Kalasa:ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಗೋವುಗಳ ಅವಶೇಷಗಳು ಪತ್ತೆಯಾಗಿದೆ.

Kalasa:ತಾಲೂಕಿನ ತೋಟದೂರು ಗ್ರಾಮ ವ್ಯಾಪ್ತಿಯ ಬಾಳೆಹೊಳೆ ಎಸ್ಟೇಟ್ ಸಮೀಪದ ಭದ್ರಾ ನದಿ ದಡದಲ್ಲಿ ಗೋವುಗಳ ಅವಶೇಷಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಭದ್ರನದಿ ದಡದಲ್ಲಿ ಗೋವುಗಳ ತಲೆ ಕಾಲು ಸೇರಿದಂತೆ ಕೆಲವು ಅವಶೇಷಗಳು ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕಳಸ ಪೋಲಿಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಇದನ್ನು ಓದಿ: Belthangady:ಸೋಮನಾಥ್ ನಾಯಕ್,ರಂಜನ್ ರಾವ್ ವಿರುದ್ಧ 1.01 ಕೋಟಿ ವಂಚನೆ ಆರೋಪ
ಘಟನೆಗೆ ಸಂಬಂಧಿಸಿದಂತೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಲಾಗಿದೆ.
ಇದನ್ನು ಓದಿ: Chikkamagaluru BJP:ಹದಗೆಟ್ಟ ರಸ್ತೆ ವಿರುದ್ಧ ಬಿಜೆಪಿ 18 ಕಿ.ಮೀ. ಪಾದಯಾತ್ರೆ
ಘಟನೆ ಕುರಿತಾಗಿ ಸೂಕ್ತ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತನಿಖೆ ಮುಂದುವರೆದಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮುಂದೆ ತಿಳಿದು ಬರಬೇಕಿದೆ.
ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪದ ಜಾಲ ಬಯಲು