Kalasa: ರಸ್ತೆ ಸಮಸ್ಯೆಯಿಂದ ಮದುವೆ ಸಂಬಂಧವೇ ನಿರಾಕರಣೆ

Kalasa: ಒಂದು ಗ್ರಾಮಕ್ಕೆ ಒಂದು ಉತ್ತಮ ರಸ್ತೆ ಮೂಲಭೂತ ಸೌಕರ್ಯ ಎಷ್ಟು ಮುಖ್ಯ ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗ್ರಾಮದ ಪರಿಸ್ಥಿತಿಯೇ ಸಾಕ್ಷಿ.
ಕಳಸ ತಾಲೂಕಿನ ಎಡೆಯೂರು, ಮರಸಣಿಗೆ, ಮಾವಿನಕೆರೆ, ಕೆ.ಕೆಳಗೂರು ಸೇರಿದಂತಹ ಸುತ್ತಮುತ್ತಲಿನ ಅನೇಕ ಗ್ರಾಮಗಳ ರಸ್ತೆಗಳು ಹದಗೆಟ್ಟು ಹೋಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮದುವೆ ಸಂಬಂಧ ಇದೀಗ ತಪ್ಪಿ ಹೋಗಿದೆ. ರಸ್ತೆ ಸರಿ ಇಲ್ಲದ ಕಾರಣ ಆ ಪ್ರದೇಶಕ್ಕೆ ಹೆಣ್ಣು ಕೊಡುವುದಿಲ್ಲ ಎಂಬ ಕಾರಣವನ್ನು ಸಂಬಂಧಿಕರು ಕೊಟ್ಟಿದ್ದಾರೆ. ಇದರಿಂದ ಇನ್ನಷ್ಟು ಅಸಮಾಧಾನ ಗ್ರಾಮಸ್ಥರಲ್ಲಿ ಮೂಡಿರುವಂತದ್ದು.
ರಸ್ತೆಗೆ ಸುಮಾರು 20 ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ನಂತರ ರಸ್ತೆ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ. ನಿರಂತರ ಮಳೆ, ವಾಹನಗಳ ದಟ್ಟಣೆಯಿಂದ ರೋಡು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಅಲ್ಲಲ್ಲಿ ದೊಡ್ಡ ಗುಂಡಿಗಳು ಕಾಣಿಸಿಕೊಳ್ಳುವಂತಾಗಿದೆ.
450–500 ಕುಟುಂಬಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಕೆಲಸಗಳಿಗೆ ತೆರಳುವವರಿಗೆ ರಸ್ತೆಯ ದುಸ್ಥಿತಿಯು ದೊಡ್ಡ ಸವಾಲಿನ ವಿಷಯವಾಗಿದೆ.
Read this: Dharmasthala: ಧರ್ಮಸ್ಥಳ ಸಂಘದ ವಿರುದ್ಧದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ