Belthangady:ಸೋಮನಾಥ್ ನಾಯಕ್,ರಂಜನ್ ರಾವ್ ವಿರುದ್ಧ 1.01 ಕೋಟಿ ವಂಚನೆ ಆರೋಪ

Spread the love

Belthangady:ಜಮೀನಿನ ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಮಾಹಿತಿ ನೀಡಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಸೋಮನಾಥ್ ನಾಯಕ್ ಮತ್ತು ರಂಜನ್ ರಾವ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Belthangady: ಕುವೆಟ್ಟು ಗ್ರಾಮದ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೋಮನಾಥ್ ನಾಯಕ್ ಹಾಗೂ ಸದಸ್ಯ ಮತ್ತು ಹೋರಾಟಗಾರ ರಂಜನ್ ರಾವ್ ಎರ್ಡೂರು ವಿರುದ್ಧ ಪ್ರಕರಣ ದಾಖಲಾಗಿರುವಂಥದ್ದು.

Belthangady fraud case involving alleged ₹1.01 crore land transaction
Belthangady fraud case involving alleged ₹1.01 crore land transaction

ಮಂಗಳೂರು ನಗರದ ಕೊಟ್ಟಾರ ಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂಟಿಲ (61) ನೀಡಿದ ದೂರಿನ ಆಧಾರದ ಮೇಲೆ ಆಗಸ್ಟ್ 19ರಂದು ಪ್ರಕರಣ ದಾಖಲಿಸಲಾಗಿದೆ.

ದೂರು ನೀಡಲು ಕಾರಣ:

ದೂರಿನ ಪ್ರಕಾರ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಎರ್ಡೂರು ಮಾಲಿಕತ್ವದ ಸರ್ವೆ ನಂಬರ್ 85/3ಎ ಜಮೀನಿಗೆ ಸಂಬಂಧಿಸಿದಂತೆ 0.28.50 ಎಕರೆ ಜಾಗದ ಕುರಿತು 2025ರ ಅಕ್ಟೋಬರ್ 4ರಂದು ಕರಾರು ಮಾಡಿಕೊಳ್ಳಲಾಗಿತ್ತು.

ಇದನ್ನು ಓದಿ: Ladakh: ‘Gen Z’ ವಿವಾದ: ವೈರಲ್ ವಿಡಿಯೋ ಬೆನ್ನಲ್ಲೇ ಮಹಿಳೆ ಕ್ಷಮೆಯಾಚನೆ*

ಈ ಜಮೀನಿನ ಪಕ್ಕದಲ್ಲಿದ್ದ 0.70.25 ಎಕರೆ ಜಾಗವನ್ನು ‘ಕುಮ್ಕಿ ಜಮೀನು’ ಎಂದು ಹೇಳಿ, ಮುಂದಿನ ದಿನಗಳಲ್ಲಿ ಅದನ್ನು ದರ್ಖಾಸ್ತು ಮಾಡಿಸಿ ಒಟ್ಟು 0.98.75 ಎಕರೆ ಜಮೀನನ್ನು ನೋಂದಣಿ ಮಾಡಿಕೊಡುವುದಾಗಿ ಭರವಸೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಜಮೀನನ್ನು ಒಟ್ಟು ₹90 ಲಕ್ಷಕ್ಕೆ ನೀಡುವುದಾಗಿ ಕರಾರು ಮಾಡಿಕೊಂಡಿದ್ದರೂ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿ ಒಟ್ಟು ₹1,00,61,250 ಹಣವನ್ನು ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಹಣ ವರ್ಗಾವಣೆ

ದೂರಿನ ವಿವರಗಳ ಪ್ರಕಾರ, ರಂಜನ್ ರಾವ್ ಎರ್ಡೂರು ಅವರ ಖಾತೆಗೆ ₹24 ಲಕ್ಷ, ಸೋಮನಾಥ್ ನಾಯಕ್ ಅವರ ಖಾತೆಗೆ ₹12.61 ಲಕ್ಷ ಹಾಗೂ ಅವರ ಪತ್ನಿ ಕೆ. ವಿದ್ಯಾನಾಯಕ್ ಅವರ ಖಾತೆಗೆ ₹19 ಲಕ್ಷ ಸೇರಿದಂತೆ ಹಲವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಒಟ್ಟು ₹1,00,61,250 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ 0.70.25 ಎಕರೆ ಜಮೀನು ಕುಮ್ಕಿ ಭೂಮಿಯಲ್ಲ ಎಂಬುದು ಹಾಗೂ ಅದನ್ನು ದರ್ಖಾಸ್ತು ಮಾಡಿಸಿಕೊಳ್ಳುವುದು ಕಷ್ಟಸಾಧ್ಯ ಎಂಬುದು ತಿಳಿದಿದ್ದರೂ, ಆರೋಪಿಗಳು ಜಾಗವನ್ನು ನೀಡುವುದಾಗಿ ಹೇಳಿ ಹಣ ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನು ಓದಿ: ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ಜಾಲ ಬಯಲು

ಜಮೀನು ನೋಂದಣಿ

ಇದೇ ವೇಳೆ, 0.70.25 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಸರ್ಕಾರಿ ಜಮೀನು ಅತಿಕ್ರಮಿಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಭೂಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ 2026ರ ಮೇ 14ರಂದು 28 ಸೆಂಟ್ಸ್ ಕೃಷಿ ಜಮೀನನ್ನು ದಸ್ತಾವೇಜು ಸಂಖ್ಯೆ 693/2026-27ರಂತೆ ನೋಂದಣಿ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಿನಲ್ಲಿ, ಸರ್ಕಾರಿ ಜಮೀನನ್ನು ಒಳಗೊಂಡಂತೆ 0.98.75 ಎಕರೆ ಜಮೀನು ನೀಡುವುದಾಗಿ ಹೇಳಿ ₹90 ಲಕ್ಷಕ್ಕೆ ಕರಾರು ಮಾಡಿಕೊಂಡರೂ, ಒಟ್ಟು ₹1.01 ಕೋಟಿಗೂ ಅಧಿಕ ಹಣ ಪಡೆದು ವಂಚಿಸಲಾಗಿದೆ ಎಂದು ಶಶಿಧರ ಅಚ್ಯುತ ತೋಟಂಟಿಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣವನ್ನು BNS 2023ರ ಸೆಕ್ಷನ್ 318(4) ಹಾಗೂ 3(5) ಅಡಿಯಲ್ಲಿ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿ ತಿಳಿಸಿದೆ.

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading