Samse:ಸಂಸೆಯಲ್ಲಿ ಜೈನ ಬಾಂಧವರ ಕೆಸರುಗದ್ದೆ ಸಂಭ್ರಮ

Spread the love

Samse:ಗ್ರಾಮೀಣ ಸಂಸ್ಕೃತಿ, ಮಣ್ಣಿನ ಸೊಗಡು ಮತ್ತು ಸಾಂಪ್ರದಾಯಿಕ ಕ್ರೀಡೆಗಳ ಸಂಭ್ರಮವನ್ನು ಸಾರುವ ಸಂಸೆ ಜೈನ ಬಾಂಧವರ ದ್ವಿತೀಯ ವರ್ಷದ ಕೆಸರುಗದ್ದೆ ಸಂಭ್ರಮ–2026 ಆಗಸ್ಟ್ 19ರಂದು ಸಂಸೆಯಲ್ಲಿ ಯಶಸ್ವಿಯಾಗಿ ನಡೆಯಿತು.

Jain community members celebrating Kesarugadde Sambhrama in Samse
Jain community members celebrating Kesarugadde Sambhrama in Samse

Samse:ಸಂಸೆ ಜೈನ ಬಾಂಧವರ ವತಿಯಿಂದ ಕಳಸ ಸೀಮೆಯ ಜೈನ ಬಾಂಧವರಿಗಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪುರುಷರು ಮಹಿಳೆಯರು ಮಕ್ಕಳು ಸೇರಿದಂತೆ ಉತ್ಸಾಹದಿಂದ ಭಾಗವಹಿಸಿದ್ದರು.

ಕೆಸರುಗದ್ದೆಯ ಸಾಂಪ್ರದಾಯಿಕ ಆಟ-ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಗ್ರಾಮೀಣ ಬದುಕಿನ ಸೊಬಗನ್ನು ಸವಿಯಲಾಯಿತು. ಕುಟುಂಬ ಸಮೇತರಾಗಿ ಆಗಮಿಸಿದ್ದ ಜೈನ ಬಾಂಧವರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ಮಣ್ಣಿನೊಂದಿಗೆ ಬೆರೆತು, ಗ್ರಾಮೀಣ ಸಂಸ್ಕೃತಿಯ ನೆನಪುಗಳನ್ನು ಮೆಲುಕು ಹಾಕುವ ಈ ಕಾರ್ಯಕ್ರಮವು ಸಮುದಾಯದ ಒಗ್ಗಟ್ಟು ಮತ್ತು ಪರಂಪರೆಯ ಮಹತ್ವವನ್ನು ಸಾರಿತು.

 

ಉಚಿತ ಆರೋಗ್ಯ ತಪಾಸಣೆ:

ಈ ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಸಂಸೆ ಸಮುದಾಯ ಆರೋಗ್ಯಾಧಿಕಾರಿ ಶ್ರೀ ಮಂಜುನಾಥ್ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಒಟ್ಟಾರೆಯಾಗಿ ಗ್ರಾಮೀಣ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದಿವೆ.

Kesaru gadde

ಒಗ್ಗಟ್ಟು, ಸಂಸ್ಕೃತಿ ಮತ್ತು ಗ್ರಾಮೀಣ ಬದುಕಿನ ಸೊಬಗನ್ನು ಒಟ್ಟುಗೂಡಿಸಿದ ಸಂಸೆ ಜೈನ ಬಾಂಧವರ ದ್ವಿತೀಯ ವರ್ಷದ ಕೆಸರುಗದ್ದೆ ಸಂಭ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

 

SBI RECRUITMENT 

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading