Coffee Festival:ಕಾಫಿ ಪ್ರಿಯರಿಗೆ ಗುಡ್‌ನ್ಯೂಸ್; ಬೆಂಗಳೂರಿನಲ್ಲಿ ಕಾಫಿ ಉತ್ಸವ

Spread the love

Coffee Festival: ಕಾಫಿ ಪ್ರಿಯರಿಗೆ ವಿಶೇಷ ಅನುಭವ ನೀಡುವ ಇಂಡಿಯಾ ಇಂಟರ್ನ್ಯಾಷನಲ್ ಕಾಫಿ ಫೆಸ್ಟಿವಲ್ 2027ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.

Coffee Festival
Coffee Festival

Coffee Festival: ಈ ಉತ್ಸವ ಬೆಂಗಳೂರಿನ ಜಯ ಮಹಲ್ ನ ಚಾಮರ ವಜ್ರದಲ್ಲಿ ಫೆಬ್ರವರಿ 26ರಿಂದ 28ರವರೆಗೆ ಮೂರು ದಿನಗಳ ಕಾಲ ಕಾಫಿ ಉತ್ಸವ ನಡೆಯಲಿದೆ.

ಇದು ಭಾರತದ ಪ್ರಮುಖ ಕಾಫಿ ಉತ್ಸವಗಳಲ್ಲಿ ಒಂದಾಗಿದೆ. ಇಲ್ಲಿ ಕಾಫಿ ಬೆಳೆಗಾರರು, ರೋಸ್ಟರ್‌ಗಳು, ಬಾರಿಸ್ಟಾಗಳು, ರಫ್ತುದಾರರು, ಕೆಫೆ ಮಾಲೀಕರು, ಉದ್ಯಮಿಗಳು ಮತ್ತು ಕಾಫಿ ಪ್ರಿಯರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಈ ಉತ್ಸವವು ಕಾಫಿ ಕ್ಷೇತ್ರದ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಂದೇ ವೇದಿಕೆಗೆ ತರುವ ಉದ್ದೇಶವನ್ನು ಹೊಂದಿದೆ.

Telangana: ತೆಲಂಗಾಣದಲ್ಲಿ ಪ್ರಾಂಶುಪಾಲೆಯ ಹತ್ಯೆ:ಇಬ್ಬರು ವಿದ್ಯಾರ್ಥಿಗಳು ವಶಕ್ಕೆ

ವಿಶೇಷ ಅನುಭವ ನೀಡುತ್ತದೆ:

ಇಲ್ಲಿ ವಿವಿಧ ಬಗೆಯ ಭಾರತೀಯ ಕಾಫಿಗಳನ್ನು ಸವಿಯಲು ಅವಕಾಶ ಸಿಗುತ್ತದೆ. ಹಾಗೂ ಕಾಫಿ ತಯಾರಿಕೆ ಮತ್ತು ಬ್ರೂಯಿಂಗ್‌ ಕುರಿತಾಗಿ ತಿಳಿಯಬಹುದು.

ಹಾಗೂ ರೋಸ್ಟಿಂಗ್‌, ಕಪ್ಪಿಂಗ್‌ ಮತ್ತು ಬ್ರೂಯಿಂಗ್‌ ಕುರಿತಾದ ಕಾರ್ಯಾಗಾರಗಳು ಮತ್ತು ಸಂವಾದಗಳು ಕೂಡ ನಡೆಯುತ್ತದೆ.

ಇಲ್ಲಿ ರಾಷ್ಟ್ರಮಟ್ಟದಲ್ಲಿ ಅನೇಕ ಸ್ಪರ್ಧೆಗಳು ನಡೆಯುತ್ತವೆ. ಮತ್ತು ಅವು ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ.ನ್ಯಾಷನಲ್‌ ಬಾರಿಸ್ಟಾ ಚಾಂಪಿಯನ್‌ಶಿಪ್‌, ನ್ಯಾಷನಲ್‌ ಬ್ರೂವರ್ಸ್‌ ಕಪ್‌ ಮತ್ತು ನ್ಯಾಷನಲ್‌ ಲಾಟೆ ಆರ್ಟ್‌ ಚಾಂಪಿಯನ್‌ಶಿಪ್‌ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿದೆ.

ಕಾರ್ಯಕ್ರಮದ ಕುರಿತಾದ ನಿರೀಕ್ಷೆಗಳು:

ಇನ್ನೊಂದು ಕಾರ್ಯಕ್ರಮಕ್ಕೆ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. 120ಕ್ಕೂ ಹೆಚ್ಚು ಕಾಫಿ ಕ್ಷೇತ್ರದ ವಿವಿಧ ಸಂಸ್ಥೆಗಳು ಮತ್ತು ಬ್ರಾಂಡುಗಳು ಭಾಗವಹಿಸಬಹುದು.

SBI RECRUITMENT 

ಈ ಮೂಲಕ ಉದ್ಯಮ ವಲಯದವರಿಗೆ ಅನೇಕ ಅವಕಾಶಗಳು ಸಿಗುವ ಸಾಧ್ಯತೆ ಇರುತ್ತದೆ.
ಕಾಫಿ ಉದ್ಯಮಕ್ಕೆ ಸಂಬಂಧಪಟ್ಟಂತೆ ಹೊಸ ತಂತ್ರಜ್ಞಾನ, ಉಪಕರಣ ಮತ್ತು ಉತ್ಪನ್ನಗಳನ್ನು ಪ್ರದರ್ಶನಗಳ ಮೂಲಕ ಪರಿಚಯಿಸಲಾಗುತ್ತದೆ.

ಹಾಗೂ ಕಾಫಿ ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನೂ ಗ್ರಾಹಕರು ಮತ್ತು ಉದ್ಯಮಿಗಳಿಗೆ ಪರಿಚಯಿಸಲು ಇದು ಪ್ರಮುಖ ವೇದಿಕೆಯಾಗಿದೆ.

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದು

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading