Viral:ಮದುವೆ ವಿಚಾರದಲ್ಲಿ ಹಣ, ಉದ್ಯೋಗ, ಕುಟುಂಬ ಹಿನ್ನೆಲೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುವುದು ಸಾಮಾನ್ಯ.

Viral:ಆದರೆ ಯುವತಿಯೊಬ್ಬರು ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
₹40 ಲಕ್ಷ ವಾರ್ಷಿಕ ಪ್ಯಾಕೇಜ್ ನಲ್ಲಿರುವ ಉತ್ತಮ ಕುಟುಂಬ ಹಿನ್ನೆಲೆಯ ಯುವಕನಿಂದ ಬಂದ ಪ್ರಸ್ತಾಪವನ್ನು ಯುವತಿ ಒಬ್ಬಳು ತಿರಸ್ಕರಿಸಿದ್ದಾಳೆ. ಯುವಕನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಭಿಮಾನಿಯಾಗಿರುವುದು ಮದುವೆ ನಿರಾಕರಿಸಲು ಪ್ರಮುಖ ಕಾರಣವಾಗಿದೆ.
ಆರೋಹಿ ರೆಡ್ಡಿ ಎಂಬ ಹೆಸರಿನ ಬಳಕೆದಾರರು Xನಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಮದುವೆ ಸಂಗಾತಿಯನ್ನು ಆಯ್ಕೆ ಮಾಡುವಾಗ ರಾಜಕೀಯ ಮತ್ತು ಸೈದ್ಧಾಂತಿಕ ಹೊಂದಾಣಿಕೆಯೂ ಮುಖ್ಯ ಎಂಬ ಚರ್ಚೆಗೆ ಈ ಪೋಸ್ಟ್ ಕಾರಣವಾಗಿದೆ.
ಪೋಸ್ಟ್‌ನಲ್ಲಿ ಯುವಕನಿಗೆ ಉತ್ತಮ ಉದ್ಯೋಗ, ಸುಮಾರು ₹40 ಲಕ್ಷ ಪ್ಯಾಕೇಜ್ ಹಾಗೂ ಇತರೆ ಉತ್ತಮ ಗುಣಗಳಿದ್ದರೂ, ರಾಜಕೀಯ ವಿಚಾರಧಾರೆ ಹೊಂದಿಕೆಯಾಗದ ಕಾರಣ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ ಎಂಬ ಅರ್ಥದ ಹೇಳಿಕೆ ಇದೆ.
Telangana: ತೆಲಂಗಾಣದಲ್ಲಿ ಪ್ರಾಂಶುಪಾಲೆಯ ಹತ್ಯೆ:ಇಬ್ಬರು ವಿದ್ಯಾರ್ಥಿಗಳು ವಶಕ್ಕೆ
ಇದೀಗ ಪೋಸ್ಟ್ ಎಲ್ಲಡೆ ವೈರಲ್ ಆಗುತ್ತಿದ್ದು, ಮದುವೆ ಹೊಂದಾಣಿಕೆಗೆ ರಾಜಕೀಯ ಅಭಿಪ್ರಾಯಗಳು ಎಷ್ಟು ಮುಖ್ಯವಾಗುತ್ತದೆ ಎಂಬುದರ ಕುರಿತಾಗಿ ನೆಟ್ಟಿಗರು ಚರ್ಚಿಸುತ್ತಿದ್ದಾರೆ.