ್ತದೆ. ಜೊತೆಗೆ ಆಯುರ್ವೇದ ಕ್ಷೇತ್ರದಲ್ಲಿ ಇದು ತನ್ನದೇ ಆದ ಮನ್ನಣೆಯನ್ನು ಪಡೆದುಕೊಂಡಿದೆ.

ಇನ್ನು ತುಳಸಿಯನ್ನು ಪೂರ್ವ ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ಇಡಲಾಗುತ್ತದೆ ಅಥವಾ ಬೆಳೆಸಲಾಗುತ್ತದೆ.

ತುಳಸಿಯು ಕೃಷ್ಣನಿಗೆ ಪ್ರಿಯವಾದ ಕಾರಣ ತುಳಸಿ ಗಿಡವನ್ನು ಲಕ್ಷ್ಮಿಯ ಒಂದು ರೂಪ ಎಂದು ನಂಬಲಾಗಿದೆ. ತುಳಸಿ ಗಿಡವನ್ನು ಅಂಗಳದಲ್ಲಿ, ಬಾಲ್ಕನಿಗಳಲ್ಲಿ, ಕೆಲವೊಮ್ಮೆ ಮನೆಯ ಒಳಗಡೆ ಇರುವಂತಹ ಅಂಗಳದಲ್ಲಿ ನೆಡಲಾಗುತ್ತದೆ.

ಇದು ತಾನು ಇರುವಂತಹ ಜಾಗದಲ್ಲಿನ ಸಕಾರಾತ್ಮಕ ಶಕ್ತಿಯನ್ನು ಸಮತೋಲನದಲ್ಲಿ ಇರಿಸಲು ಸಹಾಯಕವಾಗುತ್ತದೆ.

ತುಳಸಿ ಗಿಡಕ್ಕೆ ಪ್ರತಿನಿತ್ಯವೂ ದೀಪ ಹಚ್ಚುವುದರಿಂದಾಗಿ ಇದು ನಕಾರಾತ್ಮಕ ಶಕ್ತಿಯನ್ನು ತೊಲಗಿಸುತ್ತದೆ ಎಂದು ನಂಬಲಾಗಿದೆ. ಹಾಗೆ ಇದು ಆ ಮನೆಗೆ ರಕ್ಷಣೆ ಶುದ್ಧತೆ ಹಾಗೂ ಸಮೃದ್ಧಿಯನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ.

•ಈ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದಾಗಿ ಇದು ಸಮೃದ್ಧಿಯನ್ನು ತರುತ್ತದೆ, ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಆಧ್ಯಾತ್ಮಿಕ ಭಾವನೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಮತ್ತು ಈ ದಿಕ್ಕಿನಲ್ಲಿ ತುಳಸಿಯ ಸ್ಥಾಪನೆಯಿಂದಾಗಿ ಮಾನಸಿಕ ಶಾಂತಿ ಹಾಗೂ ನೆಮ್ಮದಿ ದೊರಕುತ್ತದೆ.

•ಪೂರ್ವ ದಿಕ್ಕಿನಲ್ಲಿ ತುಳಸಿಯನ್ನ ಇರಿಸುವುದರಿಂದಾಗಿ ಕುಟುಂಬದಲ್ಲಿ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ನೆಮ್ಮದಿ ಉದ್ಭವವಾಗುತ್ತದೆ.

• ಉತ್ತರ ದಿಕ್ಕಿನಲ್ಲಿ ತುಳಸಿಯನ್ನು ಬೆಳೆಸುವುದರಿಂದಾಗಿ ವ್ಯಾಪಾರದಲ್ಲಿ ಅನುಕೂಲತೆಗಳು ಜೊತೆಗೆ ವೃತ್ತಿಪರ ಬೆಳವಣಿಗೆ ಹೊಂದಲು ಇದು ಸಹಾಯಕವಾಗುತ್ತದೆ.

ದಕ್ಷಿಣದ ದಿಕ್ಕು, ನೈರುತ್ಯ ದಿಕ್ಕು, ಮಲಗುವ ಕೋಣೆ, ಸ್ನಾನ ಗೃಹ ಅಥವಾ ಒಳ ಚರಂಡಿಯ ಹತ್ತಿರ, ಮತ್ತು ಬೆಳಕು ಬಾರದ ಜಾಗದಲ್ಲಿ ಇರಿಸಬಾರದು.

 

ಮನಿ ಪ್ಲಾಂಟ್:

ವಾಸ್ತುಶಾಸ್ತ್ರದಲ್ಲಿ ಮನಿ ಪ್ಲಾಂಟ್ ಗೆ ತನ್ನದೇ ಆದ ಮನ್ನಣೆ ಇದೆ. ಹೆಸರಿನಲ್ಲಿ ಇರುವಂತೆ ಮನಿ ಪ್ಲಾಂಟ್ ಅಂದರೆ ಹಣದ ಗಿಡ ಇದರ ಬೆಳೆಸುವಿಕೆಯಿಂದಾಗಿ ಮನೆಗೆ ಹಣದ ಪೂರವೆ ಹರಿದು ಬರಲಿದೆ ಎಂಬ ನಂಬಿಕೆ ಇದೆ.

ಈ ಗಿಡವನ್ನು ಆಗ್ನೇಯ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಸೂಕ್ತವೆಂದು ಹೇಳಲಾಗುತ್ತದೆ. ಈ ಪ್ರಕಾರದಲ್ಲಿ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ಹಾಗೂ ಸಂಬಂಧಗಳ ನಡುವೆ ಸಾಮರಸ್ಯ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ವಿಚಾರಕ್ಕೆ ಬಂದರೆ ಕೇವಲ ಈ ಗಿಡವನ್ನು ನೆಡುವುದಷ್ಟೇ ಅಲ್ಲ. ಇದರ ಸೂಕ್ತ ನಿರ್ವಹಣೆ ಕೂಡ ಅತ್ಯಗತ್ಯ.

ಮನಿ ಪ್ಲಾಂಟ್ ಗಿಡದ ಎಲೆ ಒಣಗಲು ಬಿಡಬಾರದು, ಆಗ ಕತ್ತರಿಸುತ್ತ ಇರಬೇಕು. ಮತ್ತು ಆಗಾಗ ನೀರು ಸಿಂಪಡಿಸುತ್ತಾ ಇರಬೇಕು. ಒಂದು ವೇಳೆ ಒಣಗಿದ ಎಲೆಗಳನ್ನು ಹಾಗೆ ಬಿಟ್ಟರೆ ಅದು ಕೂಡ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

 

ಸ್ನೇಕ್ ಪ್ಲಾಂಟ್:

ಈ ಗಿಡಗಳು ನೋಡಲು ಸುಂದರವಾಗಿ ಕಾಣಿಸುತ್ತದೆ. ಹಾಗೂ ಇದಕ್ಕೆ ಸ್ವಲ್ಪವೇ ನೀರು ಸಾಕು. ಹಾಗಾಗಿ ಇದನ್ನು ಒಳಾಂಗಣದಲ್ಲಿ ಆರಾಮದಾಯಕವಾಗಿ ಬೆಳೆಸಬಹುದು. ಜೊತೆಗೆ ಇದನ್ನು ಸೌಂದರ್ಯದ ದೃಷ್ಟಿಯಿಂದ ಬಳಸಲಾಗುತ್ತದೆ.

•ಇದೊಂದು ರಸಭರಿತ ಸಸ್ಯವಾಗಿದ್ದು, ಸುಮಾರು ಆರು ಅಡಿಯ ತನಕ ಬೆಳೆಯುತ್ತದೆ.

• ಇದು ಒಳಾಂಗಣದಲ್ಲಿ ಇರುವಂತಹ ಗಾಳಿಯ ಶುದ್ಧತೆಯನ್ನು ಕಾಪಾಡುವ ಜೊತೆಗೆ ಮಾಲಿನ್ಯ ಕಾರಕ ಅಂಶಗಳನ್ನು ತೊಡೆದು ಹಾಕುತ್ತದೆ.

•ಇದು ಮನೆಗೆ ಹಾಗೂ ಮನಸ್ಸಿಗೆ ಶಾಂತಿಯನ್ನು ಉಂಟು ಮಾಡಿ, ಮಾನಸಿಕ ನೆಮ್ಮದಿಯನ್ನ ನೀಡುತ್ತದೆ.

• ಈ ಗಿಡಗಳು ತನ್ನ ಮೂಲಕ ಗಾಳಿಗೆ ಆಕ್ಸಿಜನ್ ಬಿಡುಗಡೆ ಮಾಡುತ್ತದೆ. ಹಾಗಾಗಿ ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿ ಯಂತಹ ಮತ್ತು ಅಸ್ತಮಾ ಕಾಯಿಲೆಗಳಿಂದ ದೂರಾಗಬಹುದಾಗಿದೆ.

• ಮನೆಯಲ್ಲಿ ಮಾನಸಿಕ ನೆಮ್ಮದಿಯನ್ನು ತಂದು, ಸಮೃದ್ಧಿಯನ್ನು ಉಂಟು ಮಾಡುವುದರ ಜೊತೆಗೆ ಇದು ಮನೆಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

 

ಲ್ಯಾವೆಂಡರ್:

ಈ ಗಿಡವೂ ತನ್ನ ಸುಗಂಧ ಭರಿತ ವಾಸನೆ, ಸೌಂದರ್ಯ, ಹಾಗೂ ಔಷಧಿಯ ಗುಣಗಳಿಗೆ ಪ್ರಮುಖ ಸ್ಥಾನವನ್ನು ಪಡೆದಿದೆ.

ಇದೊಂದು ದೀರ್ಘಕಾಲಿಕ ಸಸ್ಯ ವಾಗಿದ್ದು, ವರ್ಷ ವರ್ಷ ಮತ್ತೆ ಮತ್ತೆ ಬೆಳೆಯುತ್ತದೆ.

ಸಾಮಾನ್ಯವಾಗಿ ನಮಗೆ ತಿಳಿದೇ ಇರುವಂತೆ ಲ್ಯಾವೆಂಡರ್ ಅನ್ನು ಧೂಪಗಳಲ್ಲಿ, ಪರ್ಫ್ಯೂಮ್ ಗಳಲ್ಲಿ ಇನ್ನಿತರ ಸುಗಂಧದ್ರವ್ಯಕಗಳಲ್ಲಿ ಬಳಸುವುದುಂಟು. ಇದರ ಹೊರತಾಗಿಯೂ ಇದು ಆಯುರ್ವೇದ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ.

•ಈ ಸಸ್ಯವು ನಿದ್ರಾಹೀನತೆಯನ್ನು ಕಡಿಮೆ ಮಾಡಿ, ಉತ್ತಮ ನಿದ್ರೆಯನ್ನು ಪಡೆದುಕೊಳ್ಳುವಂತೆ ಮಾಡುತ್ತದೆ.

2019 ರಲ್ಲಿ ನಡೆದಂತಹ ಒಂದು ಅಧ್ಯಯನದ ಪ್ರಕಾರ, ಲ್ಯಾವೆಂಡರ್ ನಮ್ಮ ದೇಹದಲ್ಲಿ ಇರುವಂತಹ ಮೆಲಟೋನಿನ್ ಎಂಬ ಅಂಶವನ್ನು ಸುಧಾರಣೆ ಮಾಡಲಿದೆ. ಮತ್ತು ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.

ಹಲವಾರು ಜನರು ಆರೋಮಾ ತೆರಪಿಯ ಮೂಲಕ ಈ ಒಂದು ಲ್ಯಾವೆಂಡರ್ ಅನ್ನು ಸುಗಂಧದ್ರವ್ಯವನ್ನಾಗಿ ಬಳಸುತ್ತಾರೆ.

• ಲ್ಯಾವೆಂಡರ್ ನಲ್ಲಿ ಇರುವಂತಹ ರಾಸಾಯನಿಕ ಸಂಯುಕ್ತಗಳು ದೇಹದಲ್ಲಿ ಉರಿಯೂತವನ್ನು ಕಡಿಮೆಯಾಗಿಸುತ್ತವೆ.

ಮತ್ತು 2012ರಲ್ಲಿ ನಡೆದಂತಹ ಒಂದು ಅಧ್ಯಯನದ ಪ್ರಕಾರ, ಲ್ಯಾವೆಂಡರ್ ನಿಂದ ಸಿದ್ಧವಾದ ಅಂತಹ ತೈಲವನ್ನು 15 ನಿಮಿಷಗಳ ಕಾಲ ಮೂಗಿನಲ್ಲಿ ಎಳೆಯುವುದರ ಮೂಲಕ, ಮೈಗ್ರೇನ್ ಮತ್ತು ತಲೆನೋವುಗಳನ್ನು ಕಡಿಮೆಯಾಗಿಸಬಹುದಾಗಿದೆ.

• ಲ್ಯಾವೆಂಡರ್ ಅನ್ನು ಸುಗಂಧವನ್ನು ಸೇವಿಸುವುದರಿಂದಾಗಿ , ಮನಸ್ಸಿಗೆ ಶಾಂತಿ ಉಂಟಾಗುತ್ತದೆ ಮತ್ತು ಮಾನಸಿಕ ಒತ್ತಡವನ್ನು ಖಿನ್ನತೆಯನ್ನು ತೊಲಗಿಸಬಹುದು.

ಹಾಗೂ ಈ ಮೂಲಕವಾಗಿ ಇದರಿಂದಾಗಿ ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದೆ.

2020 ರಲ್ಲಿ ನಡೆಸಿದಂತಹ ಲ್ಯಾವೆಂಡರ್ ಗೆ ಸಂಬಂಧಪಟ್ಟಂತಹ ಒಂದು ಪ್ರಯೋಗದಲ್ಲಿ ತಿಳಿದು ಬಂದ ವಿಷಯವೇನೆಂದರೆ, ವಯಸ್ಸಾದವರು 30 ನಿಮಿಷಗಳ ಕಾಲ ಇದರ ಸುಗಂಧದ್ರವ್ಯವನ್ನು ಮೂಗಿನಲ್ಲಿ ಎಳೆದುಕೊಳ್ಳುವುದರಿಂದ. ಅವರಲ್ಲಿ ಮಾನಸಿಕ ಖಿನ್ನತೆ ಹಾಗೂ ಒತ್ತಡವನ್ನು ಕಡಿಮೆಯಾಗಿಸುವಲ್ಲಿ ಇದು ಸಹಕಾರಿಯಾಗುತ್ತದೆ.

•2016ರಲ್ಲಿ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ಮುಟ್ಟಿನ ಮೊದಲ ಮೂರು ದಿನಗಳ ಕಾಲ, 30 ನಿಮಿಷಗಳು ಲ್ಯಾವೆಂಡರ್ ನ ಸುಗಂಧದ್ರವ್ಯವನ್ನು ಮೂಗಿನ ಮೂಲಕ ಸೇವಿಸಬೇಕು.

ಇದರಿಂದ ಮುಂದಿನ ಎರಡು ತಿಂಗಳ ನಂತರ ಆ ಮಹಿಳೆಯರಿಗೆ ಮುಟ್ಟಿನ ಸಮಸ್ಯೆಗಳು ಮುಟ್ಟಿಗೆ ಸಂಬಂಧಪಟ್ಟಂತಹ ನೋವುಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ.

• ಈ ಲ್ಯಾವೆಂಡರ್ ಗಳಲ್ಲಿ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಶಕ್ತಿ ಇರುತ್ತವೆ.

ಇದರ ಸುಗಂಧ ದ್ರವ್ಯಗಳು ಅಥವಾ ಇದಕ್ಕೆ ಸಂಬಂಧಪಟ್ಟ ದೂಪಗಳ ಘಮದಿಂದಾಗಿ ನಮ್ಮ ಸುತ್ತಮುತ್ತಲು ಇರುವಂತಹ ಬ್ಯಾಕ್ಟೀರಿಯಗಳಿಂದ ನಾವು ಮುಕ್ತಿ ಪಡೆಯಬಹುದಾಗಿದೆ.

ಈ ರೀತಿಯಾಗಿ ಈ ಗಿಡಗಳು ಕೇವಲ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ. ಆರೋಗ್ಯ ಹಾಗೂ ಮನೆಗೂ ಶುಭ ತರುತ್ತವೆ. ಎಂದು ನಂಬಲಾಗಿದೆ.

ಇನ್ನಷ್ಟು ಮಾಹಿತಿಗಾಗಿ: national library of medicine 

ಇದನ್ನು ಓದಿ: ವ್ಯಕ್ತಿತ್ವ ವಿಕಸನ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading