Sowcar Janaki Death: ದಕ್ಷಿಣ ಭಾರತದ ಹಿರಿಯ ನಟಿ ಹಾಗೂ ಪದ್ಮಶ್ರೀ ಪುರಸ್ಕೃತ ಸೌಕಾರ್ ಜಾನಕಿ(94) ಇಂದು ಶುಕ್ರವಾರ(ಆಗಸ್ಟ್ 21) ಮಧ್ಯಾಹ್ನ ನಿಧನರಾಗಿದ್ದಾರೆ.

Sowcar Janaki Death: ನಟಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ 1:59ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ನಿಧನದ ಸುದ್ದಿಯನ್ನು ನಾದಿಗರ್ ಸಂಗಂ ಅಧ್ಯಕ್ಷ ನಾಸರ್ ಖಚಿತಪಡಿಸಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಏಳು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿದ್ದ ಸಿನಿ ಪಯಣ ಇಂದಿಗೆ ಅಂತ್ಯಗೊಂಡಿದೆ.
ಜಾನಕೀ ತಮ್ಮ ಸುದೀರ್ಘ ಜೀವನದಲ್ಲಿ ತಮಿಳು ತೆಲುಗು ಕನ್ನಡ ಹಾಗೂ ಮಲಯಾಳಂ ಸೇರಿದಂತೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಾಯಕಿಯಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ ಜಾನಕಿ ಪೋಷಕ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಗೆದ್ದಿದ್ದರು.
ಇದನ್ನು ಓದಿ: ಆಗಸ್ಟ್ 21ರ ರಾಶಿ ಭವಿಷ್ಯ
1950ರಲ್ಲಿ ಶವ್ಕಾರು ಎಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ ನಟಿಗೆ ಸೌಕಾರ್ ಎಂಬ ಹೆಸರು ಜನಪ್ರಿಯವಾಯಿತು. ಹಾಗೂ 1952ರಲ್ಲಿ ವಲಯಾಪತಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆದರು.
ದಿಗ್ಗಜ ನಟರಾದ ಡಾಕ್ಟರ್ ರಾಜಕುಮಾರ್, ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರ ರಾವ್, ಎನ್ ಟಿ ರಾಮರಾವ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ಜಾನಕಿ.
ಕನ್ನಡದಲ್ಲಿ ಅವರು ‘ದೇವಕನ್ನಿಕಾ’, ‘ಭಾಗ್ಯಚಕ್ರ’, ‘ಸದರಮೆ’, ‘ಭಾಗ್ಯೋದಯ’, ‘ರತ್ನಗಿರಿ ರಹಸ್ಯ’, ‘ಮಹಿಷಾಸುರ ಮರ್ದಿನಿ’, ‘ಸಾಕು ಮಗಳು’, ‘ನವಕೋಟಿ ನಾರಾಯಣ’ ಹಾಗೂ ‘ಶಬ್ದವೇದಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಇಂತಹ ಮೇರು ನಟಿಯನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ಹೊರಲಾರದ ಭಾರ. ಅವರ ಕೊಡುಗೆ ಹಾಗೂ ಸೇವೆ ಮುಂದೆಯೂ ನೆನಪಿನಲ್ಲಿ ಉಳಿಯುವಂತದ್ದು .
ಇದನ್ನು ಓದಿ: ಮಲೆನಾಡು ಸೂಕ್ಷ್ಮ ಪ್ರದೇಶ: ಅಕ್ಷೇಪಣೆ ಸಲ್ಲಿಸಲು ಈ ಅರ್ಜಿಯನ್ನು ಬಳಸಿ.