Ladakh: ಇತ್ತೀಚಿಗೆ ಲಡಾಕ್ ನ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಮಹಿಳೆಯುವಾಗ ನಡೆಸುವ ವಿಡಿಯೋ ವೈರಲ್ ಆಗಿತ್ತು.

Ladakh: ನಾವು Gen Z ಈ ರೀತಿಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿದ್ದರು. ಈ ವಿಡಿಯೋ ವೈರಲ್ಲಾದ ಬೆನ್ನಲ್ಲೇ ಇದೀಗ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ.
ಇದೀಗ ಮಹಿಳೆ ಭಾರತೀಯ ಸೇನೆ, ಲಡಾಕ್ ಪೊಲೀಸ್ ಮತ್ತು ಜಮ್ಮು ಕಾಶ್ಮೀರ ಪೊಲೀಸರಿಗೆ ಕ್ಷಮೆ ಯಾಚಿಸಿದ್ದಾರೆ.
ಇನ್ನು ವಿಡಿಯೋದಲ್ಲಿ ಮಹಿಳೆಯರು ರಸ್ತೆ ಸಂಚಾರವನ್ನು ತಡೆದು ಪ್ರವಾಸಿಗರನ್ನು ಹಲವು ಗಂಟೆಗಳ ಕಾಲ ಕಾಯಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನು ಓದಿ: ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ಜಾಲ ಪತ್ತೆ
ವರದಿಗಳ ಪ್ರಕಾರ ಈ ಘಟನೆಯು ದ್ರಾಸ್ ಪ್ರದೇಶದ ಮಿನಿಮಾರ್ಗ್ ಚೆಕ್‌ಪೋಸ್ಟ್ ಬಳಿ ನಡೆದಿತ್ತು. ಹಾಗೂ ಕಾರ್ಗಿಲ್ ವಿಜಯ್ ದಿವಸ್ ಗೆ ಸಂಬಂಧಪಟ್ಟಂತೆ ಭದ್ರತಾ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ನಿರ್ಬಂಧವನ್ನು ಹೇರಲಾಗಿತ್ತು.
ಇಲ್ಲಿ ಮಿನಿಮಾರ್ಗ್–ಜೋಜಿಲಾ–ಸೋನಮಾರ್ಗ್ ಮಾರ್ಗದಲ್ಲಿ ಈ ಸಂಚಾರವನ್ನು ನಿರ್ವಂಧಿಸಲಾಗಿತ್ತು. ಹಾಗೂ ಈ ಕಾರಣದಿಂದಾಗಿ ಪ್ರವಾಸಿಗರು ಕೆಲವು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಮಹಿಳೆ ಹೇಳಿಕೆಯ ಪ್ರಕಾರ ಐದರಿಂದ ಆರು ಗಂಟೆಗಳ ಕಾಲ ಕಾಯಬೇಕಾಯಿತು. ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಮತ್ತಷ್ಟು ಸಮಯ ಕಾಯಬೇಕು ಎಂದು ತಿಳಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡು ಈ ರೀತಿಯಾಗಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಓಮರ್ ಅಬ್ದುಲ್ಲ ಪ್ರತಿಕ್ರಿಯೆ:
ವಿಡಿಯೋ ವೈರಲ್ ಆದ ಬಳಿಕ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.
We are Gen Z’ ಎಂಬ ಮಾತು, ಹಿಂದಿನ ಕಾಲದ ‘ನನ್ನ ತಂದೆ ಯಾರೆಂದು ಗೊತ್ತೇ?’ ಎಂಬುದನ್ನು ನೆನಪಿಸಿತು ಎಂದಿದ್ದಾರೆ.
ಹಾಗೂ ಸಣ್ಣ ಪುಟ್ಟ ವಿಚಾರಗಳಿಗೆ ತಾವು Gen Z ಎಂದು ಬಳಕೆ ಮಾಡುವುದು ಯುವ ಜನತೆಯ ಕುರಿತಾಗಿ ಇರುವಂತಹ ಸಕಾರಾತ್ಮಕ ಅಭಿಪ್ರಾಯಗಳಿಗಿಂತ ಎಚ್ಚರಿಸಿದ್ದಾರೆ.
ಇದನ್ನು ಓದಿ: ಹಿರಿಯ ನಟಿ ಸೌಕಾರ್ ಜಾನಕಿ ನಿಧನ
Ladakh: ಸೇನಾಧಿಕಾರಿಗಳ ಪ್ರತಿಕ್ರಿಯೆ:
ಈ ಕುರಿತಾಗಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಸೇರಿದಂತೆ ಹಲವು ನಿವೃತಾಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ.
ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್ ಮಾತನಾಡುತ್ತಾ, ಸೈನಿಕರು ಕೂಡ ದೇಶಕ್ಕೆ ತೆರಿಗೆ ಪಾವತಿ ಮಾಡುತ್ತಾರೆ, ಕಠಿಣ ಪರಿಸ್ಥಿತಿಗಳನ್ನು ಕೂಡ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.
ಹಾಗೂ ಇನ್ನೋರ್ವ ಅಧಿಕಾರಿ ಲಡಾಕ್ ಪ್ರವಾಸಿಗರಿಗೆ ಸಿಯಾಚಿನ್ ನಲ್ಲಿ ಒಂದು ತಿಂಗಳ ಕರ್ತವ್ಯದ ಅನುಭವ ನೀಡುವ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಳೆ ಕ್ಷಮೆ ಯಾಚನೆ:
ಇನ್ನು ಈ ವಿವಾದ ತೀವ್ರಗೊಂಡಂತೆ ಮಹಿಳೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ತಾವು ಸೇನೆಯ ಕುರಿತಾಗಿ ಗೌರವ ಹೊಂದಿದ್ದು, ಸೈನಿಕರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತು ಹಲವು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿಯಿಂದ ನಿರಾಶೆಯಲ್ಲಿ ಮಾತುಗಳನ್ನು ಮಾಡಿದ್ದೇನೆ. ಹಾಗೂ ವಿಡಿಯೋ ಇಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
ಮತ್ತು ಮಹಿಳೆ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್, ಲಡಾಖ್ ಪೊಲೀಸ್ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೂ ಕ್ಷಮೆ ಕೇಳಿದ್ದಾರೆ. ಸೈನಿಕರನ್ನು ಉದ್ದೇಶಿಸಿ, ತಮ್ಮ ತಪ್ಪನ್ನು ಕ್ಷಮಿಸುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಆಗಸ್ಟ್ 21ರ ರಾಶಿ ಫಲಗಳು ಈ ರೀತಿ ಇವೆ.