Dahi Tadka: ಮೊಸರಿನಿಂದ 10 ನಿಮಿಷದಲ್ಲಿ ರುಚಿಯಾದ ದಹಿ ತಡ್ಕಾ

Spread the love

Dahi Tadka: ಮೊಸರಿನಿಂದ 10 ನಿಮಿಷದಲ್ಲಿ ರುಚಿಯಾದ ದಹಿ ತಡ್ಕಾ

Dahi tadka
Dahi tadka

Dahi Tadka: ಯಾವುದೇ ಕಾಲ ಇರಲಿ, ಊಟದ ಜೊತೆ ಮೊಸರಿದ್ದರೆ ಊಟದ ರುಚಿಯೇ ಬೇರೆ. ಪ್ರತಿದಿನ ಕೇವಲ ಮೊಸರನ್ನೇ ಸೇವಿಸುವ ಬದಲು, ದಹಿ ತಡ್ಕಾ ಒಮ್ಮೆ ತಯಾರಿಸಿ ನೋಡಿ. ಅನ್ನ, ರೊಟ್ಟಿ, ಚಪಾತಿ, ಪುಲ್ಕಾ ಜೊತೆ ಸವಿಯಲು ಇದು ಒಳ್ಳೆಯ ಕಾಂಬಿನೇಷನ್.

ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರನ್ನು ತೆಗೆದುಕೊಂಡು ಚೆನ್ನಾಗಿ ಕದಿಯಬೇಕು. ಮೊಸರು ಬಹಳ ದಪ್ಪವಾಗಿದ್ದರೆ, ಸ್ವಲ್ಪ ನೀರು ಸೇರಿಸಿ ಹದ ಮಾಡಿಕೊಳ್ಳಬಹುದು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಅರಿಶಿಣವನ್ನು ಸೇರಿಸಬೇಕು.

ನಂತರ ಒಂದು ಸಣ್ಣ ಬಾಣಲೆಯನ್ನು ಒಲೆಯ ಮೇಲಿಟ್ಟು, ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು ಹಾಕಿಕೊಳ್ಳಬೇಕು

ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ, ಈರುಳ್ಳಿ ಸ್ವಲ್ಪ ಮೃದುವಾಗುವ ತನಕ ಹುರಿಯಬೇಕು. ಅನಂತರ, ಅವಶ್ಯಕತೆ ಇದ್ದಲ್ಲಿ ಸ್ವಲ್ಪ ಮೆಣಸಿನ ಪುಡಿ ಹಾಗೂ ಗರಂ ಮಸಾಲೆ ಪುಡಿ ಹಾಕಿದರೆ ರುಚಿ ಚೆನ್ನಾಗಿ ಬರುತ್ತದೆ.

ಒಗ್ಗರಣೆ ಸಿದ್ಧವಾದ ಬಳಿಕ ಗ್ಯಾಸ್ ಆಫ್ ಮಾಡಿಕೊಂಡು, ಇದಕ್ಕೆ ತಯಾರಿಸಿ ಇಟ್ಟಂತಹ ಮೊಸರನ್ನು ಹಾಕಿ ಚೆನ್ನಾಗಿ ಕಲಸಬೇಕು. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ಘಮ ಬರುತ್ತದೆ.

ದಹಿ ತಡ್ಕಾ ಬಿಸಿ ಅನ್ನದ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಜೊತೆಗೆ ಪುಲ್ಕಾ ಅಥವಾ ಪರೋಟಾ, ಚಪಾತಿ, ರೊಟ್ಟಿ ಜೊತೆ ಕೂಡ ತಿನ್ನಬಹುದು. ಬೇಸಿಗೆಯಲ್ಲಿ ಲಘು ಊಟ ಮಾಡಲು ಇದು ಉತ್ತಮ ಆಯ್ಕೆ.

Read this: Basale Soppu: ಬಸಳೆ ಸೊಪ್ಪು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ?*

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading