Koppa:ಪ್ರತಿಧ್ವನಿ ಸಾಂಸ್ಕೃತಿಕ ಹಬ್ಬದಲ್ಲಿ ಜೆಸಿಐ ಬಿಳಾಲುಕೊಪ್ಪಕ್ಕೆ ಚಾಂಪಿಯನ್ ಗರಿ

Spread the love

Koppa:ಜೆಸಿಐ ಇಂಡಿಯಾ ವಲಯ 14ರ ಅಡಿಯಲ್ಲಿ ಜೆಸಿಐ ಮೈಸೂರು ಕಿಂಗ್ಸ್ ಘಟಕದ ವತಿಯಿಂದ ಆಗಸ್ಟ್ 15ರಂದು ಫೀನಿಕ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜನೆ ಮಾಡಲಾಗಿದ್ದ ಪ್ರತಿಧ್ವನಿ ಬೃಹತ್ ಸಾಂಸ್ಕೃತಿಕ ಹಬ್ಬದಲ್ಲಿ ಜೆಸಿಐ ಬಿಳಾಲುಕೊಪ್ಪ ಘಟಕ ಓವರ್‌ಆಲ್ ಚಾಂಪಿಯನ್’ ಪ್ರಶಸ್ತಿಯನ್ನು ಗೆದ್ದು ಗಮನ ಸೆಳೆದಿದೆ.

JCI Bilalukoppa team at the Pratidhwani cultural festival in Koppa.
JCI Bilalukoppa team at the Pratidhwani cultural festival in mysuru

Koppa: “ಒಂದು ವೇದಿಕೆ, ಅನೇಕ ಸಂಸ್ಕೃತಿಗಳು” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗಿತ್ತು.

ಇಲ್ಲಿ ಜೆಸಿಐ ವಲಯಕ್ಕೆ ಸಂಬಂಧ ಪಟ್ಟಂತೆ ವಿವಿಧ ಘಟಕಗಳು ಭಾಗವಹಿಸಿದ್ದರು. ವಿವಿಧ ರೀತಿಯ ಕಲೆಗಳನ್ನು ಪ್ರದರ್ಶಿಸುವ ಮೂಲಕ ತಂಡಗಳು ಪ್ರೇಕ್ಷಕರನ್ನು ರಂಜಿಸಿದರು.

ಜೆಸಿಐ ಬಿಳಾಲುಕೊಪ್ಪ ತಂಡವು ನೃತ್ಯ, ಪ್ರಹಸನ, ಯಕ್ಷಗಾನ, ಸಂಗೀತ, ನಿರೂಪಣೆ ಸೇರಿದಂತೆ ಹಲವು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು.ತಂಡದ ಸಂಘಟಿತ ಪ್ರಯತ್ನ ಮತ್ತು ಕಲಾತ್ಮಕ ಪ್ರದರ್ಶನಕ್ಕೆ ತೀರ್ಪುಗಾರರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಅಂತಿಮವಾಗಿ ‘ಓವರ್‌ಆಲ್ ಚಾಂಪಿಯನ್’ ಪ್ರಶಸ್ತಿ ತಂಡದ ಪಾಲಾಗಿದೆ.

ಇಷ್ಟೇ ಅಲ್ಲದೆ ವಿಶೇಷ ಸ್ಪರ್ಧೆ ಆದಂತಹ ಯಕ್ಷಗಾನದಲ್ಲಿಯೂ ಕೂಡ ಈ ತಂಡ ವಿಜಯಶಾಲಿಯಾಗಿದೆ. ಇದೇ ರೀತಿಯಾಗಿ ಹಲವು ತಂಡಗಳಲ್ಲಿ ಸಾಧಿಸಿ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

•ಕುಸಿದ ಚಿನ್ನ ಬೆಳ್ಳಿ ದರ

ಈ ಪ್ರಶಸ್ತಿಗಳು ತಂಡದ ಪ್ರತಿಯೊಬ್ಬ ಕಲಾವಿದನ ಶ್ರಮವಾಗಿದೆ ಸದಸ್ಯರಲ್ಲಿ ನಾವು ಒಗ್ಗಟ್ಟು ಮತ್ತು ಕಲೆಯ ಮೇಲಿನ ಆಸಕ್ತಿ ಈ ಸಾಧನೆಗೆ ದಾರಿ ಮಾಡಿಕೊಟ್ಟಿದೆ ಎಂದು ಬಿಳಾಲುಕೊಪ್ಪ ಘಟಕದ ಅಧ್ಯಕ್ಷರು ಅಭಿಪ್ರಾಯ ಪಟ್ಟರು.

ಹಾಗೂ ಅತ್ಯುತ್ತಮ ವೇದಿಕೆಯನ್ನು ಒದಗಿಸಿದ್ದಕ್ಕಾಗಿ ಜೆಸಿಐ ವಲಯ 14 ಹಾಗೂ ಆತಿಥೇಯ ಜೆಸಿಐ ಮೈಸೂರು ಕಿಂಗ್ಸ್ ಘಟಕಕ್ಕೂ ಕೂಡ ಧನ್ಯವಾದಗಳು ಸಮರ್ಪಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಜೆಸಿಐ ವಲಯ 14 ರ ವಲಯಾಧ್ಯಕ್ಷ ಪ್ರಜ್ವಲ್ ಜೈನ್, ವಲಯ ಉಪಾಧ್ಯಕ್ಷ ಅಶೋಕ್,ಲೇಡಿ ಜೆಸಿ ಸಂಯೋಜಕರಾದ ರಮ್ಯ ಸಂದೇಶ್, ಜೂನಿಯರ್ ಜೆಸಿ ಸಂಯೋಜಕಿ ತೇಜಾ,ಜೆಸಿಐ ಮೈಸೂರು ಕಿಂಗ್ಸ್ ಘಟಕದ ಅಧ್ಯಕ್ಷರು ಹಾಗೂ ಜೆಸಿಐ ಬಿಳಾಲುಕೊಪ್ಪದ ಅಧ್ಯಕ್ಷರಾದ ವೈಶಾಖ ಶ್ರೇಣಿಕ್ , ಅಶ್ವತ್, ಸುಶಾಂತ್, ಶ್ರೇಣಿಕ್ ಜೈನ್,ಅನಿತಾ ಜಯಕುಮಾರ್, ಸುಧಾ ನಾರಾಯಣ್, ಶುಭ ನಿಜಯರಂಗ, ಗಿರೀಶ್ ಹೆಬ್ಬಾರ್, ರಂಗನಾಥ್, ಕಾವ್ಯ ಶ್ರೀಕಂಠ, ಉಷಾ ಅರುಣ್, ಶಾರ್ವಿಕಾ ಜೈನ್ , ಸಿಂಚನಾ , ಶ್ರಾವಕ್ ಜೈನ್, ಆಕರ್ಷ್ ಜೈನ್ ಉಪಸ್ಥಿತಿ ವಹಿಸಿದ್ದರು.

SBI ನಲ್ಲಿ 760 ಹುದ್ದೆಗಳಿಗೆ ಅರ್ಜಿ ಆಹ್ವಾನ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading