Chikkamagaluru: ಕಾಫಿ ನಾಡು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ನಾಟಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ರಾಸಾಯನಿಕಗಳನ್ನು ಬೆರೆಸಿ, ತುಪ್ಪದ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು.

Chikkamagaluru: ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಹಾರ ಕಲಬೆರಿಕೆ ವಿರುದ್ಧ ಅಧಿಕಾರಿಗಳು ನಡೆಸುತ್ತಿರುವ ಪರಿಶೀಲನೆ ನಡುವೆ ಈ ಪ್ರಕರಣ ಬೆಳಕಿಗೆ ಬಂದಿರುವಂತದ್ದು.
ಅಸಲಿ ತುಪ್ಪದ ಬದಲಿಗೆ ಗ್ರಾಹಕರಿಗೆ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.
ಸಾಮಾನ್ಯವಾಗಿ ನೈಜ ತುಪ್ಪ ಖರೀದಿಸುವಾಗ ಬಣ್ಣ ವಾಸನೆ ರುಚಿಯನ್ನು ಆಧರಿಸಿ ಗುಣಮಟ್ಟವನ್ನು ಅಳೆಯಬಹುದು. ಈ ನಂಬಿಕೆಯ ದುರುಪಯೋಗಪಡಿಸಿಕೊಂಡು ನಕಲಿ ಉತ್ಪನ್ನವನ್ನು ಮಾರಲಾಗುತ್ತಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ನಕಲಿ ತುಪ್ಪವನ್ನು ಎಲ್ಲಿ ತಯಾರಿಸಲಾಗುತ್ತಿತ್ತು. ಮತ್ತು ಮಾರುಕಟ್ಟೆ ಪೂರೈಕೆ ಕುರಿತು ಕೂಡ ತನಿಖೆ ಮುಂದುವರೆಯಲಿದೆ.
ಅನುಮಾನಾಸ್ಪದವಾಗಿ ಕಡಿಮೆ ಬೆಲೆಗೆ ದೊರೆಯುವ ತುಪ್ಪ ಅಥವಾ ಯಾವುದೋ ಉತ್ಪನ್ನವನ್ನು ಖರೀದಿಸುವ ಮೊದಲು ಗ್ರಾಹಕರು ಎಚ್ಚರ ವಹಿಸಬೇಕು. ಹಾಗೂ ಚಿಕ್ಕಮಗಳೂರಿನ ಈ ಪ್ರಕರಣದ ಕುರಿತಾಗಿ ಇನ್ನಷ್ಟು ತನಿಖೆ ನಡೆಯಲಿದೆ