Dharmasthala: ಧರ್ಮಸ್ಥಳ ಸಂಘದ ವಿರುದ್ಧದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ

Spread the love

Dharmasthala: SKDRDP ವಿರುದ್ಧದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ; ಆರೋಪಗಳಿಗೆ ಸಾಕ್ಷ್ಯಾಧಾರಗಳಿಲ್ಲ ಎಂದ ನ್ಯಾಯಪೀಠ

SKDRDP
SKDRDP

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ವಿರುದ್ಧ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸಂಸ್ಥೆಯ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ಸೂಕ್ತವಾದ ಸಾಕ್ಷಿಗಳಿಲ್ಲ ಎಂದು ನಾಗರಿಕ ಸೇವಾ ಟ್ರಸ್ಟ್‌ನ ರಂಜನ್ ರಾವ್ ಯೆಡೂರು ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಎಸ್ಕೆಡಿಆರ್ಡಿಪಿ ಸಂಸ್ಥೆಯು ಮನಿ ಲೆಂಡಿಂಗ್ ಕಾಯ್ದೆಯನ್ನು ಉಲ್ಲಂಘಿಸಿದೆ ಹಾಗೂ ವಂಚನೆ ಎಸಗುತ್ತಿದೆ ಎಂದು ಆರೋಪ ಮಾಡಿದ್ದರು.

ಹೈಕೋರ್ಟ್‌ನಲ್ಲೂ ಅರ್ಜಿ ರದ್ದು:

ಈ ಪ್ರಕರಣದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ, ಈ ದೂರಿನ ವಿರುದ್ಧ SKDRDP ಸಂಸ್ಥೆಯು ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, 2026ರ ಜನವರಿ 9ರಂದು ರಂಜನ್ ರಾವ್ ಅವರ ದೂರಿನ ಅರ್ಜಿಯನ್ನು ರದ್ದುಪಡಿಸಿ, ಸಂಸ್ಥೆಯ ಪರವಾಗಿ ತೀರ್ಪು ನೀಡಿತು.

ಇದೀಗ ಸುಪ್ರೀಂ ಕೋರ್ಟ್‌ನಲ್ಲೂ ವಜಾ ಆಗಿರುವಂತಾಗಿದೆ. ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ರಂಜನ್ ರಾವ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆರೋಪಗಳಿಗೆ ಸೂಕ್ತವಾದ ಸಾಕ್ಷಿಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದರೊಂದಿಗೆ, SKDRDP ವಿರುದ್ಧದ ಈ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯದಿಂದ ಆರಂಭವಾದ ಕಾನೂನು ಪ್ರಕ್ರಿಯೆ ಕರ್ನಾಟಕ ಹೈಕೋರ್ಟ್ ಮೂಲಕ ಸುಪ್ರೀಂ ಕೋರ್ಟ್ ತಲುಪಿ, ಇದೀಗ ಅಲ್ಲಿಯೂ ಕೂಡ ವಜಾಗೊಂಡಿರುವಂತಾಗಿದೆ.

Read this: Basale Soppu: ಬಸಳೆ ಸೊಪ್ಪು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ?

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading