Telangana:ತೆಲಂಗಾಣದ ನಲ್ಗೊಂಡ ಜಿಲ್ಲೆಯ ಶಾಲಾ ಪ್ರಾಂಶುಪಾಲೆಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದಾರೆ.

ಕೊಂಡಮಲ್ಲೇಪಲ್ಲಿ ಪ್ರದೇಶದಲ್ಲಿ ಆಗಸ್ಟ್ 11ನೇ ತಾರೀಕಿನಂದು ಪ್ರಾಂಶುಪಾಲೆ ಕಲ್ಲು ರೂಪಾ ರೆಡ್ಡಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹಾಗೂ ದೇಹದ ಮೇಲೆ ಹಲವು ಇರಿತವಾದ ಗಾಯಗಳು ಕಂಡುಬಂದಿದ್ದವು.
ಪ್ರಕರಣದ ಜಾಲ ಹಿಡಿದು ಹೊರಟ ಪೊಲೀಸರು ಇಬ್ಬರು ಹದಿನಾರು ವರ್ಷದ ವಿದ್ಯಾರ್ಥಿಗಳ ಮೇಲೆ ಅನುಮಾನ ಪಟ್ಟಿದ್ದಾರೆ. ಹಾಗೂ ಹಣದ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತ ವಿಚಾರಣೆ ನಡೆಯುತ್ತಿದ್ದು, ರೂಪರೆಡ್ಡಿ ಅವರ ಫೋನ್ ಸಂಭಾಷಣೆಯ ಕೆಲವು ಸುಳಿವುಗಳು ಕೂಡ ನೆರವಾಗಿದೆ.
ಹೆಚ್ಚಿನ ತನಿಖೆ ನಡೆಯುತ್ತಿದ್ದು, ಬಳಿಕವೇ ಸತ್ಯ ತಿಳಿಯಲಿದೆ.